ನಮ್ಮ ದೇಶದ ಕಲಾವಿದ ರಾಜಾ ರವಿವರ್ಮ: ಅನುರಾಧಾ

KannadaprabhaNewsNetwork |  
Published : Apr 16, 2024, 01:06 AM IST
ವಿಜಯಪುರದಲ್ಲಿ ಕಲಾವಿದರ ನೇತೃತ್ವದಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆಯ ಆಚರಿಸಲಾಯಿತು. | Kannada Prabha

ಸಾರಾಂಶ

ವಿಜಯಪುರ: ಜಗತ್ಪ್ರಸಿದ್ಧ ಕಲಾವಿದ ಲಿಯೋನಾರ್ಡ್ ಡಾ ವಿಂಚಿ ಕೇವಲ ಒಬ್ಬ ಕಲಾವಿದ ಅಲ್ಲದೆ ಪ್ರಖ್ಯಾತ ವಾಸ್ತುಶಿಲ್ಪಿ, ಅಂಗ ರಚನಾ ತಜ್ಞ, ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೆ ಆದ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದ ಎಂದು ಡಾ. ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅನುರಾಧಾ ಟಂಕಸಾಲಿ ಬಣ್ಣಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ:

ಜಗತ್ಪ್ರಸಿದ್ಧ ಕಲಾವಿದ ಲಿಯೋನಾರ್ಡ್ ಡಾ ವಿಂಚಿ ಕೇವಲ ಒಬ್ಬ ಕಲಾವಿದ ಅಲ್ಲದೆ ಪ್ರಖ್ಯಾತ ವಾಸ್ತುಶಿಲ್ಪಿ, ಅಂಗ ರಚನಾ ತಜ್ಞ, ವೈದ್ಯಕೀಯ ಕ್ಷೇತ್ರದಲ್ಲಿ ತನ್ನದೆ ಆದ ಸೇವೆ ಸಲ್ಲಿಸಿದ ಶ್ರೇಷ್ಠ ಕಲಾವಿದ ಎಂದು ಡಾ. ಫ.ಗು.ಹಳಕಟ್ಟಿ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಅನುರಾಧಾ ಟಂಕಸಾಲಿ ಬಣ್ಣಿಸಿದರು.

ನಗರದಲ್ಲಿ ಕಲಾವಿದರ ನೇತೃತ್ವದಲ್ಲಿ ವಿಶ್ವ ದೃಶ್ಯಕಲಾ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹಾಗೆ ನಮ್ಮ ದೇಶದ ಪ್ರಖ್ಯಾತ ಕಲಾವಿದ ರಾಜಾ ರವಿವರ್ಮ ಅವರ ಜನ್ಮದಿನವನ್ನು ನಮ್ಮ ದೇಶದ ಕಲಾ ದಿನವನ್ನಾಗಿ ಆಚರಿಸಬೇಕು ಎಂದು ಸಲಹೆ ನೀಡಿದರು.ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ ಬಜಂತ್ರಿ ಮಾತನಾಡಿ, ಕಲಾವಿದರು ಸರ್ವ ಸ್ವತಂತ್ರರು ಕವಿಕಾಣದ್ದನ್ನು ಕಲಾವಿದ ಕಂಡ ಹಾಗೆ ಸಮಾಜಕ್ಕೆ ತನ್ನದೆ ದೃಶ್ಯ ಭಾಷೆಯಲ್ಲಿ ಸಂದೇಶಗಳನ್ನು ನೀಡುತಿದ್ದಾರೆ. ಇಂತವರು ಸಮಾಜದ ನಿಜವಾದ ಆಸ್ತಿ ಎಂದರು.

ಹಿರಿಯ ಕಲಾವಿದ ಪಿ.ಎಸ್.ಕಡೆಮನಿ ಮಾತನಾಡಿ, ಜಗತ್ತು ಕಂಡ ಶ್ರೇಷ್ಠ ಕಲಾವಿದ ಲಿಯೋನಾರ್ಡ್ ಡಾ.ವಿಂಚಿ ಅವರ ಜನ್ಮದಿನ ವಿಶ್ವ ದೃಶ್ಯಕಲಾ ದಿನಾಚರಣೆಯು ಜಗತ್ತಿನ ಎಲ್ಲ ದೇಶಗಳಲ್ಲಿ ಆಚರಿಸುತ್ತಿದೆ. ನಾವೆಲ್ಲರು ಕಲಾವಿದರಾಗಿ ಅವರ ಆದರ್ಶಗಳನ್ನು ಪಾಲಿಸಿ ಉತ್ತಮ‌ ಕಲಾವಿದರಾಗಲು ಸಹಕಾರಿ ಯಾಗುತ್ತದೆ ಎಂದು ವಿವರಿಸಿದರು.

ಚಿತ್ರ ರಚಿಸುವ ಮೂಲಕ ಹಿರಿಯ ಕಲಾವಿದ ಎಸ್.ಟಿ ಕೆಂಭಾವಿ ಕಾರ್ಯಕ್ರಮ ಉದ್ಘಾಟಿಸಿದರು. ಹಿರಿಯ ಕಲಾವಿದ ವಿದ್ಯಾಧರ ಸಾಲಿ‌ ಸ್ವಾಗತಿಸಿ, ಕ್ಯಾನ್ವಾಸ್‌ ಆರ್ಟ್ ಫೌಂಡೇಶನ್ ಕಾರ್ಯದರ್ಶಿ ರಮೇಶ ಚವ್ಹಾಣ, ಪಿ.ಎಸ್.ಕಡೆಮನಿ, ವಿ.ವಿ.ಹಿರೇಮಠ, ಬಿ.ಎಸ್.ಪಾಟೀಲ್, ಡಾ.ಶಶಿಕಲಾ ಹೂಗಾರ, ಶಿವಾನಂದ ಅಥಣಿ, ನಯಿಮ್ ನಾಗಠಾಣ, ಸಿದ್ದು ಬಳುಲಗಿಡದ, ಯಾಮಿನಿ ಶಹಾ, ರವಿ ಮುದಗಲ್ಲ, ಮಹಾದೇವಿ ಕೊಪ್ಪದ, ಮದನ ವಗ್ಯಾನವರ, ಲಿಂಗರಾಜ ಕಾಚಾಪೂರ, ದಾಕ್ಷಾಯಣಿ ಇಮನಾದ, ಶಬ್ಬಿರ ನದಾಫ್, ರಮೇಶ ಚವ್ಹಾಣ, ವಿಶ್ವನಾಥ ಅಗಸರ, ಸಚಿನ ಚವ್ಹಾಣ ಮುಂತಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ