ನಮ್ಮ ಮಹಾಕಾವ್ಯಗಳೇ ನಮಗೆ ಗುರುಗಳಿದ್ದಂತೆ

KannadaprabhaNewsNetwork | Published : Jul 29, 2024 12:48 AM

ಸಾರಾಂಶ

ಭಗವದ್ಗೀತೆ, ರಾಮಾಯಣ, ಮಹಾಭಾರತಗಳು ನಮಗೆ ಗುರುವಿನ ಸ್ಥಾನದಲ್ಲಿವೆ. ಅವುಗಳಿಂದ ಎಷ್ಟು ಅರಿತರೂ ಸಾಲದು ಮತ್ತು ಜ್ಞಾನದ ದಾಹ ನೀಗದು. ಸ್ವಾಮಿ ವಿವೇಕಾನಂದರಿಗೆ ಶ್ರೀರಾಮಕೃಷ್ಣ ಪರಹಂಸರು ಮತ್ತು ಮಾತಾಜಿ ಅವರು ಗುರುವಾಗಿ ದೊರೆತಿದ್ದರು ಎಂದು ರಾಷ್ಟ್ರ ಸೇವಿಕಾ ಸಮಿತಿಯ ಭಗವದ್ಗೀತೆ ಪ್ರಚಾರಕರಾದ ಸುಧಾ ಸುರೇಶ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಯಾವುದೇ ಕ್ಷೇತ್ರದಲ್ಲಿ ಗುರುವಿನ ಮಾರ್ಗದರ್ಶನವಿಲ್ಲದೆ ಏನನ್ನೂ ಸಾಧಿಸಲಾಗದು. ಗುರುವಿಗೆ ಅತ್ಯಂತ ಶ್ರೇಷ್ಠ ಸ್ಥಾನವನ್ನು ಕೊಡಲಾಗಿದೆ. ವ್ಯಾಸರು ಶ್ರೀ ಶಂಕರಾಚಾರ್ಯರು ಅನೇಕ ದಾಸವರೇಣ್ಯರ ಸಂದೇಶಗಳು ಇಂದು ರಾಷ್ಟ್ರದಲ್ಲಿ ಧಾರ್ಮಿಕತೆ ಮತ್ತು ಸಂಸ್ಕೃತಿ ಉಳಿದು ಬೆಳೆಯಲು ಕಾರಣವಾಗಿದೆ ಎಂದು ರಾಷ್ಟ್ರ ಸೇವಿಕಾ ಸಮಿತಿಯ ಭಗವದ್ಗೀತೆ ಪ್ರಚಾರಕರಾದ ಸುಧಾ ಸುರೇಶ್‌ ಎಂದರು.

ಅವರು ರಾಷ್ಟ್ರ ಸೇವಿಕಾ ಸಮಿತಿ ನಗರದಲ್ಲಿನ ಚಾಮುಂಡೇಶ್ವರಿ ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಗುರುವಂದನಾ ಕಾರ್ಯಕ್ರಮದಲ್ಲಿ ಮಾತನಾಡಿ, ಭಗವದ್ಗೀತೆ, ರಾಮಾಯಣ, ಮಹಾಭಾರತಗಳು ನಮಗೆ ಗುರುವಿನ ಸ್ಥಾನದಲ್ಲಿವೆ. ಅವುಗಳಿಂದ ಎಷ್ಟು ಅರಿತರೂ ಸಾಲದು ಮತ್ತು ಜ್ಞಾನದ ದಾಹ ನೀಗದು. ಸ್ವಾಮಿ ವಿವೇಕಾನಂದರಿಗೆ ಶ್ರೀರಾಮಕೃಷ್ಣ ಪರಹಂಸರು ಮತ್ತು ಮಾತಾಜಿ ಅವರು ಗುರುವಾಗಿ ದೊರೆತಿದ್ದರು ಎಂದರು.

ಉಪನ್ಯಾಸಕಿ ಹಾಗೂ ಸಮಿತಿ ಸದಸ್ಯೆ ಸುಧಾ ಕಲ್ಯಾಣ್ ಗುರು ಪೌರ್ಣಮಿ ಮಹತ್ವ ಮತ್ತು ಆಚರಣೆ ಹಾಗೂ ಗುರುವಂದನೆ ಕಾರ್ಯಕ್ರಮದ ಮಹತ್ವವನ್ನು ಗುರುಗಳ ಮಾರ್ಗದರ್ಶನ ಹಾಗೂ ಸಂದೇಶಗಳು ಇಂದು ನಮಗೆ ಎಷ್ಟು ಪ್ರಸ್ತುತವಾಗಿದೆ. ರಾಜ ಮಹಾರಾಜರು ಗುರುವಿಗೆ ನೀಡುತ್ತಿದ್ದ ಮಹತ್ವ ಹಾಗೂ ಇತರ ಸಂಪೂರ್ಣ ಮಾಹಿತಿ ನೀಡಿದರು.

ತಾಲೂಕು ಕಾರ್ಯವಾಹಿಕ ಶ್ವೇತಾ ಮಾತನಾಡಿ, ರಾಷ್ಟ್ರ ಸೇವಿಕಾ ಸಮಿತಿಯು ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಡಿಯಲ್ಲಿ ಕಾರ್ಯನಿರ್ವಹಿಸುವ ಒಂದು ಸಮಿತಿಯಾಗಿದ್ದು ಜನರಲ್ಲಿ ರಾಷ್ಟ್ರ ಅಭಿಮಾನ ಮತ್ತು ನಮ್ಮ ಸಂಸ್ಕೃತಿ ಬಗ್ಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶವನ್ನು ಹೊಂದಿದೆ. ನಿಮಗೆ ಯಾವ ವಿಷಯದ ಬಗ್ಗೆ ಹವ್ಯಾಸದ ಬಗ್ಗೆ ಹೆಚ್ಚಿನ ಆಸಕ್ತಿ ಇರುತ್ತದೆ. ಅದರಲ್ಲಿ ಮುಂದುವರಿದರೆ ಏನನ್ನಾದರೂ ಸಾಧಿಸಲು ಸಾಧ್ಯವಾಗುತ್ತದೆ. ನನ್ನಿಂದ ಆಗುವುದಿಲ್ಲ ಎಂಬುದನ್ನು ಬಿಡಿ ಭಗವದ್ಗೀತೆಯ ಬಗ್ಗೆ ನನಗೆ ಏನೂ ಗೊತ್ತಿರಲಿಲ್ಲ. ಇಂದು ಅದರ ಬಗ್ಗೆ ಹೆಚ್ಚು ಆಸಕ್ತಳಾಗಿದ್ದೇನೆ. ಕಾಮೇಶ್ವರಿ ಮೇಡಂ ಅವರು ನಿಜಕ್ಕೂ ನನ್ನ ಗುರುಗಳು ಸಮಿತಿಯನ್ನು ನನಗೆ ಪರಿಚಯಿಸಿದವರು. ಅವರು ಕೊರೋನಾ ಸಮಯದಲ್ಲಿ ಭಗವದ್ಗೀತೆ ಕಲಿಯಲು ಸಾಕಷ್ಟು ಅವಕಾಶವಾಯಿತು. ತಮ್ಮ ಮಕ್ಕಳನ್ನು ಭಗವದ್ಗೀತೆ ತರಗತಿಗಳಿಗೆ ಕಳಿಸಿ ಎಂದು ಕರೆ ನೀಡಿದರು.

Share this article