ಬೀದರ್ ಜೊತೆಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ: ಡಾ.ಸಿಂಗ್

KannadaprabhaNewsNetwork |  
Published : Nov 06, 2026, 01:30 AM IST
ಚಿತ್ರ 5ಬಿಡಿಆರ್51 | Kannada Prabha

ಸಾರಾಂಶ

ಬೀದರ್‌ನೊಂದಿಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್‌ಸಿಂಗ್ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್

ಬೀದರ್‌ನೊಂದಿಗೆ ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧ ಇದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಅಜಯ್‌ಸಿಂಗ್ ಹೇಳಿದರು.

ಸಚಿವರಾದ ನಂತರ ಪ್ರಥಮ ಬಾರಿ ಜಿಲ್ಲೆಗೆ ಭೇಟಿ ನೀಡಿದ ಪ್ರಯುಕ್ತ ನಗರದ ಕಾಂಗ್ರೆಸ್ ಜಿಲ್ಲಾ ಕಚೇರಿಯಲ್ಲಿ ಬುಧವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ನಮ್ಮ ತಂದೆ ಮಾಜಿ ಮುಖ್ಯಮಂತ್ರಿ ದಿ. ಎನ್.ಧರಂ ಸಿಂಗ್ ಅವರಿಗೆ 2008 ರ ವಿಧಾನಸಭೆ ಚುನಾವಣೆಯಲ್ಲಿ ಜೇವರ್ಗಿಯಲ್ಲಿ ಸೋಲು ಉಂಟಾಗಿತ್ತು. ಬಳಿಕ 2009ರಲ್ಲಿ ನಡೆದಿದ್ದ ಲೋಕಸಭೆ ಚುನಾವಣೆಯಲ್ಲಿ ಬೀದರ್ ಜಿಲ್ಲೆಯ ಜನ ಅವರನ್ನು ಗೆಲ್ಲಿಸಿದ್ದರು. ಬೀದರ್ ಜನರ ಋಣ ತೀರಿಸಲಾಗದು ಎಂದು ತಿಳಿಸಿದರು.

ನಮ್ಮ ತಂದೆಯವರು ಬೀದರ್ ಅಭಿವೃದ್ಧಿಗೆ ಅನೇಕ ಮಹತ್ವದ ಕೊಡುಗೆಗಳನ್ನು ನೀಡಿದ್ದರು. ನಾನು ಕೂಡ ಬೀದರ್ ಅಭಿವೃದ್ಧಿಗೆ ಸಾಧ್ಯವಾದ ಕೊಡುಗೆಗಳನ್ನು ನೀಡಲು ಪ್ರಯತ್ನಿಸುವೆ ಎಂದ ಅವರು, ಕಾರ್ಯಕರ್ತರೇ ಕಾಂಗ್ರೆಸ್ ಪಕ್ಷದ ಬಲವಾಗಿದ್ದಾರೆ. ಎಲ್ಲರೂ ಒಗ್ಗೂಡಿ ಪಕ್ಷವನ್ನು ಬಲಪಡಿಸೋಣ. ರಾಜ್ಯವನ್ನು ಇನ್ನಷ್ಟು ಅಭಿವೃದ್ಧಿ ಪಥದತ್ತ ಒಯ್ಯೋಣ ಎಂದು ಹೇಳಿದರು.

ಸಂಸದ ಸಾಗರ್ ಖಂಡ್ರೆ ಹಾಗೂ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಅಬ್ದುಲ್ ಮನ್ನಾನ್ ಸೇಠ್ ಅವರು ಡಾ.ಅಜಯ್‌ಸಿಂಗ್ ಅವರನ್ನು ಸನ್ಮಾನಿಸಿದರು. ವಿಧಾನ ಪರಿಷತ್ ಮಾಜಿ ಸದಸ್ಯ ಅರವಿಂದಕುಮಾರ ಅರಳಿ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಅಮೃತರಾವ್ ಚಿಮಕೋಡೆ, ಬುಡಾ ಅಧ್ಯಕ್ಷ ವಿನೋದ ಕುಮಾರ ಅಪ್ಪೆ, ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ದತ್ತಾತ್ರಿ ಮೂಲಗೆ, ಎಂ.ಎ.ಸಮಿ, ಮುಖಂಡರಾದ ಶರಣಪ್ಪ ಬಲ್ಲೂರ, ಶಂಕರ ರೆಡ್ಡಿ ಚಿಟ್ಟಾ, ಅಜಮತ್ ಪಟೇಲ್, ಚಂದ್ರಕಾಂತ ಹಿಪ್ಪಳಗಾಂವ್, ಪರ್ವೇಜ್ ಕಮಲ್, ರವಿ, ಮಿಸ್ಬಾ, ನಾಸೀರ್ ಅಹಮ್ಮದ್ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹಿಂದುಗಳು ಜಾಗೃತಿವಾದರೆ ಅದೇ ದೊಡ್ಡ ಶಕ್ತಿ
ರಾಮಮಂದಿರ ಪೇಜಾವರ ಶ್ರೀಗಳ ಕನಸಾಗಿತ್ತು