ಜನರ ಸಮಸ್ಯೆಗಳಿಗೆ ಸ್ಪಂದಿಸುವುದೇ ನಮ್ಮ ಮೊದಲ ಆದ್ಯತೆ

KannadaprabhaNewsNetwork |  
Published : Sep 20, 2025, 01:00 AM IST
ಶಾಸಕರಿಂದ 16 ಕೋಟಿ ರೂ ವೆಚ್ಚದ ವಿವಿಧ ರಸ್ತೆ ಕಾಮಗಾರಿಗಳಿಗೆ ಗುದ್ದಲಿ ಪೂಜೆ | Kannada Prabha

ಸಾರಾಂಶ

ದಾಸೀಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ದಿಗೆ ಆದ್ಯತೆ ನೀಡುತ್ತಿದೆ. ತಾಲೂಕಿನ ಸಮಗ್ರ ಯೋಜನೆಗೆ ಹಲವಾರು ಕಾರ್ಯಕ್ರಮಗಳನ್ನ ರೂಪಿಸಲಾಗಿದೆ.

ಕನ್ನಡಪ್ರಭವಾರ್ತೆ ತಿಪಟೂರು

ತಾಲೂಕಿನ ದಸರೀಘಟ್ಟ ಕ್ರಾಸ್ ಜಿ.ಮೇಲನಹಳ್ಳಿಯಿಂದ ಬುಧವಾರ ಸಂತೆ ಮಾರ್ಗವಾಗಿ ಅರಸೀಕೆರೆ ಗಡಿ ಸೇರುವ ರಸ್ತೆ ಹಾಗೂ ಹೊಗವನಘಟ್ಟದಿಂದ ದಾಸಿಹಳ್ಳಿ, ಗಂಗನಘಟ್ಟ ಮಾರ್ಗವಾಗಿ ಗಂಗನಘಟ್ಟ ಗೇಟ್, ಶ್ರೀರಂಗ ಶಾಲೆ ರಸ್ತೆ, ಬಜಗೂರಿನಿಂದ ಹುಲ್ಲೇನಹಳ್ಳಿ ಕಾವಲ್, ಬಜಗೂರು ಗ್ರಾಮವರೆಗಿನ ರಸ್ತೆ ಹಾಗೂ ತಿಪಟೂರು-ಹಾಸನ ರಸ್ತೆಯಿಂದ ತಡಸೂರು ಕೆರೆಗೋಡಿ-ರಂಗಾಪುರ, ಹೊಗವನಘಟ್ಟ, ದಾಸಿಹಳ್ಳಿ, ಗಂಗನಘಟ್ಟ ಮಾರ್ಗ ಮಂಡ್ಯ ಹಡಗಲಿ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮತ್ತು ಕೈದಾಳಗೇಟ್‌ನಿಂದ ಕೈದಾಳ ಗ್ರಾಮದವರೆಗೆ, ಕರಡಾಳು ಸಂತೆ ಮೈದಾನ, ಕರಡಾಳು ಸಂತೆ ಸರ್ಕಲ್‌ನಿಂದ ಈಚನೂರುವರೆಗೆ, ಹುಲಿಕಟ್ಟೆ, ಈಚನೂರು, ಕೊಂಡ್ಲಿಘಟ್ಟ, ದೇವರಹಳ್ಳಿ ಮಾರ್ಗ ಸೇರುವ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು.

ದಾಸೀಹಳ್ಳಿ ಗ್ರಾಮದಲ್ಲಿ ರಸ್ತೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿ ಮಾತನಾಡಿದ ಅವರು, ಸರ್ಕಾರ ಗ್ಯಾರಂಟಿ ಯೋಜನೆಗಳ ನಡುವೆಯೂ ಅಭಿವೃದ್ದಿಗೆ ಆದ್ಯತೆ ನೀಡುತ್ತಿದೆ. ತಾಲೂಕಿನ ಸಮಗ್ರ ಯೋಜನೆಗೆ ಹಲವಾರು ಕಾರ್ಯಕ್ರಮಗಳನ್ನ ರೂಪಿಸಲಾಗಿದೆ. ಲೋಕೋಪಯೋಗಿ ಇಲಾಖೆಯಿಂದ ಸುಮಾರು 100 ಕೋಟಿ ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲಾಗಿದೆ. ಸುಮಾರು 340ಕೋಟಿ ವೆಚ್ಚದ ಬಹುಗ್ರಾಮ ಗ್ರಾಮೀಣ ಕುಡಿಯುವ ನೀರಿನ ಯೋಜನೆ ಪ್ರಗತಿಯಲ್ಲಿದ್ದು ಡಿಸೆಂಬರ್ ತಿಂಗಳೊಳಗೆ ಕಾಮಗಾರಿ ಮುಕ್ತಾಯವಾಗಲಿದೆ. ಗ್ರಾಮೀಣ ಭಾಗದ ಪ್ರತಿ ಮನೆಗಳಿಗೆ ಶುದ್ಧ ಕುಡಿಯುವ ನೀರು ದೊರೆಯಲಿದ್ದು ತಿಪಟೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ನೊಣವಿನಕೆರೆ ಕುಡಿಯುವ ನೀರಿನ ಯೋಜನೆ ಅನುಮೋದನೆ ಹಂತದಲ್ಲಿದೆ. ಶೀಘ್ರವಾಗಿ ಮುಖ್ಯಮಂತ್ರಿಗಳಿಂದ ಎಲ್ಲಾ ಅಭಿವೃದ್ದಿ ಯೋಜನೆಗಳ ಲೋಕಾರ್ಪಣೆಯಾಗಲಿವೆ. ನಮ್ಮ ತಾಲೂಕಿನ ಅಭಿವೃದ್ದಿ ಮತ್ತು ಜನರ ಸಮಸ್ಯೆ ಪರಿಹಾರ ಮಾಡುವುದೇ ನನ್ನ ಮೊದಲ ಆದ್ಯತೆಯಾಗಿದೆ ಎಂದರು. ಈ ಸಂದರ್ಭದಲ್ಲಿ ದಸರೀಘಟ್ಟ ಗ್ರಾ.ಪಂ ಅಧ್ಯಕ್ಷೆ ಫಾಜಿಲ್ಲಾ ಬಾನು, ಪಾ?, ಡಿ.ಆರ್. ಗುತ್ತಿಗೆದಾರ ಕೇಶವಮೂರ್ತಿ, ಗ್ರಾಮಪಂಚಾಯಿತಿ ಸದಸ್ಯರಾದ ಗೋವಿಂದಪ್ಪ, ಮೋಹನ್, ಲೋಕೋಪಯೋಗಿ ಇಲಾಖೆ ಎಇಇ ನಟರಾಜ್, ಕೃಷಿಕ ಸಮಾಜದ ಸದಸ್ಯ ಹೊಗನಘಟ್ಟ ಯೋಗಾನಂದ್, ನಗರಸಭೆ ಸದಸ್ಯ ಲೋಕನಾಥ್ ಸಿಂಗ್ ಸೇರಿದಂತೆ ಸ್ಥಳೀಯ ಜನಪ್ರತಿನಿಧಿಗಳಿದ್ದರು.

ಕೋಟ್‌..ವಿರೋಧ ಪಕ್ಷಗಳು ವಿನಾಕಾರಣ ಸರ್ಕಾರದ ಮೇಲೆ ಆರೋಪ ಮಾಡುತ್ತಿವೆ. 5 ಗ್ಯಾರಂಟಿಗಳನ್ನು ನೀಡಲು ಸರ್ಕಾರ ಬದ್ಧವಾದಾಗ ಅಭಿವೃದ್ಧಿ ಹೇಗೆ ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಪ್ರತಿ ತಾಲೂಕಿನಲ್ಲಿಯೂ ಸಹ ಅಭಿವೃದ್ಧಿಯಾಗುತ್ತಿದೆ. ವಿರೋಧ ಪಕ್ಷಗಳ ಶಾಸಕರು ಸಹ ಇದನ್ನು ಒಪ್ಪಿಕೊಳ್ಳಬೇಕಿದೆ. ಕಾರಣ ಕಾಂಗ್ರೆಸ್‌ ಸರ್ಕಾರ ಯಾರನ್ನೂ ಸಹ ಬಿಟ್ಟುಕೊಡುವುದಿಲ್ಲ. ಎಲ್ಲರನ್ನು ಒಗ್ಗೂಡಿಸಿಕೊಂಡು ರಾಜ್ಯದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದೆ. ಇದರಿಂದಾಗಿ ವಿರೋಧ ಪಕ್ಷಗಳಿಗೆ ಮಾತನಾಡಲು ಅವಕಾಶವೇ ಇಲ್ಲದಂತಾಗಿದ್ದು ವಿನಾಕಾರಣ ಸರ್ಕಾರದ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿದೆ. ಜನರು ಎಲ್ಲವನ್ನು ಗಮನಿಸುತ್ತಿದ್ದು ಅಭಿವೃದ್ಧಿಗೆ ಜೈ ಎಂದಿದ್ದಾರೆ. - ಕೆ. ಷಡಕ್ಷರಿ, ಶಾಸಕರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5-6 ತಿಂಗಳಿಂದ ನೀರು ಪೋಲು: ಕ್ರಮಕೈಗೊಳ್ಳದ ಅಧಿಕಾರಿಗಳು
ತಮ್ಮ ಮೇಲಿನ ಆರೋಪ ಸುಳ್ಳು, ಆಧಾರ ರಹಿತ : ಮುನೀಶ್‌ ಮೌದ್ಗಿಲ್‌