ಪೀಣ್ಯ ದಾಸರಹಳ್ಳಿ : ಮನುಷ್ಯನ ಹುಟ್ಟು ಆಕಸ್ಮಿಕವಾದದ್ದು, ಸಾವು ಎಂಬುದು ಅನಿವಾರ್ಯ, ಜನನ ಉಚಿತ, ಮರಣ ಖಚಿತ. ಈ ಹುಟ್ಟು ಸಾವಿನ ಮಧ್ಯದಲ್ಲಿ ನಾವು ಏನು ಮಾಡುತ್ತೇವೆ ಎಂಬುದು ಬಹಳ ಮುಖ್ಯ " ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿಳಿಸಿದರು.
ಅಬ್ಬಿಗೆರೆಯಲ್ಲಿ ಭಾನುವಾರ ನಡೆದ ಸೀತಾ ಲಕ್ಷ್ಮಣ ಹನುಮ ಸಮೇತ ಶ್ರೀ ರಾಮಚಂದ್ರಸ್ವಾಮಿ ದೇವಾಲಯ ಜೀರ್ಣೋದ್ಧಾರ ಪುನಃ ಪ್ರತಿಷ್ಠಾಪನಾ ಮತ್ತು ಶ್ರೀ ಪದ್ಮಾವತಿ ಸಮೇತ ಶ್ರೀ ವೇಂಕಟೇಶ್ವರ ಸ್ವಾಮಿಯವರ ನೂತನ ಸ್ಥಿರ ಬಿಂಬ ಪ್ರತಿಷ್ಠಾಪನಾ ಹಾಗೂ ವಿಮಾನ ಗೋಪುರ ಕಲಶ ಪ್ರತಿಷ್ಠಾಪನಾ ಮಹಾ ಕುಂಭಾಭಿಷೇಕ ಮಹೋತ್ಸವದಲ್ಲಿ ಮಾತನಾಡಿ, ಈ ದೇವಾಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಬೇಡಿ ನೀವೆ ದೇವಸ್ಥಾನದ ಜವಾಬ್ದಾರಿಯನ್ನು ವಹಿಸಿಕೊಳ್ಳಿ ದೇವಸ್ಥಾನದ ಜೀರ್ಣೋದ್ಧಾಕ್ಕೆ ಯಾರು ಸಹಾಯ ಮಾಡಿದ್ದೀರಾ ಅವರಿಗೆ ಒಳ್ಳೆದಾಗಲಿ.
ಇದು ಒಂದು ಪವಿತ್ರ ಸ್ಥಳ. ಭವಿಷ್ಯದಲ್ಲಿ ಇಲ್ಲಿ ನಾವು ನೀವು ಯಾರು ಇರುವುದಿಲ್ಲ. ಆದರೆ ನಾವು ಮಾಡಿದ ಕೆಲಸ ಶಾಶ್ವತವಾಗಿರುತ್ತದೆ. ದೇವಾಸ್ಥಾನವು ತುಂಬಾ ಅದ್ಭುವಾಗಿ ಮೂಡಿಬಂದಿದೆ. ನಾನುಂಟು ದೇವರುಂಟು. ನಾನುಂಟು ಭಕ್ತಿಯುಂಟು, ಭಕ್ತ ಹಾಗೂ ಭಗವಂತನಿಗೆ ವ್ಯವಹಾರ ನಡೆಯುವ ಸ್ಥಳ ದೇವಸ್ಥಾನ. ದೇವಾಲಯದಲ್ಲಿ ಪ್ರಾರ್ಥನೆ ಮಾಡಿದ್ದೇನೆ ಎಂದು ಮಾರ್ಮಿಕವಾಗಿ ಹೇಳಿದರು.
ಶಾಸಕ ಎಸ್.ಮುನಿರಾಜು ಮಾತನಾಡಿ, ಡಿ.ಕೆ.ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೆನೆ. ನಾವು ಕೋಟಿ ಕೋಟಿ ಹಣ ಗಳಿಸಬಹುದು. ಆದರೆ, ಸೇವಾ ಮನೋಭಾವ, ಭಕ್ತಿ ಭಾವ ಎಲ್ಲರಲ್ಲೂ ಬರುವುದಿಲ್ಲ. ನಾಗಭೂಷಣ್ ಮತ್ತು ಅವರ ಕುಟುಂಬವರ್ಗದವರು ಸುಂದರವಾದ ದೇವಸ್ಥಾನ ಜೀವನೋದ್ಧಾರ ಮಾಡಿಸಿದ್ದಾರೆ. ಅವರಿಗೆ ದೇವರು ಆರೋಗ್ಯ ಐಶ್ವರ್ಯ ನೀಡಲಿ ಎಂದು ಹಾರೈಸಿದರು.
ಪಾಲಿಕೆ ಮಾಜಿ ಸದಸ್ಯ ಕೆ.ನಾಗಭೂಷಣ್ ಮಾತನಾಡಿದರು. ಮಹಿಳಾ ಅಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ, ಬೆಂಗಳೂರು ನಗರ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಜಿ.ಮರಿಸ್ವಾಮಿ , ಕೆ.ಸಿ.ಆಶೋಕ್,ಅಬ್ಬಿಗೆರೆರಾಜಣ್ಣ, ಪುರುಷೋತ್ತಮ್, ವಿಶ್ವನಾಥ್, ಭೈರಣ್ಣ ಉಪಸ್ಥಿತರಿದ್ದರು.