ಕನ್ನಡ ಉಳಿಸಿ, ಬೆಳೆಸುವುದು ನಮ್ಮ ಆದ್ಯ ಕರ್ತವ್ಯ

KannadaprabhaNewsNetwork |  
Published : Nov 03, 2025, 03:15 AM IST
ಕನ್ನಡ ನಾಡು ಕನ್ನಡ ಭಾಷೆಯ ಸ್ವರ್ಗವಾಗಿದೆ ಉಪನ್ಯಾಸಕ : ಸಂಜೀವ ಮಂಟೂರ | Kannada Prabha

ಸಾರಾಂಶ

ಅನ್ಯಭಾಷೆಯ ಪ್ರಭಾವದಿಂದ ಕನ್ನಡ ಭಾಷೆಯ ತನ್ನ ತನವನ್ನು ಕಳೆದುಕೊಳ್ಳುತ್ತಿದ್ದು ಅದನ್ನು ಉಳಿಸಿ, ಬೆಳಸುವುದು ಪ್ರತಿ ಕನ್ನಡಿಗನ ಕರ್ತವ್ಯ

ಕನ್ನಡಪ್ರಭ ವಾರ್ತೆ ಮೂಡಲಗಿ

ಕನ್ನಡನಾಡು, ಕನ್ನಡಭಾಷೆ ಸ್ವರ್ಗವಾಗಿದೆ. ನಾವೂ ಕನ್ನಡ ಭಾಷೆಯ ಮಹತ್ವ ಮತ್ತು ಕನ್ನಡ ಭಾಷೆಯ ಇತಿಹಾಸ ತಿಳಿದುಕೊಂಡು ಕರ್ನಾಟಕವನ್ನು ಅನ್ಯಭಾಷಿಕರಿಂದ ಉಳಿಸಿಕೊಂಡು ಬೆಳೆಸಿಕೊಂಡು ಹೋಗುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ ಎಂದು ಆರ್.ಡಿ.ಎಸ್. ಪದವಿ ಕಾಲೇಜಿನ ಉಪನ್ಯಾಸಕ ಸಂಜೀವ ಮಂಟೂರ ಹೇಳಿದರು.

ಪಟ್ಟಣದ ಆರ್.ಡಿ.ಎಸ್. ಕಲಾ, ವಾಣಿಜ್ಯ, ವಿಜ್ಞಾನ ಸಮಾಜಕಾರ್ಯ ಪದವಿ ಮಹಾವಿದ್ಯಾಲಯ ಹಾಗೂ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯಗಳ ಸಂಯಕ್ತಾಶ್ರಯದಲ್ಲಿ ನಡೆದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ತಾಯಿ ಭುವನೇಶ್ವರಿಯ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿದ ಅವರು, ಕನ್ನಡ ನಮ್ಮ ಉಸಿರಿನ ಭಾಷೆ ಪ್ರಾಚೀನ ಕಾಲದಿಂದಲ್ಲೂ ಕನ್ನಡ ನಾಡು ಬೆಳದು ಬರಲು ಹಲವು ಮಹನೀಯರ ಪಾತ್ರ ಅವಿಸ್ಮರಣೀಯವಾಗಿದ್ದು, ಅಖಂಡ ಕನ್ನಡ ನಾಡಿನ ರಚನೆಯಲ್ಲಿ ಆಲೂರು ವೆಂಕಟರಾಯರ ಪಾತ್ರ ಅತೀ ಮಹತ್ವದಾಗಿದೆ ಎಂದರು.

ಕನ್ನಡ ನಾಡು ಕವಿಗಳ ಬೀಡು ಕವಿತೆ ಕಾದಂಬರಿ ಬರೆದು ಕನ್ನಡ ಭಾಷೆಯ ಮೆರಗನ್ನು ಅನೇಕ ಲೇಖಕರು ಸಾಹಿತ್ಯಗಾರರು ಹೆಚ್ಚಿಸಿದ್ದು ಅನ್ಯಭಾಷೆಯ ಪ್ರಭಾವದಿಂದ ಕನ್ನಡ ಭಾಷೆಯ ತನ್ನ ತನವನ್ನು ಕಳೆದುಕೊಳ್ಳುತ್ತಿದ್ದು ಅದನ್ನು ಉಳಿಸಿ, ಬೆಳಸುವುದು ಪ್ರತಿ ಕನ್ನಡಿಗನ ಕರ್ತವ್ಯ ಎಂದರು.

ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ವೆಂಕಟೇಶ ಹೆಳವರ ಮಾತನಾಡಿ, ಕನ್ನಡ ನಮ್ಮ ಮಾತೃಭಾಷೆ ಅಷ್ಟೇ ಅಲ್ಲ ಅದು ನಮ್ಮ ದೇಹದ ಪ್ರತಿ ಅಂಗಗಳಲ್ಲಿಯೂ ಗುರುತಿಸಲಪ್ಪಡುತ್ತದೆ ಎಂದು ಬೇಂದ್ರೆಯವರ ಮಾತನ್ನು ನೆನಪಿಸಿಕೊಟ್ಟು ಕನ್ನಡ ಸಾಹಿತ್ಯಕ್ಕೆ ಹಾಗೂ ಕನ್ನಡ ನಾಡಿಗೆ ವಿಶ್ವಮಾನ್ಯತೆ ಇದ್ದು ಕರ್ನಾಟಕದಲ್ಲಿನ ಕನ್ನಡಕ್ಕೆ ಬೇಂದ್ರೆ ಕುವೆಂಪ್ಪುರವರ ಸಾಹಿತ್ಯ ಮತಷ್ಟು ಮೆರಗನ್ನು ನೀಡಿದೆ ಎಂದರು.

ಕಾರ್ಯಕ್ರಮದಲ್ಲಿ ಪಿಯು ವಿದ್ಯಾರ್ಥಿನಿ ಲಕ್ಷ್ಮೀ ಪಾಟೀಲ ಕನ್ನಡ ಭಾಷೆಯನ್ನು ಯಾವುದೇ ಕಾರಣಕ್ಕೂ ನಾವೂ ಬಿಟ್ಟುಕೊಡುವುದು ಬೇಡ ಬೇರೆ ಭಾಷೆಯ ಪ್ರೀತಿ ಇರಲಿ ಕನ್ನಡ ಭಾಷೆ ಉಸಿರಾಗಿರಲಿ ಎಂದಳು.

ಪದವಿ ಕಾಲೇಜಿನ ಪ್ರಾಚಾರ್ಯ ಸತ್ಯೇಪ್ಪ ಗೋಟುರೆ ಅಧ್ಯಕ್ಷತೆ ವಹಿಸಿಕೊಂಡು ಮಾತನಾಡಿ, ಬ್ರಿಟಿಷರ ನೀತಿಯಿಂದ ಬೇರೆ ಬೇರೆ ಭಾಗಗಳಾಗಿ ಹಂಚಿಹೋಗಿರುವ ಕರ್ನಾಟಕವನ್ನು ಒಂದುಗೊಡಿಸಿ ಏಕೀಕರಣಗೊಳ್ಳುವಲ್ಲಿ ಅನೇಕ ಮಹನೀಯರ ಪಾತ್ರ ಅಜರಾಮರವಾಗಿದ್ದು ಇಂದು ನಾವು ಅಖಂಡ ಕರ್ನಾಟಕವನ್ನು ಉಳಿಸಿಬೆಳಸಿಕೊಂಡು ಹೋಗುವಲ್ಲಿ ಪ್ರತಿಯೊಬ್ಬ ಕನ್ನಡಿಗೆ ಶ್ರಮಿಸುವುದು ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ಶಿವಾನಂದ ಸತ್ತಿಗೇರಿ, ಸಂಗಮೇಶ ಕುಂಬಾರ, ಸಂತೋಷ ಲಟ್ಟಿ, ಸುಭಾಸ ಮಾಲೋಜಿ, ಉಮೇಶ ಪುಟ್ಟಿ, ಗಂಗಾಧರ ಮನ್ನಾಪೂರ, ಮಹಾದೇವ ಸಿದ್ನಾಳ, ರವಿ ಕಟಗೇರಿ, ಸುನೀಲ ಸತ್ತಿ, ಸಿದ್ದಪ್ಪ ಪೂಜೇರಿ ಸಿದ್ದಾರೂಢ ಬೆಳವಿ ಮತ್ತಿತರರು ಹಾಜರಿದ್ದರು.

ಉಪನ್ಯಾಸಕ ಮಲ್ಲಪ್ಪ ಪಾಟೀಲ ನಿರೂಪಿಸಿದರು. ಉಪನ್ಯಾಸಕಿ ಅಕ್ಷತಾ ಹೊಸಮನಿ ಸ್ವಾಗತಿಸಿದರು. ಉಪನ್ಯಾಸಕ ಮುತ್ತಣ್ಣ ಒಡೆಯರ ವಂದಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ