ಮತ್ತೆ ಭುಗಿಲೆದ್ದ ವಾಟದಹೊಸಳ್ಳಿ ಅಚ್ಚುಕಟ್ಟುದಾರರ ಆಕ್ರೋಶ

KannadaprabhaNewsNetwork |  
Published : Nov 25, 2026, 01:45 AM IST
ವಾಟದಹೊಸಳ್ಳಿ ಅಚ್ಚುಕಟ್ಟುದಾರರು ತಮ್ಮ ಕೆರೆಯ ಉಳಿವಿಗಾಗಿ ಹೋರಾಡುತ್ತಿರುವುದು | Kannada Prabha

ಸಾರಾಂಶ

ರೈತರ ಮನವಿಗಳಿಗೆ ಬೆಲೆಯಿಲ್ಲವೇ? ರೈತರ ಹೋರಾಟಕ್ಕೆ ಗೌರವವಿಲ್ಲವೇ? ಜನರ ಬದುಕು ಮತ್ತು ಕೃಷಿಯ ಭವಿಷ್ಯಕ್ಕಿಂತ ಕಾಮಗಾರಿಯೇ ದೊಡ್ಡದಾಯಿತೇ?

ಕನ್ನಡಪ್ರಭ ವಾರ್ತೆ ಗೌರಿಬಿದನೂರು

ರೈತರ ಮನವಿಗಳಿಗೆ ಬೆಲೆಯಿಲ್ಲವೇ? ರೈತರ ಹೋರಾಟಕ್ಕೆ ಗೌರವವಿಲ್ಲವೇ? ಜನರ ಬದುಕು ಮತ್ತು ಕೃಷಿಯ ಭವಿಷ್ಯಕ್ಕಿಂತ ಕಾಮಗಾರಿಯೇ ದೊಡ್ಡದಾಯಿತೇ?

ತಾಲೂಕಿನ ನಗರಗೆರೆ ಹೋಬಳಿ ವಾಟಾದಹೊಸಹಳ್ಳಿ ಕೆರೆಯಿಂದ ಗೌರಿಬಿದನೂರು ನಗರಕ್ಕೆ ನೀರು ತೆಗೆದು ಕೊಂಡು ಹೋಗಲು ಪೈಪ್ ಲೈನ್ ಹಾಕಲು ರಸ್ತೆ ಪಕ್ಕದಲ್ಲಿರುವ ಬೃಹತ್ ಮರಗಳನ್ನು ಕಡಿಯುತ್ತಿದ್ದಾರೆ ಎಂದು ತಿಳಿದು ಸ್ಥಳಕ್ಕೆ ಕೆರೆ ಅಚ್ಚುಕಟ್ಟುದಾರರು ಹೋಗಿ ಮರ ಕಡಿಯುವುದನ್ನು ನಿಲ್ಲಿಸಿ ಮೊದಲು ಕೆರೆಗೆ ನೀರುಬರಲು ಪೈಪ್ ಲೈನ್ ಹಾಕಿ ನಂತರ ನಾವು ನಿಮಗೆ ಸ್ವಾಗತಿಸುತ್ತೇವೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಹರ್ಷವರ್ಧನ್ ರೆಡ್ಡಿ ಮಾತನಾಡಿ ರೈತರ ತಾಳ್ಮೆಗೆ ಮಿತಿಯಿದೆ. ಅವರ ಹಕ್ಕುಗಳ ಮೇಲೆ ಕೈ ಹಾಕಿದರೆ ಹೋರಾಟದ ಕಿಚ್ಚು ಇಡೀ ತಾಲೂಕಿಗೆ ವ್ಯಾಪಿಸಲಿದೆ. ಕಳೆದ ಒಂದೂವರೆ ವರ್ಷದಿಂದ ವಾಟದಹೊಸಳ್ಳಿ ಅಚ್ಚುಕಟ್ಟುದಾರರು ತಮ್ಮ ಕೆರೆಯ ಉಳಿವಿಗಾಗಿ ಹೋರಾಡುತ್ತಿದ್ದಾರೆ. ಸುಮಾರು ಎರಡು ತಿಂಗಳ ಕಾಲ ತಾಲೂಕು ಕಚೇರಿ ಮುಂದೆ ಧರಣಿ, ರಸ್ತೆ ತಡೆ, ಪಾದಯಾತ್ರೆ ಹೀಗೆ ಹತ್ತಾರು ರೀತಿಯಲ್ಲಿ ತಮ್ಮ ನೋವು ಮತ್ತು ನ್ಯಾಯಯುತ ಬೇಡಿಕೆಗಳನ್ನು ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಒಂದೂವರೆ ವರ್ಷದಿಂದ ರೈತರು ಬೀದಿಗಿಳಿದು ಹೋರಾಡುತ್ತಿದ್ದರೂ ಕ್ರಮ ವಹಿಸದೇ ಇಂದು ಏಕಾಏಕಿ ಮರಗಳನ್ನು ಕಟಾವು ಮಾಡುವ ಆತುರ ಏಕೆ? ಎಂದು ಪ್ರಶ್ನಿಸಿದರು.

ರೈತರ ಬೇಡಿಕೆ ಈಡೇರುವವರೆಗೂ ಮರಗಳ ಕಟಾವು ಹಾಗೂ ಕಾಮಗಾರಿಯನ್ನು ಮುಂದುವರಿಸಬಾರದು ಎಂದು ಪಟ್ಟು ಹಿಡಿದು ತಿಭಟಿಸಿದರು. ಸದ್ಯಕ್ಕೆ ಕಟಾವು ಪ್ರಕ್ರಿಯೆ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.

ರೈತರನ್ನು ಕಡೆಗಣಿಸಿ ನಡೆಯುವ ಯಾವುದೇ ಅಭಿವೃದ್ಧಿ ನಿಜವಾದ ಅಭಿವೃದ್ಧಿಯಲ್ಲ! ಇನ್ನು ಮೌನವಾಗಿರುವ ಪ್ರಶ್ನೆಯೇ ಇಲ್ಲ. ರೈತರ ಹಕ್ಕು, ಕೆರೆಯ ಉಳಿವು ಮತ್ತು ಕೃಷಿಯ ಭವಿಷ್ಯಕ್ಕಾಗಿ ಪ್ರಜಾಪ್ರಭುತ್ವದ ಹಾದಿಯಲ್ಲಿ ಹೋರಾಟ ಮುಂದುವರಿಯಲಿದೆ ಎಂದು ತಿಳಿಸಿದರು

ಈ ಸಂದರ್ಭದಲ್ಲಿ ಹರ್ಷವರ್ಧನ್ ರೆಡ್ಡಿ, ಮಧು, ಸೂರ್ಯನಾರಾಯಣರೆಡ್ಡಿ, ಪ್ರಭಾಕರರೆಡ್ಡಿ, ಕೆಂಪುರಂಗಪ್ಪ ವಿಎಂಸಿ ಮಂಜುನಾಥ್, ವಿಜಿ ಕುಮಾರ್, ಕೃಷ್ಣಮೂರ್ತಿ, ಶಂಕರ್ ರೆಡ್ಡಿ, ಬಂಡಪಲ್ಲಿ ಮೂರ್ತಿ, ದಿವಾಕರ್, ನರೇಶ್, ಕುಮಾರ್ ಬಾಬು, ರಾಜಶೇಖರ್, ನಂದ ಇನ್ನು ಮುಂತಾದವರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಪಾನಿಂದಲೇ ಆಶಾ ಮನವೊಲಿಕೆಗೆ ಸಿಎಂ ಯತ್ನ
ವೈದ್ಯರ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆಗಳ ಮಾರಾಟ: ಅಧಿಕಾರಿಗಳ ದಾಳಿ