ಕನ್ನಡಪ್ರಭ ವಾರ್ತೆ ಮೈಸೂರು
ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಶಿಕ್ಯೂಷನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ವಿರೋಧಿಸಿ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ನಗರದ ರಾಮಸ್ವಾಮಿ ವೃತದಲ್ಲಿ ರಸ್ತೆ ತಡೆದು ಪ್ರತಿಭಟಿಸಿದರು.ಅಲ್ಲದೆ, ಟೈರ್ ಗೆ ಹಾಗೂ ರಾಜ್ಯಪಾಲರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ, ರಸ್ತೆಯಲ್ಲೇ ಮಲಗಿ ರಾಜ್ಯಪಾಲರು, ಬಿಜೆಪಿ- ಜೆಡಿಎಸ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಈ ವೇಳೆ ಮಾಜಿ ಶಾಸಕ ಎಂ.ಕೆ. ಸೋಮಶೇಖರ್ ಮಾತನಾಡಿ, ಸಿದ್ದರಾಮಯ್ಯ ಅವರು 40 ವರ್ಷಗಳ ಕಾಲ ಸುದೀರ್ಘ ರಾಜಕಾರಣದಲ್ಲಿ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಅಧಿಕಾರ ನಡೆಸಿ 2ನೇ ಬಾರಿಗೆ ಮುಖ್ಯಮಂತ್ರಿ ಆಗಿದ್ದಾರೆ. 5 ಗ್ಯಾರಂಟಿ ಯೋಜನೆಗಳನ್ನು ನೀಡುವ ಮೂಲಕ ಇಡೀ ಭಾರತ ದೇಶದ ಗಮನ ಸೆಳೆದಿದ್ದಾರೆ. ಒಬ್ಬ ಹಿಂದುಳಿದ ವರ್ಗದ ನಾಯಕನಾಗಿ ರಾಜ್ಯವನ್ನು ಸುಭದ್ರವಾಗಿ, ಸುರಕ್ಷಿತವಾಗಿ ಅಭಿವೃದ್ಧಿ ದಿಕ್ಕಿನೆಡೆಗೆ ಕೊಂಡೊಯ್ಯುತ್ತಿರುವುದನ್ನು ಸಹಿಸದ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನೇರವಾಗಿ ಎದುರಿಸಲಾಗದೆ, ಕುತಂತ್ರದ ದಾರಿಯನ್ನು ಹಿಡಿದಿದ್ದಾರೆ ಎಂದು ದೂರಿದರು.ವಿರೋಧ ಪಕ್ಷದ ಆಡಳಿತವಿರುವ ರಾಜ್ಯ ಸರ್ಕಾರಗಳನ್ನು ಅಸ್ಥಿರಗೊಳಿಸುವ ಪ್ರಯತ್ನ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮುಂದುವರೆಸಿದ್ದು, ಪ್ರಜಾಪ್ರಭುತ್ವದ ಹಾಗೂ ಸಂವಿಧಾನದ ಕಗ್ಗೊಲೆಗೆ ಮುಂದಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲರು ಕೇಂದ್ರದ ಅಣತಿಯಂತೆ ನಡೆದು, ನಿರಾಧಾರವಾದ ಎಂಡಿಎ ಆರೋಪಕ್ಕೆ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆ. ರಾಜಕೀಯ ಪ್ರೇರಿತವಾದ ರಾಜ್ಯಪಾಲರ ನಡೆ ಸರಿಯಲ್ಲ ಎಂದು ಅವರು ಖಂಡಿಸಿದರು.ಮಾಜಿ ಮೇಯರ್ ಟಿ.ಬಿ. ಚಿಕ್ಕಣ್ಣ, ನಗರ ಪಾಲಿಕೆ ಮಾಜಿ ಸದಸ್ಯರಾದ ಜೆ. ಗೋಪಿ, ಎಂ. ಸುನಿಲ್, ಆರ್.ಎಚ್. ಕುಮಾರ್,ಕಾಂಗ್ರೆಸ್ ಮುಖಂಡರಾದ ಜಿ. ಸೋಮಶೇಖರ್, ಶ್ರೀಧರ್, ರವಿಶಂಕರ್, ಮಹಮದ್ ಫಾರೂಕ್, ಕಲೀಂ, ಷರೀಫ್, ಶಾಧಿಕ್ ಉಲ್ಲ ರೆಹಮಾನ್, ವಿಶ್ವನಾಥ್, ಕುರುಬಾರಹಳ್ಳಿ ಪ್ರಕಾಶ್, ಸೋಮು, ರವಿ, ವಿಜಯಕುಮಾರ್, ವೆಂಕಟೇಶ್, ಭವ್ಯಾ, ವೀಣಾ, ಚಂದ್ರಕಲಾ, ಕಂಸಾಳೆ ರವಿ, ಮೂರ್ತಿ, ಚೇತನ್ ರಾಜ್, ರಮೇಶ್ ರಾವ್, ರಾಘವೇಂದ್ರ, ಉಲ್ಲಾಸ್, ರಾಕೇಶ್, ಧರ್ಮೇಂದ್ರ, ಈಶ್ವರ್ ಚಕ್ಕಡಿ, ಜೋಗಿ ಮಹೇಶ್, ಜಯರಾಜ್, ಮಧುರಾಜ್, ಪುಟ್ಟ, ಶಿವಣ್ಣ, ರಾಜೇಶ್ ಮೊದಲಾದವರು ಇದ್ದರು.----ಬಾಕ್ಸ್...ರಸ್ತೆತಡೆ, ರಾಜ್ಯಪಾಲರ ಪ್ರತಿಕೃತಿ ದಹನಫೋಟೋ- 17ಎಂವೈಎಸ್15
----ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಕಾನೂನು ಕ್ರಮಕ್ಕೆ ಅನುಮತಿ ನೀಡಿರುವ ರಾಜ್ಯಪಾಲರ ವಿರುದ್ಧ ಮೈಸೂರು- ಬಂಡಿಪಾಳ್ಯ ಸಿಗ್ನಲ್ಬಳಿ ಜಮಾಯಿಸಿದ ಸಿದ್ದರಾಮಯ್ಯ ಬೆಂಬಲಿಗರು ರಸ್ತೆ ತಡೆದು ಘೋಷಣೆ ಕೂಗಿದರು.ಅಲ್ಲದೆ, ರಸ್ತೆಯ ಮಧ್ಯೆ ಕುಳಿತು ಪ್ರತಿಭಟಿಸಿ, ವಾಹನ ಸಂಚಾರಕ್ಕೆ ತಡೆಯೊಡ್ಡಿದರು. ರಾಜ್ಯಪಾಲರ ವಿರುದ್ಧದ ಬರಹವುಳ್ಳ ಫಲಕ ಹಾಗೂ ಪ್ರತಿಕೃತಿಯನ್ನು ಸುಟ್ಟು ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಇದರಿಂದ ಕೆಲಕಾಲ ಈ ಭಾಗದಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಯಿತು. ಮುಖಂಡರಾದ ಬಂಡಿಪಾಳ್ಯ ಬಸವರಾಜು, ಮಹಾದೇವು, ಕಡಕೋಳ ಶ್ರೀಕಾಂತ್, ಜಟ್ಟಿಹುಂಡಿ ರಾಚಪ್ಪ, ಭರತ್, ಗಿರಿಧರ್ ಮೊದಲಾದವರು ಇದ್ದರು.