ಚಿತ್ರದುರ್ಗದಲ್ಲಿ ಮುಸ್ಲಿಂ ಸಮಾಜದ ಮುಖಂಡರಿಂದ ಪ್ರತಿಭಟನೆ । ಡಿಸಿಗೆ ಮನವಿ ಸಲ್ಲಿಕೆಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಕೆ.ಅನ್ವರ್ ಭಾಷಾ ಅಅರು ವಕ್ಫ್ ಮಂಡಳಿ ಜಾಗವನ್ನು ಕಬಳಿಸಿದ್ದಾರೆಂದು ಕೆಲವು ಪಟ್ಟಭದ್ರರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿವಿಧ ಇಲಾಖೆಗೆ ದೂರು ನೀಡಿ ಸಮಾಜದಲ್ಲಿರುವ ಅವರ ಗೌರವಕ್ಕೆ ಧಕ್ಕೆ ತರುತ್ತಿದ್ದಾರೆ. ಇದರ ಹಿಂದೆ ರಾಜಕೀಯ ಪಿತೂರಿಯಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆ.ಅನ್ವರ್ ಭಾಷರವರು ವಕ್ಫ್ ಮಂಡಳಿ ಚೇರ್ಮನ್ ಆಗಿದ್ದಾಗ ಸರ್ಕಾರದ ವತಿಯಿಂದ ಪಿಯು ಕಾಲೇಜು ಮಂಜೂರಾತಿ ಮಾಡಿಸಿ ಶೈಕ್ಷಣಿಕವಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಶಾದಿ ಮಹಲ್ ನಿರ್ಮಾಣ ಹಂತದಲ್ಲಿದೆ. ಸುಸಜ್ಜಿತ ವೆಂಟಿಲೇಟರ್ ಸಹಿತ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಉಚಿತ ಆಂಬ್ಯುಲೆನ್ಸ್‌ಗಳ ಸೌಲಭ್ಯ ಒದಗಿಸಿದ್ದಾರೆ. ಮತ್ತೊಮ್ಮೆ ಇವರು ವಕ್ಫ್ ಮಂಡಳಿ ಚೇರ್ಮನ್ ಆಗುವುದನ್ನು ತಡೆಯುವುದಕ್ಕಾಗಿ ಇಂತಹ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗೆ ಸಲ್ಲಿಸಲಾದ ಮನವಿಯಲ್ಲಿ ಆರೋಪಿಸಲಾಗಿದೆ.
ಪ್ರತಿಭಟನೆಯಲ್ಲಿ ಹಾಜಿ ನಯಾಜ್, ಇಲಾಹಿ ಮುನ್ನ, ಸೈಫುಲ್ಲಾ, ಹನೀಸ್, ಸೈಯದ್ ಖುದ್ದೂಸ್, ಹಾಜಿ ಆರ್.ದಾದಾಪೀರ್, ಸೈಯದ್ ಇಸ್ಮಾಯಿಲ್, ವರದ ಹಜರತ್, ನೂರುಲ್ಲಾ, ಎಚ್.ಪ್ಯಾರೆಜಾನ್, ಹಾಜಿ ಗೌಸ್‍ಪೀರ್, ಮುಹಿಬ್, ಬಾಷ, ನಜೀರ್, ಹುಸೇನ್‍ಪೀರ್, ಕೆ.ನಜೀರ್ ಅಹಮದ್ ಸೇರಿ ಜಿಲ್ಲೆಯ ಮಸೀದಿಯ ಮುತುವಲ್ಲಿಗಳು ಪಾಲ್ಗೊಂಡಿದ್ದರು.