-ಬಿಜೆಪಿ ಶಾಸಕರ ಗೈರು, ಕಾರ್ಯಕರ್ತರಿಂದ ಯತ್ನಾಳ್ ತರಾಟೆಗೆ
ಕನ್ನಡಪ್ರಭ ವಾರ್ತೆ, ಬೀದರ್ವಕ್ಫ್ ವಿರುದ್ಧದ ಹೋರಾಟದ ಅಭಿಯಾನವನ್ನು ಆರಂಭಿಸಿರುವ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಯತ್ನಾಳ್ ಅವರಿಗೆ ಆರಂಭದಲ್ಲಿ ವಿರೋಧ ವ್ಯಕ್ತವಾಗಿದ್ದು, ಬೀದರ್‌ನಿಂದ ಆರಂಭವಾಗಿರುವ ಅವರ ಹೋರಾಟದಿಂದ ಬಿಜೆಪಿ ಶಾಸಕರು, ಪಕ್ಷ ಮುಖಂಡರೂ ದೂರ ಉಳಿಯುವ ಮೂಲಕ ರೆಬೆಲ್ ನಾಯಕರುಗಳಿಗೆ ಬಿಸಿ ಮುಟ್ಟಿಸಲು ಮುಂದಾಗಿದ್ದಷ್ಟೇ ಅಲ್ಲ ಗ್ರಾಮಗಳಲ್ಲಿ ಪಕ್ಷದ ಕಾರ್ಯಕರ್ತರು ಯತ್ನಾಳ್ ತಂಡವನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆದಿದೆ.
ಐತಿಹಾಸಿಕ ನರಸಿಂಹ ಝರಣಾ ದೇಸ್ಥಾವನದಲ್ಲಿ ದರ್ಶನ ಪಡೆದ ಯತ್ನಾಳ್ ಅವರ ನೇತೃತ್ವದ ತಂಡ ನಂತರ ಬೀದರ್ ದಕ್ಷಿಣ ಕ್ಷೇತ್ರದ ಧರ್ಮಾಪೂರ ಗ್ರಾಮಕ್ಕೆ ಭೇಟಿ ನೀಡಿದ್ದ ಸಂದರ್ಭ ಅಲ್ಲಿನ ಬಿಜೆಪಿ ಕಾರ್ಯಕರ್ತರು ಸ್ಥಳೀಯ ಶಾಸಕರಿಗೆ ಮಾಹಿತಿಯೇ ನೀಡಿಲ್ಲ, ಸ್ಥಳೀಯ ಬಿಜೆಪಿ ಮುಖಂಡರಿಗೂ ಕರೆ ನೀಡಿಲ್ಲ, ಹೀಗಿದ್ದಾಗ ಗೊಂದಲ ಸೃಷ್ಟಿಯಾಗಿ, ಕಾರ್ಯಕರ್ತರನ್ನು ಗೊಂದಲ್ಲಕ್ಕೀಡು ಮಾಡಲಾಗಿದೆ ಇದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದಾಗ ಸ್ಥಳದಲ್ಲಿದ್ದ ಯತ್ನಾಳ ಪರ ಜನರ ಮಧ್ಯ ಮಾತಿನ ಚಕಮಕಿಯೂ ನಡೆಯಿತು.ಯತ್ನಾಳ್ ಅವರು ರಾಜ್ಯದ ಬಿಜೆಪಿ ಮುಖಂಡರನ್ನು, ಜಿಲ್ಲೆಯ ಮುಖಂಡರನ್ನು ಕಡೆಗೆಣಿಸಿದ್ದಾರೆ. ಬ್ಯಾನರ್‌ಗಳಲ್ಲಿ ಕೇವಲ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ ಶಾ ಹಾಗೂ ಪಕ್ಷ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಅವರ ಭಾವಚಿತ್ರಗಳನ್ನು ಮಾತ್ರ ಹಾಕಿ ಬಿಜೆಪಿಯನ್ನು ಒಡೆಯುವ ಯತ್ನ ನಡೆಸಿದ್ದಾರೆ ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.
ಯತ್ನಾಳ್ ಅವರ ಈ ಹೋರಾಟಕ್ಕೆ ಜಿಲ್ಲೆಯಿಂದ ಬಿಜೆಪಿ ವಿಭಾಗೀಯ ಮುಖಂಡ ಈಶ್ವರಸಿಂಗ್ ಠಾಕೂರ್, ಮಾಜಿ ಶಾಸಕ ಪ್ರಕಾಶ ಖಂಡ್ರೆ ಹೊರತುಪಡಿಸಿದರೆ ಬಿಜೆಪಿಯ ಪ್ರಮುಖ ನಾಯಕರ್ಯಾರೂ ಸಾಥ್ ನೀಡಿದಿರುವದು ಸ್ಪಷ್ಟವಾಗಿ ಕಾಣುತ್ತಿತ್ತು. ಒಟ್ಟಾರೆ ಯತ್ನಾಳ್ ಅವರ ಈ ಹೋರಾಟಕ್ಕೆ ಆರಂಭದಲ್ಲಿ ವಿರೋಧಾಭಾಸದ ಸ್ವಾಗತ ಸಿಕ್ಕಂತಾಗಿದೆ.----
ಫೈಲ್ 25ಬಿಡಿ2