ನಿರಂತರ ಮಳೆಗೆ ಜಿಲ್ಲೆಯಲ್ಲಿ 330ಕ್ಕೂ ಅಧಿಕ ಮನೆಗಳಿಗೆ ಹಾನಿ

KannadaprabhaNewsNetwork |  
Published : Sep 29, 2025, 03:02 AM IST
(ಫೋಟೊ 28ಬಿಕೆಟಿ1,(1) ನಿರಂತರ ಮಳೆಗೆ ಮನೆಯ ಮೇಲ್ಛಾವಣೆ ಕುಸಿದು 75 ವರ್ಷದ ಶಶಿಕಲಾ ದಾಬಡೆ ಗಾಯಗೊಂಡಿದ್ದಾರೆ) | Kannada Prabha

ಸಾರಾಂಶ

ಬಾಗಲಕೋಟೆ : ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಮುಧೋಳ, ಬೀಳಗಿ, ಕೆರೂರ, ಬಾದಾಮಿ, ಮಹಾಲಿಂಗಪುರ ಸೇರಿದಂತೆ ವಿವಿಧೆಡೆ ಮಳೆಯಿಂದ 330ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಬಾಗಲಕೋಟೆ ಹಳೆ ನಗರದ ಕಿಲ್ಲಾ ಬಡಾವಣೆಯಲ್ಲಿನ ಮಣ್ಣಿನ ಮನೆಗಳು ಸಹ ಕುಸಿಯಲಾರಂಭಿಸಿವೆ. ಮನೆ ಕುಸಿತದಿಂದ ಓರ್ವ ಮಹಿಳೆ ಗಾಯಗೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಕಳೆದೆರಡು ದಿನಗಳಿಂದ ಜಿಲ್ಲೆಯಲ್ಲಿ ಸುರಿದ ನಿರಂತರ ಮಳೆಯ ಪರಿಣಾಮ ಜಿಲ್ಲೆಯ ಮುಧೋಳ, ಬೀಳಗಿ, ಕೆರೂರ, ಬಾದಾಮಿ, ಮಹಾಲಿಂಗಪೂರ ಸೇರಿದಂತೆ ವಿವಿಧೆಡೆ ಮಳೆಯಿಂದ 330ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿದ್ದು, ಬಾಗಲಕೋಟೆ ಹಳೆ ನಗರದ ಕಿಲ್ಲಾ ಬಡಾವಣೆಯಲ್ಲಿನ ಮಣ್ಣಿನ ಮನೆಗಳು ಸಹ ಕುಸಿಯಲಾರಂಭಿಸಿವೆ. ಮನೆ ಕುಸಿತದಿಂದ ಓರ್ವ ಮಹಿಳೆ ಗಾಯಗೊಂಡಿದ್ದಾರೆ.

ಎರಡು ದಿನಗಳ ಮಳೆ ಪ್ರಮುಖ ಬೆಳೆಗಳಾದ ಈರುಳ್ಳಿ, ಸೂರ್ಯಕಾಂತಿ, ಮೆಕ್ಕೆ ಜೋಳದಂತಹ ಬೆಳೆ ಸಂಪೂರ್ಣ ನಾಶವಾಗಿದ್ದು, ವಾಣಿಜ್ಯ ಬೆಳೆಯಾದ ಈರುಳ್ಳಿ ಅಂದಾಜು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಾಳಾಗಿದೆ. ಇದರಿಂದಾಗಿ ರೈತ ಸಮೂಹ ಕಂಗಾಲಾಗಿದೆ. ರಬಕವಿ ಬನಹಟ್ಟಿ ಭಾಗದಲ್ಲಿ ಬಾಳೆ ನೆಲಕ್ಕುರಳಿದೆ. ಇದರಿಂದಾಗಿ ಲಕ್ಷಾಂತರ ರೂ.ಗಳ ಹಾನಿಯಾಗಿದೆ.

ಮೇಲ್ಚಾವಣಿ ಕುಸಿದು ತಲೆಗೆ ಗಂಭೀರ ಗಾಯ:

ಬಾಗಲಕೋಟೆ ನಗರದ ಕಿಲ್ಲಾ ಪ್ರದೇಶದಲ್ಲಿ ಮಣ್ಣಿನ ಮನೆಗಳು ಕುಸಿಯುತ್ತಿದ್ದು, ಜೀವಭಯದಲ್ಲಿ ಮಣ್ಣಿನ ಮನೆಯಲ್ಲಿ ವಾಸಿಸುತ್ತಿರುವ ಕುಟುಂಬಗಳು ಭಯದಲ್ಲೇ ಬದುಕುತ್ತಿವೆ. ನಿರಂತರ ಮಳೆಗೆ ಮನೆಯ ಮೇಲ್ಚಾವಣಿ ಕುಸಿದು 75 ವರ್ಷದ ಶಶಿಕಲಾ ದಾಬಡೆ ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಮನೆಯಲ್ಲಿ ಇನ್ನುಳಿದವರು ಪಾರಾಗಿದ್ದಾರೆ. ಮನೆ ಕುಸಿತದ ಸ್ಥಳಕ್ಕೆ ಬಾಗಲಕೋಟೆ ಮಾಜಿ ಶಾಸಕ ವೀರಣ್ಣ ಚರಂತಿಮಠ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೆಪ್ಟೆಂಬರ್ 21 ರಿಂದ 27 ರವರೆಗೆ 40 ಮಿಮೀ ಮಳೆ ಆಗಬೇಕಿತ್ತು. 93 ಮಿಮೀ ಮಳೆಯಾಗಿದೆ. ಪ್ರತಿಶತ 130ರಷ್ಟು ಮಳೆ ಹೆಚ್ಚಾಗಿ ಆಗಿದೆ.ಜನವಸತಿ ಪ್ರದೇಶಗಳಿಗೆ ಸಮಸ್ಯೆ ಇಲ್ಲ:

ಘಟಪ್ರಭಾ ನದಿ ಹಾಗೂ ಇತರೆ ಹಳ್ಳಗಳಿಂದ ಮುಧೋಳ ತಾಲೂಕಿನ ಮಿರ್ಜಿ, ಚನ್ನಾಳ ಉತ್ತೂರ-ಜಾಲಿಬೇರ, ಮುದೋಳ, ಜೀರಗಾಳ ಸೇತುವೆಗಳು ಹಾಗೂ ರಬಕವಿ ಬನಹಟ್ಟಿ ತಾಲೂಕಿನ ತಾಲೂಕಿನ ಡವಳೇಶ್ವರ ಸೇತುವೆ ಮೇಲೆ ನೀರು ಬಂದಿರುತ್ತದೆ. ಯಾವುದೇ ಜನವಸತಿ ಪ್ರದೇಶಗಳಿಗೆ ಸಮಸ್ಯೆ ಇರಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ

ಮಳೆ ವಿವರ: ಮಿಮೀಗಳಲ್ಲಿ (27ರ ಬೆ.8.30 ರಿಂದ 28ರ ಬೆ. 8.30 ರವರೆಗೆ)

1. ಬಾದಾಮಿ-2.2

2 ಬಾಗಲಕೋಟೆ-4.2

3. ಬೀಳಗಿ-6.6

4. ಹುನಗುಂದ-1.3

5. ಜಮಖಂಡಿ-8.3

6. ಮುಧೋಳ-4.2

7. ಗುಳೇದಗುಡ್ಡ-3.4

8. ಇಲಕಲ್ಲ-0.9

9. ರಬಕವಿ-7.2

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ