ರಂಗಭೂಮಿಗೆ ಪಿ. ಗಂಗಾಧರಸ್ವಾಮಿ ಕೊಡುಗೆ ಅಪಾರ: ಡಾ. ನಿಂಗು ಸೊಲಗಿ

KannadaprabhaNewsNetwork |  
Published : Sep 28, 2026, 02:00 AM IST
ಕಾರ್ಯಕ್ರಮದಲ್ಲಿ ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಮಾತನಾಡಿದರು. | Kannada Prabha

ಸಾರಾಂಶ

ಮೂಲತಃ ಮುಂಡರಗಿಯವರಾದ ಪಿ. ಗಂಗಾಧರಸ್ವಾಮಿ ಬಯಲು ಸೀಮೆಯಿಂದ ಬಂದು ನಾಡಿನಾದ್ಯಂತ ರಂಗಚಟುವಟಿಕೆಗಳನ್ನು ವಿಸ್ತರಿಸಿದ ಮೇರು ರಂಗಕರ್ಮಿಯಾಗಿದ್ದರು.

ಖ್ಯಾತ ರಂಗ ನಿರ್ದೇಶಕ ದಿ. ಪಿ. ಗಂಗಾಧರಸ್ವಾಮಿ ಅವರ ನುಡಿನಮನ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಮುಂಡರಗಿ

ಮೂಲತಃ ಮುಂಡರಗಿಯವರಾದ ಪಿ. ಗಂಗಾಧರಸ್ವಾಮಿ ಬಯಲು ಸೀಮೆಯಿಂದ ಬಂದು ನಾಡಿನಾದ್ಯಂತ ರಂಗಚಟುವಟಿಕೆಗಳನ್ನು ವಿಸ್ತರಿಸಿದ ಮೇರು ರಂಗಕರ್ಮಿಯಾಗಿದ್ದರು ಎಂದು ಮಕ್ಕಳ ಸಾಹಿತಿ ಡಾ. ನಿಂಗು ಸೊಲಗಿ ಹೇಳಿದರು.

ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಶನಿವಾರ ಸಂಜೆ ಪಟ್ಟಣದ ಅನ್ನದಾನೀಶ್ವರ ಕನ್ನಡ ಸಾಹಿತ್ಯ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಖ್ಯಾತ ರಂಗ ನಿರ್ದೇಶಕ ದಿ. ಪಿ. ಗಂಗಾಧರಸ್ವಾಮಿ ಅವರ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮುದಾಯ ಸಾಂಸ್ಕೃತಿಕ ಸಂಘಟನೆಯ ಪ್ರಮುಖ ಕಾರ್ಯಕರ್ತರಾಗಿ, ಪ್ರಧಾನ ಕಾರ್ಯದರ್ಶಿಯಾಗಿ ನಾಡಿನುದ್ದಕ್ಕೂ ಜನಚಳವಳಿ ಹಾಗೂ ಬೀದಿ ನಾಟಕಗಳ ಮೂಲಕ ರಂಗ ಸಂಸ್ಕೃತಿಯನ್ನು ಪಸರಿಸಿದರು. ರಂಗಾಯಣದಲ್ಲಿ ಬಿ.ವಿ. ಕಾರಂತರೊಂದಿಗೆ, ಹೆಗ್ಗೋಡಿನ ನೀನಾಸಂ ರಂಗಶಾಲೆಯಲ್ಲಿ ಹಾಗೂ ಆದರ್ಶ ಫಿಲ್ಮ್ ಇನ್‌ಸ್ಟಿಟ್ಯೂಟ್‌ನಲ್ಲಿ ರಂಗಶಿಕ್ಷಕರಾಗಿ ಸಾವಿರಾರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದಾರೆ. ಶ್ವೇತ ಸಂಘಟನೆ, ಮಕ್ಕಳ ರಂಗಭೂಮಿ, ಬಯಲಾಟ ಮತ್ತು ದೊಡ್ಡಾಟ ಕಲೆಗಳನ್ನು ಆಧುನಿಕ ರಂಗಭೂಮಿಯೊಂದಿಗೆ ಬೆಸೆದ ಕೀರ್ತಿ ಪಿ.ಗಂಗಾಧರಸ್ವಾಮಿಗೆ ಸಲ್ಲುತ್ತದೆ ಎಂದು ಸ್ಮರಿಸಿದರು.

ಶಸಾಪ ಗೌರವಾಧ್ಯಕ್ಷ ಆರ್.ಎಲ್. ಪೊಲೀಸ್ ಪಾಟೀಲ ಹಾಗೂ ತಾಲೂಕಾ ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಮಾತನಾಡಿದರು.

ವಿಶ್ರಾಂತ ಪ್ರಾಚಾರ್ಯ ಪ್ರೊ.ಎ.ಬಿ‌. ಹಿರೇಮಠ ಅಧ್ಯಕ್ಷತೆ ವಹಿಸಿದ್ದರು.

ಈ ವೇಳೆ ಎನ್.ಎನ್. ಕಲಕೇರಿ, ಎಸ್.ಬಿ. ಕರಿಭರಮಗೌಡ್ರ, ಶಂಕರ್ ಕುಕನೂರ, ಸಿ.ಕೆ. ಗಣಪ್ಪನವರ, ಕೆ.ಕೆ. ಬಿಳಿಮಗ್ಗದ, ಆರ್.ಕೆ. ರಾಯನಗೌಡ್ರ, ಎಸ್.ವಿ. ಪಾಟೀಲ, ಸಿ.ವಿ. ಪಾಟೀಲ, ವಿ.ಸಿ. ಉಳ್ಳಾಗಡ್ಡಿ, ಎಸ್.ಬಿ. ಹಿರೇಮಠ, ಐ.ಎಸ್. ಮುಲ್ಲಾ, ಎಚ್.ಎ. ಗಾಯತ್ರಿದೇವಿ, ಅಕ್ಕಮಹಾದೇವಿ ಕೊಟ್ಟೂರಶೆಟ್ಟರ, ಶಶಿಕಲಾ ಕುಕನೂರ, ಆರ್.ವೈ. ಪಾಟೀಲ ಸೇರಿ ಅನೇಕರಿದ್ದರು. ವೀಣಾ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೋಷಿತರಿಗೆ ನೆಲೆಗಟ್ಟು ಕಲ್ಪಿಸಿದ ಶರಣರ ಕಾಯಕ ತತ್ವ
ಕಲ್ಯಾಣ ಕರ್ನಾಟಕ ಪ್ರತಿಭಾವಂತ ಕಲಾದವಿದರು