ಸ್ವಾಗತಾರ್ಹ ಉದ್ಯಮ ಸ್ನೇಹಿ, ಎಂಎಸ್ಎಂಇ ಬೆಂಬಲಿತ ಬಜೆಟ್

KannadaprabhaNewsNetwork | Published : Jul 24, 2024 12:20 AM

ಸಾರಾಂಶ

ಕೈಗಾರಿಕಾ ಮಹಿಳಾ ಕಾರ್ಮಿಕರಿಗೆ ವಸತಿ, ಮಕ್ಕಳ ಪಾಲನಾ ಕೇಂದ್ರಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ

ಕನ್ನಡಪ್ರಭ ವಾರ್ತೆ ಮೈಸೂರು

ಕೇಂದ್ರ ಸರ್ಕಾರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರು ಮಂಡಿಸಿರುವ ಬಜೆಟ್ ಉದ್ಯಮ ಸ್ನೇಹಿಯಾಗಿದ್ದು, ಎಂಎಸ್ಎಂಇ ಬೆಂಬಲಿತ ಬಜೆಟ್ ಆಗಿದೆ ಎಂದು ಮೈಸೂರು ಕೈಗಾರಿಕೆಗಳ ಸಂಘದ ಅಧ್ಯಕ್ಷ ಪಿ. ವಿಶ್ವನಾಥ್, ಪ್ರಧಾನ ಕಾರ್ಯದರ್ಶಿ ಸುರೇಶ್ ಕುಮಾರ್ ಜೈನ್ ತಿಳಿಸಿದ್ದಾರೆ.

ಉದ್ಯೋಗ ಸೃಷ್ಟಿ ಮತ್ತು ಕೌಶಲ್ಯ ತರಬೇತಿಗೆ 1.48 ಕೋಟಿ ರು. ಮೂಲಕ 20 ಲಕ್ಷ ಯುವ ಜನತೆಗೆ ಕೌಶಲ್ಯ ತರಬೇತಿ, ಸಣ್ಣ ಕೈಗಾರಿಕೆಗಳ ಭದ್ರತೆ ರಹಿತ ಸಾಲ ನೀಡಲು 100 ಕೋಟಿ ರು. ನಿಧಿ(ಸಿಜಿಎಫ್ ಟಿ - ಸ್ಕೀಂ), ಹೈದರಾಬಾದ್- ಬೆಂಗಳೂರು ಕೈಗಾರಿಕಾ ಕಾರಿಡಾರ್, ಪಿಪಿಪಿ ಯೋಜನೆಯಲ್ಲಿ ಕೈಗಾರಿಕಾ ಕಾರ್ಮಿಕರಿಗೆ ಸಮೂಹ ಬಾಡಿಗೆ ವಸತಿ ಯೋಜನೆ, ಕೈಗಾರಿಕಾ ಮಹಿಳಾ ಕಾರ್ಮಿಕರಿಗೆ ವಸತಿ, ಮಕ್ಕಳ ಪಾಲನಾ ಕೇಂದ್ರಕ್ಕೆ ಒತ್ತು ನೀಡಿರುವುದು ಸ್ವಾಗತಾರ್ಹ ಎಂದು ಹೇಳಿದ್ದಾರೆ.

1000 ಐಟಿಐ ಉನ್ನತ ದರ್ಜೆಗೆ ಕ್ರಮ, ಹೊಸ ಉದ್ಯೋಗಿಗಳಿಗೆ ಮೊದಲ ಮೂರು ತಿಂಗಳು 5000 ರು. ವೃತ್ತಿ ವೇತನ, ಹೆಚ್ಚುವರಿ ಉದ್ಯೋಗ ಸೃಷ್ಟಿ 3000 ರು. ಬೆಂಬಲ ಹಣ ಉದ್ಯೋಗದಾತರಿಗೆ, ಪಿಪಿಪಿ ಯೋಜನೆಯಲ್ಲಿ ರಫ್ತು ಹಬ್ ಸ್ಥಾಪನೆ ಮತ್ತು ಈ ಕಾಮರ್ಸ್ ಅಳವಡಿಕೆ, ಪ್ಲಗ್ ಆ್ಯಂಡ್‌ ಪ್ಲೇ ಮಾದರಿ ಉತ್ಪಾದನೆ ಮಾಡಲು ಸಿದ್ಧವಾದ ಕೈಗಾರಿಕಾ ಪಾರ್ಕ್ ಗಳ ಅಭಿವೃದ್ಧಿ, ಮುದ್ರಾ ಯೋಜನೆ ಸಾಲದ ಮಿತಿ 10 ಲಕ್ಷ ರು.ಗಳಿಂದ 20 ಲಕ್ಷ ರು.ಗೆ ಏರಿಕೆ. ಒಟ್ಟಾರೆ ಈ ಬಾರಿ ಬಜೆಟ್ ಕೈಗಾರಿಕೆ ಮತ್ತು ಎಂಎಸ್ಎಂಇಗಳ ಅಭಿವೃದ್ಧಿ ಆಗಲು ಅಗತ್ಯವಾದ ಒತ್ತು ನೀಡಿದೆ. ಆದರೆ ಇವುಗಳ ಅನುಷ್ಠಾನದಲ್ಲಿ ರಾಜ್ಯದ ಇಬ್ಬರು ಕೈಗಾರಿಕಾ ಸಚಿವರ ಮತ್ತು ಕ್ಷೇತ್ರದ ಸಂಸದರ ಪಾತ್ರ ಹೆಚ್ಚು ಎಂದು ಅವರು ತಿಳಿಸಿದ್ದಾರೆ.

Share this article