ಕರುನಾಡಿನ ಜೀವನದಿ, ಕೊಡವರ ಕುಲದೇವಿ ತಾಯಿ ಕಾವೇರಿಯ ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು 58 ಕಿ.ಮೀ. ದೂರವನ್ನು 15 ಮಂದಿ ಭಕ್ತರು ಪಾದಯಾತ್ರೆ ಮೂಲಕ ಕ್ರಮಿಸಿ, ಆರನೇ ವರ್ಷದ ಯಾತ್ರೆ ಮಾಡಿದರು.
ವಿರಾಜಪೇಟೆ: ಕರುನಾಡಿನ ಜೀವನದಿ, ಕೊಡವರ ಕುಲದೇವಿ ತಾಯಿ ಕಾವೇರಿಯ ಪವಿತ್ರ ತೀರ್ಥೋದ್ಭವದ ಹಿನ್ನೆಲೆಯಲ್ಲಿ ವಿರಾಜಪೇಟೆಯಿಂದ ತಲಕಾವೇರಿವರೆಗೆ ಸುಮಾರು 58 ಕಿ.ಮೀ. ದೂರವನ್ನು 15 ಮಂದಿ ಭಕ್ತರು ಪಾದಯಾತ್ರೆ ಮೂಲಕ ಕ್ರಮಿಸಿ, ಆರನೇ ವರ್ಷದ ಯಾತ್ರೆ ಮಾಡಿದರು.
ಶುಕ್ರವಾರ ಮುಂಜಾನೆ ವಿರಾಜಪೇಟೆಯಿಂದ ಆರಂಭಗೊಂಡ ಪಾದಯಾತ್ರೆಯು ಕದನೂರು, ಕಡಂಗ, ನಾಪೋಕ್ಲು, ನೆಲಜಿ, ಬಲ್ಲಮಾವಟಿ ಹಾಗೂ ಅಯ್ಯಂಗೇರಿ ಮಾರ್ಗವಾಗಿ ಸಾಗಿ ಸಂಜೆ 6.35ಕ್ಕೆ ಭಾಗಮಂಡಲ ತಲುಪಿತು. ಯಾತ್ರಾರ್ಥಿಗಳಿಗೆ ಬೆಳಗಿನ ಉಪಾಹಾರವನ್ನು ಕೋಚಮಂಡ ವಿಜಯ ಶೀಲ ಹಾಗೂ ಕುಟುಂಬದವರು, ಮಧ್ಯಾಹ್ನದ ಉಪಾಹಾರವನ್ನು ಕೆಟೋಳ್ಳಿರ ಡಾಲಿ ಹಾಗೂ ಕುಟುಂಬದವರು ಮತ್ತು ಸಂಜೆಯ ಫಲಾಹಾರವನ್ನು ಪುಲಿಕೋಟ್ ಮುಕ್ಕಟೀರ ಕುಟುಂಬದವರು ಒದಗಿಸಿ ಸಹಕರಿಸಿದರು.ಶನಿವಾರ ಭಾಗಮಂಡಲದಿಂದ ವಿವಿಧ ಸಂಘಟನೆಗಳೊಂದಿಗೆ ಕಾವೇರಿ ಭಜನೆ ಮಾಡುತ್ತಾ ಪಾದಯಾತ್ರೆ ಮುಂದುವರಿಸಿದ ಭಕ್ತರು, ತೀರ್ಥೋದ್ಭವಕ್ಕೂ ಮುನ್ನ ತಲಕಾವೇರಿ ತಲುಪಿದರು. ಬಳಿಕ ತಾಯಿ ಕಾವೇರಿಯ ಪವಿತ್ರ ತೀರ್ಥವನ್ನು ಸ್ವೀಕರಿಸಿ, ವಿವಿಧೆಡೆ ಭಕ್ತರಿಗೆ ತೀರ್ಥಪ್ರಸಾದ ವಿತರಿಸಿದರು.ತಾಯಿ ಕಾವೇರಿಯ ಮೇಲಿನ ಅಪಾರ ಭಕ್ತಿ ಹಾಗೂ ಧಾರ್ಮಿಕ ನಂಬಿಕೆಯಿಂದ ಪ್ರತಿವರ್ಷ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಈ ಬಾರಿಯೂ 15 ಮಂದಿ ಭಕ್ತರು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.