ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ಮಾಜಿ ಶಾಸಕ ಖಾದ್ರಿ ನೇತೃತ್ವದಲ್ಲಿ ಪಾದಯಾತ್ರೆ

KannadaprabhaNewsNetwork |  
Published : Oct 01, 2024, 01:30 AM IST
ಪೊಟೋ ಪೈಲ್ ನೇಮ್ ೩೦ಎಸ್‌ಜಿವಿ೨  ತಾಲೂಕಿನ  ಬಾಡ ಗ್ರಾಮದಿಂದ  ಪಾದ ಯಾತ್ರೆಯ ಮೂಲಕ ಆಗಮಿಸಿದರು.೩೦ಎಸ್‌ಜಿವಿ೨-೧ಶಿಗ್ಗಾವಿ ಪಟ್ಟಣದಲ್ಲಿ ಪಾದ ಯಾತ್ರೆ ಮೂಲಕ ಆಗಮಿಸಿ ಮಾಜಿ ಶಾಸಕ ಸಯ್ಯದ ಅಜ್ಜೀಂ ಫೀರ್ ಖಾದ್ರಿ ಮಾತನಾಡಿದರು.ಮೂಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ದ ಎಫ್ ಐಆರ್ ದಾಖಲು ಹಿನ್ನೆಲೆ- ಸಯ್ಯದ ಅಜ್ಜೀಂ ಫೀರ್ ಖಾದ್ರಿ  ಪಾದ ಯಾತ್ರೆ ಮೂಲಕ ರಾಜೀನಾಮೆ ನೀಡಬಾರದು   | Kannada Prabha

ಸಾರಾಂಶ

ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬಾಡ ಗ್ರಾಮದಿಂದ ಶಿಗ್ಗಾಂವಿಯವರೆಗೆ 13 ಕಿಲೋ ಮೀಟರ್‌ ಪಾದಯಾತ್ರೆ ಮೂಲಕ ಪ್ರತಿಭಟನೆ ಮೆರವಣಿಗೆ ಮಾಡಿದರು.

ಶಿಗ್ಗಾಂವಿ: ಮುಡಾ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಬೆಂಬಲಿಸಿ ಮಾಜಿ ಶಾಸಕ ಅಜ್ಜಂಪೀರ ಖಾದ್ರಿ ನೇತೃತ್ವದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಸೋಮವಾರ ಬಾಡ ಗ್ರಾಮದಿಂದ ಶಿಗ್ಗಾಂವಿಯವರೆಗೆ 13 ಕಿಲೋ ಮೀಟರ್‌ ಪಾದಯಾತ್ರೆ ಮೂಲಕ ಪ್ರತಿಭಟನೆ ಮೆರವಣಿಗೆ ಮಾಡಿದರು.

ಪಾದಯಾತ್ರೆ ಆಗಮಿಸಿದ ಬಳಿದ ಡಾ. ಬಿ.ಆರ್‌. ಅಂಬೇಡ್ಕರ್‌, ವೀರರಾಣಿ ಕಿತ್ತೂರ ಚನ್ನಮ್ಮ, ಮಾಬುಸುಬಾನಿ ದರ್ಗಾಕ್ಕೆ ಅಜ್ಜಂಪೀರ ಖಾದ್ರಿ ಭೇಟಿ ನೀಡಿ ಆಶೀರ್ವಾದ ಪಡೆದರು.

ಈ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯನವರು ರಾಜೀನಾಮೆ ನೀಡಬಾರದು. ಬಿಜೆಪಿಯವರಿಗೆ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ನೈತಿಕ ಹಕ್ಕಿಲ್ಲ. ಸಿದ್ದರಾಮಯ್ಯನವರ ವಿರುದ್ಧ ಬಿಜೆಪಿ ಷಡ್ಯಂತ್ರ ಮಾಡುತ್ತಿದೆ. ರಾಜಭವನವನ್ನ ಬಿಜೆಪಿ ದುರುಪಯೋಗ ಮಾಡಿಕೊಳ್ಳುತ್ತಿದೆ. ಭ್ರಷ್ಟಾಚಾರ ರಹಿತ ಆಡಳಿತ ನೀಡಿದವರು ಸಿದ್ದರಾಮಯ್ಯನವರು. ಐದು ಗ್ಯಾರಂಟಿಯನ್ನು ನೀಡುವ ಮೂಲಕ ರಾಜ್ಯದ ಜನರಿಗೆ ಸಾಕಷ್ಟು ಯೋಜನೆಗಳನ್ನು ನೀಡಿದ್ದಾರೆ ಎಂದರು.ಬಿಜೆಪಿ ನಾಯಕರ ಮೇಲೂ ಎಫ್‌ಐಆರ್ ಆಗಿದೆ ಅವರು ಕೂಡಾ ರಾಜೀನಾಮೆಯನ್ನು ನೀಡಬೇಕು ಎಂದು ಆಗ್ರಹಿಸಿದರು. ಈ ಸಂದರ್ಭದಲ್ಲಿ ಹಲವಾರು ಮುಖಂಡರುಗಳು ಮಾತನಾಡಿದರು,

ಅಣ್ಣಪ್ಪ ಮಾಣಿ, ಮಂಜುನಾಥ ತಿಮ್ಮಾಪೂರ, ಬೀರೇಶಕುಮಾರ ಜೆಟ್ಟಪ್ಪನವರ, ರವಿಕಾಂತ ಕೋಣಪ್ಪನವರ ಸೇರಿದಂತೆ ಹಲವಾರು ಮುಖಂಡರು, ಕಾರ್ಯಕರ್ತರು, ಸಿದ್ದರಾಮಯ್ಯನವರ ಅಭಿಮಾನಿಗಳು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಬ್ಬಳ್ಳಿ ವಿವಸ್ತ್ರ ಕೇಸ್‌ನಲ್ಲಿ ತಲೆದಂಡಕ್ಕೆ ಬಿಜೆಪಿ ಗಡುವು
ಶೀಘ್ರ ‘ಬಾಕಿ ಲಕ್ಷ್ಮಿ’ ಬಿಡುಗಡೆ - ಬಿಪಿಎಲ್‌ ರದ್ದಾದವರಿಗೆ ಇಲ್ಲ ಗೃಹಲಕ್ಷ್ಮಿ ಹಣ