24,25ರಂದು ರಂದು ಕಲ್ಲಾಡ್ಚ, ಪುತ್ತರಿ ಹಬ್: ರಾಜ ಪೂವಣ್ಣ

KannadaprabhaNewsNetwork |  
Published : Nov 21, 2026, 02:45 AM IST
ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದ ಸಭಾಂಗಣದಲ್ಲಿ ದೇವಾಲಯದವ್ಯವಸ್ಥಾಪನಾ ಸಮಿತಿ ಆಯೋಜಿಸಲಾಗಿದ್ದ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ಮಾತನಾಡಿದರು . | Kannada Prabha

ಸಾರಾಂಶ

ಪ್ರಸಿದ್ಧ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಪುತ್ತರಿ (ಹುತ್ತರಿ) ಹಾಗೂ ಕಲ್ಲಾಡ್ಚ ಹಬ್ಬವನ್ನು ಪರಂಪರೆಯಂತೆ ಆಚರಿಸಲಾಗುವುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ತಿಳಿಸಿದ್ದಾರೆ.

ನಾಪೋಕ್ಲು: ಪ್ರಸಿದ್ಧ ಪಾಡಿ ಶ್ರೀ ಇಗ್ಗುತಪ್ಪ ದೇವಾಲಯದಲ್ಲಿ ಪುತ್ತರಿ (ಹುತ್ತರಿ) ಹಾಗೂ ಕಲ್ಲಾಡ್ಚ ಹಬ್ಬವನ್ನು ಪರಂಪರೆಯಂತೆ ಆಚರಿಸಲಾಗುವುದು ಎಂದು ದೇವಾಲಯದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಾಚಮಂಡ ರಾಜ ಪೂವಣ್ಣ ತಿಳಿಸಿದ್ದಾರೆ.

ದೇವಾಲಯದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಹಬ್ಬದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, 24ರಂದು ದೇವಾಲಯದಲ್ಲಿ ಕಲ್ಲಾಡ್ಚ ಹಾಗೂ 25ರಂದು ಪುತ್ತರಿ ಹಬ್ಬವನ್ನು ಆಚರಿಸಲಾಗುತ್ತದೆ ಎಂದು ಮಾಹಿತಿ ನೀಡಿದರು.

ದೇವಾಲಯದ ಸುತ್ತಮುತ್ತಲಿನ ಆವರಣದ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಸನ್ನಿಧಿಯಲ್ಲಿ ಹೂವಿನ ಮತ್ತು ವಿದ್ಯುತ್ ದೀಪಗಳ ಅಲಂಕಾರ ಹಾಗೂ ಕದಿರು ತೆಗೆಯುವ ಗದ್ದೆಯ ವರೆಗಿನ ದಾರಿಗೆ ವಿದ್ಯುತ್ ದೀಪ ಅಳವಡಿಕೆಗೆ ಆಡಳಿತ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗುವುದು. ತಕ್ಕ ಮುಖ್ಯಸ್ಥರ ಮನೆಯಿಂದ ಎತ್ತು ಹೋರಾಟದ ಆಗಮನದೊಂದಿಗೆ ಉತ್ಸವ ಆರಂಭಗೊಳ್ಳಲಿದೆ ಎಂದರು.ದೇವಾಲಯದ ಪ್ರಧಾನ ಅರ್ಚಕರು ವಿಶೇಷ ಪೂಜೆ ಪುರಸ್ಕಾರಗಳನ್ನು ನೆರವೇರಿಸಲಿದ್ದಾರೆ. ಮಧ್ಯಾಹ್ನ ಭಕ್ತರಿಗೆ ಅನ್ನಸಂತರ್ಪಣೆ, ದೇವರ ನಿತ್ಯ ಬಲಿಯ ನಂತರ ಮಲ್ಮಕ್ಕೆ ತೆರಳಿ ಈ ಹಿಂದೆ ವಿಧಿಸಲಾಗಿದ್ದ ದೇವರ ಕಟ್ಟು ಸಡಿಲಿಸಲಾಗುವುದು ಎಂದರು. ಪೂರ್ವಭಾವಿ ಸಭೆಯಲ್ಲಿ ವ್ಯವಸ್ಥಾಪನಾ ಸಮಿತಿ ನಿರ್ದೇಶಕ ಪರದಂಡ ವಿಠಲ ಭೀಮಯ್ಯ, ಲಾಲಾ ನರೇಂದ್ರ, ಕೋಟೆರ ನೈಲ ಚಂಗಪ್ಪ, ಮಾದಂಡ ಜಗದೀಶ್, ಕುಡಿಯರ ರಮೇಶ್, ಪಾರುಪತ್ತೆಗಾರ ಪ್ರಿನ್ಸ್ ತಮ್ಮಪ್ಪ, ಮುಖ್ಯ ಅರ್ಚಕ ಕುಶ ಭಟ್, ಶ್ರೀಕಾಂತ್ ಹಾಗೂ ಕಂಬೆಯಂಡ ಗಣೇಶ್, ಕನಿಯರಸಂಜು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬೇಸಿಗೆಗೆ ನೀರು ಆಪೋಶನ: ಜಲಕ್ಷಾಮ ಭೀತಿ !
371ಜೆ ಹೋರಾಟಕ್ಕೆ ಕಾಲೇಜು ವಿದ್ಯಾರ್ಥಿಗಳ ಅಭೂತಪೂರ್ವ ಬೆಂಬಲ