ಹರಪನಹಳ್ಳಿ: ಕಾಶ್ಮೀರದ ಪಹಲ್ಗಾಮ್ ಜಿಲ್ಲೆಯಲ್ಲಿ ಉಗ್ರರಿಂದ ಹತರಾದ ವ್ಯಕ್ತಿಗಳ ಆತ್ಮಕ್ಕೆ ಶಾಂತಿ ಕೋರಿ ಇಲ್ಲಿಯ ಕಾಂಗ್ರೆಸ್ ವತಿಯಿಂದ ಪಟ್ಟಣದ ಐ.ಬಿ. ವೃತ್ತದಲ್ಲಿ ಶನಿವಾರ ರಾತ್ರಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಭಯೋತ್ಪಾದಕರಿಂದ ಹತರಾದ ಮಂಜುನಾಥರಾವ್, ಭರತ ಭೂಷಣ, ಮಧುಸೂದನರಾವ್ ಅವರ ಭಾವಚಿತ್ರ ಹಿಡಿದು ಹಾಗೂ ಮೇಣದಬತ್ತಿ ಹಚ್ಚಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ ಅವರು ಅಮಾಯಕ ಪ್ರವಾಸಿಗರನ್ನು ಉಗ್ರರು ಕೊಲೆ ಮಾಡಿದ್ದು ಅತ್ಯಂತ ಖಂಡನೀಯ. ಕೇಂದ್ರ ಸರ್ಕಾರ ಉಗ್ರರನ್ನು ಸದೆಬಡಿಯಬೇಕು ಎಂದು ಒತ್ತಾಯಿಸಿದರು.ಪಾಕಿಸ್ತಾನದಿಂದ ಭಾರತಕ್ಕೆ ನುಸುಳುಕೋರರನ್ನು ತಡೆಯಬೇಕು ಹಾಗೂ ಪಕ್ಷ ಭೇದ ಮರೆತು ಒಗ್ಗಟ್ಟಾಗಿ ಹೊರಗಿನ ಭಯೋತ್ಪಾದನೆಯನ್ನು ಎದುರಿಸಬೇಕು ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಬಸವರಾಜ ಸಂಗಪ್ಪನವರ್ ಮಾತನಾಡಿ, ಇದು ಕೇಂದ್ರ ಸರ್ಕಾರದ ಭದ್ರತಾ ವೈಫಲ್ಯ, ಉಗ್ರರಿಗೆ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.ವಕೀಲ ಬಂಡ್ರಿ ಗೋಣಿಬಸಪ್ಪ ಮಾತನಾಡಿ, ಭಯೋತ್ಪಾದನೆ ಎಂಬುದು ಯಾವುದೇ ಜಾತಿ, ಧರ್ಮಕ್ಕೆ ಸಂಬಂಧಿಸಿದ್ದಲ್ಲ ಎಂದ ಅವರು, ಈ ಕೃತ್ಯ ಅತ್ಯಂತ ಖಂಡನೀಯ ಎಂದರು.
ವಿವಿಧ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ವಿ. ಅಂಜಿನಪ್ಪ, ಕೆ. ಕುಬೇರಗೌಡ, ಎಸ್. ಮಂಜುನಾಥ, ಪುರಸಭಾ ಅಧ್ಯಕ್ಷೆ ಫಾತಿಮಾಬಿ, ಮುಖಂಡರಾದ ಹುಲ್ಲಿಕಟ್ಟಿ ಚಂದ್ರಪ್ಪ, ಮೈದೂರು ರಾಮಣ್ಣ, ಮುತ್ತಿಗೆ ಜಂಬಣ್ಣ, ವಕೀಲರ ಸಂಘದ ಅಧ್ಯಕ್ಷ ಟಿ. ವೆಂಕಟೇಶ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಜಯಲಕ್ಷ್ಮಿ, ವಕೀಲ ಕಣವಿಹಳ್ಳಿ ಮಂಜುನಾಥ, ಲಾಟಿದಾದಾಪೀರ, ಟಿ.ಎಚ್.ಎಂ. ಮಂಜುನಾಥ, ಇಸ್ಮಾಯಿಲ್ ಎಲಿಗಾರ, ಕಲ್ಲಹಳ್ಳಿ ಅರವಿಂದ, ಹೇಮಣ್ಣ ಮೋರಗೇರಿ, ಉಮಾಮಹೇಶ್ವರಿ, ಸುಮಾ ಜಗದೀಶ, ಕವಿತಾ ಸುರೇಶ, ಉದಯಶಂಕರ, ಶಮಿಉಲ್ಲಾ, ಚಿಕ್ಕೇರಿಬಸಪ್ಪ, ಶಶಿಕುಮಾರನಾಯ್ಕ, ಅಗ್ರಹಾರ ಅಶೋಕ, ಎಲ್. ಮಂಜನಾಯ್ಕ, ಮತ್ತೂರು ಬಸವರಾಜ, ಎಂ. ಜಾವೇದ್, ಪ್ರಸಾದ್ ಕಾವಡಿ, ಒ. ಮಹಾಂತೇಶ, ಕಲ್ಲಹಳ್ಳಿ ಗೋಣೆಪ್ಪ ಪಾಲ್ಗೊಂಡಿದ್ದರು.