ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಟ್ಟಣದ ಶ್ರೀ ಗಣಪತಿ ಪೆಂಡಾಲಿನಲ್ಲಿ ಕನ್ನಡಪ್ರಭ, ಸುವರ್ಣ ವಾಹಿನಿ ಮತ್ತು ಜನಮಿತ್ರ ಸಹಯೋಗದಲ್ಲಿ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಯನ್ನು ಚಿತ್ರ ಬಿಡಿಸುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು, ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರೌಢಶಾಲಾ ಅಂತದಲ್ಲಿ ಹೆಚ್ಚು ಹೆಚ್ಚು ಚಿತ್ರ ಬಿಡಿಸುವುದರ ಮೂಲಕ ತಮ್ಮ ಮನಸ್ಸನ್ನು ವೃದ್ಧಿ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿ ಸಿಕ್ಕ ಅವಕಾಶಗಳನ್ನು ಮಕ್ಕಳು ಬಳಸಿಕೊಂಡು ದೊಡ್ಡ ಮಟ್ಟಕ್ಕೆ ತಾಲೂಕಿನ ಹೆಸರನ್ನು ಬೆಳೆಸಬೇಕು ಎಂದರು.
ಭಾರತೀಯ ಕಾರ್ಯನಿರತ ಪತ್ರಕರ್ತರ ಸಂಘದ ರಾಷ್ಟ್ರೀಯ ಅಧ್ಯಕ್ಷ ಬಿ. ವಿ. ಮಲ್ಲಿಕಾರ್ಜುನಯ್ಯ ಮಾತನಾಡಿ, ಪರಿಸರ ಮತ್ತು ಪ್ರಾಣಿ ಸಂಕುಲವನ್ನು ಬೆಳೆಸುವ ದೃಷ್ಠಿಯಿಂದ ಈ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿದ್ದು ಮಕ್ಕಳ ಪ್ರತಿಭೆಯನ್ನು ಹೊರ ಹೊಮ್ಮಲು ಸದಾವಕಾಶವಾಗಿದ್ದು ಗೆಲುವು ಸೋಲುಗಳನ್ನು ವಿದ್ಯಾರ್ಥಿಗಳು ಸಮನಾಗಿ ಸ್ವೀಕರಿಸಿ ಮುನ್ನಡೆಯಬೇಕು, ಗೆದ್ದವರು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ನಂತರ ರಾಜ್ಯಮಟ್ಟದಲ್ಲಿ ಭಾಗವಹಿಸುವ ಅವಕಾಶವಿದ್ದು ೫೦ ಸಾವಿರ ರು. ಬಹುಮಾನವನ್ನು ಕೂಡ ಪಡೆಯಬಹುದಾಗಿದೆ ಆದ್ದರಿಂದ ಮಕ್ಕಳು ಶ್ರದ್ಧೆಯಿಂದ ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿ ಎಂದರು.ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹಡೇನಹಳ್ಳಿ ಲೋಕೇಶ್, ಹಿರಿಯ ಪತ್ರಕರ್ತ ಹಾಗೂ ಕನ್ನಡ ಪರ ಹೋರಾಟಗಾರ ಪುಟ್ಟಣ್ಣಗೋಕಾಕ್, ಬಿಆರ್‌ಸಿ ಅನಿಲ್, ಶ್ರೀಕ್ಷೇತ್ರ ಭಾಗವತ ಪೀಠದ ಧರ್ಮದರ್ಶಿಗಳಾದ ಶ್ರೀಶವಿಠಲದಾಸರು, ಚಿತ್ರಕಲಾ ಶಿಕ್ಷಕರಾದ ಮಂಜುನಾಥ್, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಸಿದ್ದರಾಜು, ಕನ್ನಡಪ್ರಭ ತಾಲೂಕು ವರದಿಗಾರರಾದ ನಂದನ್‌ಪುಟ್ಟಣ್ಣ, ದಯಾನಂದ್ ಶೆಟ್ಟಿಹಳ್ಳಿ ಮತ್ತಿತರಿದ್ದರು.ನೂರಕ್ಕೂ ಹೆಚ್ಚು ಮಕ್ಕಳು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಪ್ರಥಮ ಬಹುಮಾನ ಉದಯಪುರ ಸರ್ಕಾರಿ ಶಾಲೆಯ ಜೀವನ್, ದ್ವಿತೀಯ ಬಹುಮಾನ ಮೇಗಲಕೇರಿ ಸರ್ಕಾರಿ ಶಾಲೆಯ ಮೊಹಮ್ಮದ್ ಫೌಜಲ್, ತೃತೀಯ ಬಹುಮಾನ ಹಿರೀಸಾವೆ ಸರ್ಕಾರಿ ಶಾಲೆಯ ಎಸ್. ಪಿ. ಧನ್ಯಶ್ರೀ, ಸಮಾಧಾನಕರ ಬಹುಮಾನ ಮೇಗಲಕೇರಿ ಸರ್ಕಾರಿ ಶಾಲೆಯ ಮೊಹಮದ್‌ಗೌಸ್, ಉದಯಪುರ ಸರ್ಕಾರಿ ಶಾಲೆಯ ವಿಶ್ವಾಸ್ ಡಿ. ಆರ್, ಗೂರಮಾರನಹಳ್ಳಿ ಸರ್ಕಾರಿ ಶಾಲೆಯ ಜೆ. ಎಸ್. ಚರೀಶ, ಗೂರಮಾರನಹಳ್ಳಿ ಸರ್ಕಾರಿ ಶಾಲೆಯ ಎಂ. ಎಂ. ಪ್ರಿಯಾಂಕ ವಿಜೇತರಾದರು. ಭಾಗವಹಿಸಿದ್ದ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರಶಸ್ತಿ ಪತ್ರ ವಿತರಿಸಲಾಯಿತು.