- ದಾವಿವಿ ಕುಲಪತಿ ಪ್ರೊ. ಬಿ.ಡಿ. ಕುಂಬಾರರಿಂದ ಉದ್ಘಾಟನೆ - - - ದಾವಣಗೆರೆ: ವಜ್ರಮಹೋತ್ಸವ ಸಂಭ್ರಮದಲ್ಲಿರುವ ದಾವಣಗೆರೆಯ ದೃಶ್ಯಕಲಾ ಮಹಾವಿದ್ಯಾಲಯದ ದೃಶ್ಯವಿಶ್ವ ಕಲಾ ಗ್ಯಾಲರಿಯಲ್ಲಿ ಜ.20ರಂದು ಮಧ್ಯಾಹ್ನ 12.30 ಗಂಟೆಗೆ ಚಿತ್ರಕಲಾ ಪ್ರದರ್ಶನ- ಕಾರ್ಯಾಗಾರ ಹಾಗೂ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಉಪನ್ಯಾಸಕ ದತ್ತಾತ್ರೇಯ ಎನ್. ಭಟ್ ಹೇಳಿದರು.
ಇದೇ ವೇಳೆ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ನಡೆಯಲಿದೆ. ಗ್ಯಾಲರಿ-1 ರಲ್ಲಿ ಧಾರವಾಡದ ಉಪನ್ಯಾಸಕ ಶಶಿಧರ್ ಎಂ. ಲೋಹಾರ, ಗ್ಯಾಲರಿ-2 ರಲ್ಲಿ ಬೀದರ್‌ನ ಉಪನ್ಯಾಸಕ ಭೀಮರಾವ್ ಕೆ. ಬಡಿಗೇರ, ಗ್ಯಾಲರಿ- 3ರಲ್ಲಿ ಧಾರವಾಡದ ಶಿವಾನಂದ ಕೆ. ಪತ್ತಾರ ಹಾಗೂ ಗ್ಯಾಲರಿ-4ರಲ್ಲಿ ಬೆಂಗಳೂರಿನ ಉಪನ್ಯಾಸಕ ಬಾಬು ಜತ್ತಕರ್ ಅವರ ರಚನೆಯ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನವಿದೆ. ಜ.20 ರಿಂದ 24ರವರೆಗೆ ಬೆಳಗ್ಗೆ 10.30 ರಿಂದ ಸಂಜೆ 6 ಗಂಟೆಯವರೆಗೆ ಪ್ರದರ್ಶನ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ. ಕಲಾ ಪ್ರದರ್ಶನದಂದು ಪ್ರತಿದಿನ ಕಲಾವಿದದರಿಂದ ನಿಸರ್ಗ ಚಿತ್ರ, ಭಾವಚಿತ್ರ ಹಾಗೂ ರೇಖಾಚಿತ್ರ ಪ್ರಾತ್ಯಕ್ಷಿಕೆ ಮತ್ತು ಕಾರ್ಯಾಗಾರ ಇರುತ್ತದೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಬಾಬು ಜತ್ತಕರ್, ಶಶಿಧರ್ ಎಂ. ಲೋಹರ್, ಶಿವಾನಂದ ಕೆ.ಪತ್ತಾರ್, ಇದ್ದರು.- - - -18ಕೆಡಿವಿಜಿ32.ಜೆಪಿಜಿ:
ಚಿತ್ರಕಲಾ ಪ್ರದರ್ಶನ, ಕಾರ್ಯಾಗಾರ, ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಆಯೋಜನೆ ಕುರಿತು ದತ್ತಾತ್ರೇಯ ಭಟ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.