ಪಾಕಿಸ್ತಾನ ಆರ್ಥಿಕವಾಗಿ ದಿವಾಳಿಯಾಗಿದೆ: ಶಾಸಕ ಪಾಟೀಲ

KannadaprabhaNewsNetwork |  
Published : Jun 02, 2025, 12:27 AM IST
ಸಭೆಯಲ್ಲಿ ಶಾಸಕ ಸಿ.ಸಿ.ಪಾಟೀಲ ಮಾತನಾಡಿದರು. | Kannada Prabha

ಸಾರಾಂಶ

ಕೇವಲ ಮಹಿಳಾ ಪೈಲಟ್ ಭಾರತದ ಶಕ್ತಿ ತೋರಿದ್ದಾರೆ. ಇನ್ನು ಇಡಿ ಸೈನ್ಯ ಪಾಕಿಸ್ತಾನಕ್ಕೆ ಮುತ್ತಿಗೆ ಹಾಕಿದರೆ ಏನಾದಿತು ಎಂಬುದನ್ನು ಅರ್ಥೈಸಿಕೊಂಡು ಮುಂದೆ ಹೋಗಬೇಕು. ಸಿಂಧು ನೀರನ್ನು ಬಂದ್ ಮಾಡಿದ್ದರಿಂದ ಜಲಕ್ಷಾಮ ಎದುರಾದರೆ, ಅಟಾರಿ ಬಾರ್ಡರ್ ಬಂದ್ ಮಾಡಿದ್ದಕ್ಕೆ ವ್ಯಾಪಾರ ವಹಿವಾಟು ಬಂದ್ ಆಗಿದೆ. ಇದರಿಂದ ಪಾಕಿಸ್ತಾನ ಆರ್ಥಿಕವಾಗಿ ಕುಸಿದಿದೆ. ಪಾಕಿಸ್ತಾನ ಉಗ್ರರನ್ನು ಪೋಷಿಸುವ ಮೂಲಕ ಆತಂಕವಾದ ಸೃಷ್ಟಿಗೆ ಕಾರಣವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಕೇವಲ ಮಹಿಳಾ ಪೈಲಟ್ ಭಾರತದ ಶಕ್ತಿ ತೋರಿದ್ದಾರೆ. ಇನ್ನು ಇಡಿ ಸೈನ್ಯ ಪಾಕಿಸ್ತಾನಕ್ಕೆ ಮುತ್ತಿಗೆ ಹಾಕಿದರೆ ಏನಾದಿತು ಎಂಬುದನ್ನು ಅರ್ಥೈಸಿಕೊಂಡು ಮುಂದೆ ಹೋಗಬೇಕು. ಸಿಂಧು ನೀರನ್ನು ಬಂದ್ ಮಾಡಿದ್ದರಿಂದ ಜಲಕ್ಷಾಮ ಎದುರಾದರೆ, ಅಟಾರಿ ಬಾರ್ಡರ್ ಬಂದ್ ಮಾಡಿದ್ದಕ್ಕೆ ವ್ಯಾಪಾರ ವಹಿವಾಟು ಬಂದ್ ಆಗಿದೆ. ಇದರಿಂದ ಪಾಕಿಸ್ತಾನ ಆರ್ಥಿಕವಾಗಿ ಕುಸಿದಿದೆ. ಪಾಕಿಸ್ತಾನ ಉಗ್ರರನ್ನು ಪೋಷಿಸುವ ಮೂಲಕ ಆತಂಕವಾದ ಸೃಷ್ಟಿಗೆ ಕಾರಣವಾಗಿದೆ ಎಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.ಪಟ್ಟಣದಲ್ಲಿ ಶನಿವಾರ ನಡೆದ ಆಪರೇಶನ್ ಸಿಂದೂರ ವಿಜಯದ ಅಂಗವಾಗಿ ನಡೆದ ಬೃಹತ್ ತಿರಂಗಾ ಯಾತ್ರೆಯ ಸಾರ್ವಜನಿಕ ಸಭೆ ಉದ್ದೇಶಿಸಿ ಅವರು ಮಾತನಾಡಿದರು.

ಪಾಕಿಸ್ತಾನ ಮಟ್ಟ ಹಾಕಲು ಪ್ರಧಾನಿ ನರೇಂದ್ರಮೋದಿ ಸಿದ್ಧರಾಗಿ ಮೂರು ಸೇನಾ ಪಡೆಗಳನ್ನು ಸಜ್ಜುಗೊಳಿಸಿದ್ದಾರೆ. ಆದ್ದರಿಂದ ನಾವೆಲ್ಲರೂ ಭಾರತೀಯ ಸಶಸ್ತ್ರ ಪಡೆಗಳಿಗೆ ಬಲ ತುಂಬಲು ಸಿದ್ಧರಾಗೋಣ ಎಂದರು.ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡ್ರ ಮಾತನಾಡಿ, ಇಡೀ ಪ್ರಪಂಚದಲ್ಲಿ ಆತಂಕವಾದದ ಸೃಷ್ಟಿಗೆ ಪಾಕಿಸ್ತಾನ ಕಾರಣವಾಗಿದೆ. ಇದನ್ನು ಭಾರತ ಸಹಿಸೋಲ್ಲ, ಪಾಕಿಸ್ತಾನ ನಮಗೆ ನಿರಂತರ ತೊಂದರೆ ನೀಡುತ್ತಿದೆ. ಇದನ್ನು ಸದೆ ಬಡೆಯಲು ನಮ್ಮ ಸೇನೆ ಸಿದ್ದವಾಗಿದೆ. ಈಗಾಗಲೇ ಭಾರತ ಸರ್ಕಾರ 7 ತಂಡಗಳನ್ನು ರಚಿಸಿ ಆತಂಕವಾದಿ ನೆಲೆಗಳನ್ನು ಪತ್ತೆ ಹಚ್ಚಲು ಮುಂದಾಗಿದೆ. ಭಾರತದ ಹೆಣ್ಣು ಮಕ್ಕಳ ಸಿಂದೂರ ಅಳಿಸಿದ ಪಾಕಿಸ್ತಾನಕ್ಕೆ ಆಪರೇಶನ್‌ ಸಿಂಧೂರ ಮೂಲಕ ಉತ್ತರ ನೀಡಲಾಗಿದೆ ಎಂದರು.ಪಂಚಗೃಹಗುಡ್ಡ ಹಿರೇಮಠದ ಸಿದ್ಧಲಿಂಗ ಶಿವಾಚಾರ್ಯ ಶ್ರೀಗಳು ಮಾತನಾಡಿ, ಭಾರತದ ಪ್ರಧಾನಿ ಮೋದಿಯವರ ದಿಟ್ಟ ನಾಯಕತ್ವದ ಪರಿಣಾಮ ಇಂದು ಪಾಕಿಸ್ತಾನಕ್ಕೆ ಉತ್ತರ ನೀಡಲಾಗಿದೆ. ನಮ್ಮ ಭಾರತೀಯ ಸಂಸ್ಕೃತಿ, ಸನಾತನ ಧರ್ಮವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದರು.ಈ ವೇಳೆ ಉಮೇಶಗೌಡ ಪಾಟೀಲ, ಚಂದ್ರುಶೇಖರ ದಂಡಿನ, ಮಾಜಿ ಸೈನಿಕರಾದ ವೆಂಕಣ್ಣ ಬಾವಿ, ಮಹೇಶ್ವರಯ್ಯ ಸುರೇಬಾನ ಪ್ರಾಸ್ತಾವಿಕವಾಗಿ ಮಾತನಾಡಿದರು.ಬೃಹತ್ ತಿರಂಗಾ ಯಾತ್ರೆ: ಪಟ್ಟಣದ ದಂಡಾಪುರ ಓಣಿಯ ಉಡಚಾ ಪರಮೇಶ್ವರಿ ದೇವಸ್ಥಾನದಿಂದ ಹೊರಟ ಬೃಹತ್ ತಿರಂಗಾ ಯಾತ್ರೆ ಮೆರವಣಿಗೆಗೆ ಶಾಸಕ ಸಿ.ಸಿ. ಪಾಟೀಲ ಚಾಲನೆ ನೀಡಿದರು. ಸಂಸದರು, ಮಠಾಧೀಶರು, ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಎನ್‌ಸಿಸಿ, ಗೈಡ್ಸ್ ಕೆಡೆಟ್‌ಗಳು ಭಾಗವಹಿಸಿದ್ಜರು.ವೇದಿಕೆಯಲ್ಲಿ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು, ವಿರಕ್ತಮಠದ ಶಿವಕುಮಾರ ಶ್ರೀಗಳು, ಬಾಪುಗೌಡ ತಿಮ್ಮನಗೌಡ್ರ, ಪ್ರಕಾಶಗೌಡ ತಿರಕನಗೌಡ್ರ, ನಾಗನಗೌಡ, ಮಾಜಿ ಸೈನಿಕ ಸುಭಾಸ ಜಾಧವ ಹಾಗೂ ಸೈನಿಕರ ಸಂಘದ ಪದಾಧಿಕಾರಿಗಳು ಇದ್ದರು.

PREV

Recommended Stories

ಮಹಾಜನ ವರದಿ ಒಪ್ಪಿ, ಇಲ್ಲದಿದ್ರೆ ಯಥಾಸ್ಥಿತಿ ಇರಲಿ
ಸೂರಿಲ್ಲದವರಿಗೆ ಸೂರು ಒದಗಿಸುವ ಸಂಕಲ್ಪ: ವಿಜಯಾನಂದ ಕಾಶಪ್ಪನವರ