ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ನಾಗಮಂಗಲ, ಹುಬ್ಬಳ್ಳಿಯಾಯಿತು ಸಾಗರದಲ್ಲಿಯೂ ಗಣಪತಿಗೆ ಕ್ಯಾಕರಿಸಿ ಉಗಿಯುವ ಮಾನಸಿಕತೆ ನೋಡಿದ್ದಾಯಿತು. ಮಸೀದಿಯೊಳಗಿನಿಂದ ಕಲ್ಲು ಹೊಡೆಯುವ ಗೂಂಡಾಗಳ ಮೇಲೆ ಕ್ರಮ ಕೈಗೊಳ್ಳುವ ಬದಲು ತುಷ್ಟೀಕರಣ ಮಾಡಲು ಹೊರಟ್ಟಿದ್ದೀರಿ ಎಂದರು.
ಭದ್ರಾವತಿ ಕಾಂಗ್ರೆಸ್ ಶಾಸಕರು ನಿನ್ನೆ ಮುಂದಿನ ಜನ್ಮದಲ್ಲಿ ನಾನು ಮುಸ್ಮಿಮನಾಗಿ ಹುಟ್ಟಬೇಕೆಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಬ್ಬ ಹಿಂದೂವಾಗಿ ಹುಟ್ಟಿ ಇಂತಹ ಹೇಳಿಕೆಗಳನ್ನು ನೀಡಬಾರದಿತ್ತು ಎಂದು ಹೇಳಿದರು. ಹಾಗೆಯೇ, ಇಂತಹ ಹೇಳಿಕೆ ನೀಡಿದ ಅವರಿಗೆ ಭಾರತದಂತಹ ಪುಣ್ಯ ಭೂಮಿಯಲ್ಲಿ ಪುನರ್ ಜನ್ಮವೇ ಇರಲು ಸಾಧ್ಯವಿಲ್ಲ ಎಂದರು.ಭದ್ರಾವತಿಯಲ್ಲಿ ಈದ್ ಮಿಲಾದ್ ಮೆರವಣಿಗೆಯಲ್ಲಿ ಈ ದೇಶದ ಅನ್ನ ತಿಂದು, ಸಕಲ ಸೌಲಭ್ಯಗಳನ್ನು ಪಡೆದ ಯುವಕರ ಗುಂಪೊಂದು ಪಾಕಿಸ್ತಾನ್ ಜಿಂದಾಬಾದ್ ಎಂದು ಘೋಷಣೆ ಕೂಗುತ್ತಾರೆ. ಈ ಕಾಂಗ್ರೆಸ್ ಸರ್ಕಾರ ನಪುಂಸಕ ಸರ್ಕಾರವಾಗಿದೆ. ದೇಶದ್ರೋಹಿಗಳ ಮೇಲೆ ಕ್ರಮ ಕೈಗೊಳ್ಳುವ ತಾಕತ್ತು ಕಾಂಗ್ರೆಸ್ ಸರ್ಕಾರಕ್ಕಿಲ್ಲ. ರಾಜ್ಯದಲ್ಲಿ ಮುಸಲ್ಮಾನ್ ಗೂಂಡಾ ರಾಜ್ಯ ಸ್ಥಾಪನೆಗೆ ಕಾಂಗ್ರೆಸ್ ಹೊರಟಿದೆ. ನಾವು ಹಿಂದೂಸ್ತಾನ್ ಉಳಿವಿಗಾಗಿ ಮತ್ತು ಹಿಂದೂಸ್ತಾನ್ ಸಂರಕ್ಷಣೆಗಾಗಿಯೇ ರಾಜಕಾರಣ ಮಾಡುವವರು. ರಾಷ್ಟ್ರದ್ರೋಹಿಗಳಿಗೆ ರಕ್ಷಣೆ ಮಾಡುವ ಮನಸ್ಥಿತಿಯನ್ನು ಕಾಂಗ್ರೆಸ್ ಬಿಡಬೇಕು ಎಂದರು.
ಡಿಜೆ ಹಾಕಿದವರಿಗೆ ನೋಟೀಸು ನೀಡುವ ನೀವು, ಜಿಲ್ಲಾ ರಕ್ಷಣಾಧಿಕಾರಿಗಳಿಗೆ ತಲ್ವಾರ್ ತೋರಿಸಿದಾಗ ನೋಟೀಸ್ ನೀಡಲಿಲ್ಲವೇಕೆ ? ಎಂದು ಪ್ರಶ್ನಿಸಿದರು. ಮದರಸದಲ್ಲಿ ಮಕ್ಕಳಿಗೆ ಉತ್ತಮ, ನೈತಿಕ ದೇಶಭಕ್ತಿಯ ಶಿಕ್ಷಣ ಕೊಡಿ. ನಾನು ಕೂಡ ಮದ್ದೂರಿಗೆ ಹೊರಟಿದ್ದೇನೆ ಎಂದರು.