ಪಾಕಿಸ್ತಾನಿಯರೂ ಮೋದಿ ಮತ್ತೆ ಪ್ರಧಾನಿ ಆಗಲೆಂದು ಬಯಸ್ತಿದ್ದಾರೆ

KannadaprabhaNewsNetwork | Published : Jan 1, 2024 1:15 AM

ಸಾರಾಂಶ

ಚಿಕ್ಕೋಡಿ: ಪಟ್ಟಣದಲ್ಲಿ ಶ್ರೀ ರಾಮಸೇನೆ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನವನ್ನುಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಉದ್ಘಾಟಿಸಿದರು. ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನ ದೇಶದವರು ಸಹ ಮೋದಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಚಿಕ್ಕೋಡಿ

ಅಖಂಡ ಭಾರತ ನಿರ್ಮಾಣಕ್ಕೆ ಜೈ ಶ್ರೀರಾಮ ಘೋಷಣೆ ದೇಶದಲ್ಲಿ ಮತ್ತೆ ಕೇಳಿ ಬರುತ್ತಿದೆ. ಪಾಕಿಸ್ತಾನ ದೇಶದವರು ಸಹ ಮೋದಿ ಪ್ರಧಾನಿ ಆಗಲಿ ಎಂದು ಬಯಸುತ್ತಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಕೆ.ಎಸ್. ಈಶ್ವರಪ್ಪ ಹೇಳಿದರು.

ಭಾನುವಾರ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಪಟ್ಟಣದಲ್ಲಿ ಶ್ರೀ ರಾಮಸೇನೆ ಆಯೋಜಿಸಿದ್ದ ಮೋದಿ ಗೆಲ್ಲಿಸಿ ಭಾರತ ಉಳಿಸಿ ಅಭಿಯಾನ ಉದ್ಘಾಟಿಸಿ ಮಾತನಾಡಿ, ಮೋದಿ ಭಾರತೀಯ ಸಂಸ್ಕೃತಿಯನ್ನು ವಿಶ್ವಕ್ಕೆ ಪಸರಿಸಿದರು. ದೇಶವನ್ನು ಲೂಟಿ ಮಾಡಿದವರಿಗೆ ಭಾರತೀಯ ಸಂಸ್ಕೃತಿ ನಾಶ ಮಾಡಲು ಆಗಲಿಲ್ಲ. ಕಾಂಗ್ರೆಸ್ ಅಧಿಕಾರದ ಆಸೆಯಿಂದ ದೇಶ ತುಂಡು ತುಂಡಾಯಿತು. ಜನವರಿ 22 ರಾಮ ಮಂದಿರ ಉದ್ಘಾಟನೆ ದಿನದಂದು ಸ್ವತಂತ್ರ್ಯ ಹೋರಾಟಗಾರರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದರು.

ಮಥುರಾ, ಕಾಶಿ ದೇವಸ್ಥಾನಗಳ ಕಾರ್ಯ ಸರ್ವೆ ಮಾಡಿಸಿ ನ್ಯಾಯಾಲಯ ಮೂಲಕ ಪಡೆದು ಕಾಶಿ ವಿಶ್ವನಾಥ ಮಥುರಾ ಶ್ರೀ ಕೃಷ್ಣ ದೇವಸ್ಥಾನವೂ ಶೀಘ್ರ ನಿರ್ಮಾಣ ಆಗುತ್ತವೆ. ದೇಶದಲ್ಲಿ ಶ್ರೀ ರಾಮನ ಬಗ್ಗೆ ಚರ್ಚೆ ಆಗುತ್ತಿದೆ. ನಮ್ಮನ್ನ ವಿರೋಧ ಮಾಡಿದವರ ಹೊಟ್ಟೆಯಲ್ಲಿ ಕಸವಿಸಿ ಆಗುತ್ತಿದೆ ಎಂದರು.

ಪ್ರಿಯಾಂಕ್‌ ಖರ್ಗೆ ಎನ್ನುವ ಚಿಲ್ಲರೇ ನರೆಂದ್ರ ಮೋದಿ ಬಗ್ಗೆ ಮಾತನಾಡುತ್ತಾನೆ ಪ್ರಧಾನಿ ಮೋದಿ ಸೂರ್ಯ ಇದ್ದ ಹಾಗೆ ಸೂರ್ಯನಿಗೆ ಊಗಿದರೆ ಉಗಿದಿದ್ದು ಪ್ರಿಯಾಂಕ ಖರ್ಗೆಗೆ ಮರಳಿ ಬರುತ್ತದೆ ಎಂದು ಕಿಡಿಕಾರಿದರು.

ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಕಾಂಗ್ರೆಸ್’ನ ವಿಕೃತಿಗಳಿಗೆ ಕ್ಯಾನ್ಸರ್ ದೇಶದ್ರೋಹಿಗಳಿಗೆ ಉತ್ತರವೆ ಪ್ರಧಾನಿ ಮೋದಿ. ಕಾಂಗ್ರೆಸ್‌ ಗೆ ವೋಟ್ ಹಾಕಿದರೆಭಯೋತ್ಪಾದಕರಿಗೆ, ಬಾಬರ್‌, ಟಿಪ್ಪುಸುಲ್ತಾನ್‌, ಔರಂಗಜೇಬ್‌, ಪಾಕಿಸ್ಥಾನಿಗಳಿಗೆ ವೋಟ್‌ ಹಾಕಿದ ಹಾಗೆ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು..

ಶ್ರೀರಾಮ ಸೇನೆಯ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ,ಶಾಸಕ ದುರ್ಯೋಧನ ಐಹೊಳೆ ಮಾತನಾಡಿದರು. ಪುರಸಭೆ ಹಿರಿಯ ಸದಸ್ಯ ಜಗದೀಶ ಕವಟಗಿಮಠ,,ರಾಜ್ಯ ಪ್ರಧಾನ ಕಾರ್ಯದರ್ಶಿ ರವಿ ಕೋಕೇತರ, ವಿಭಾಗೀಯ ಅಧ್ಯಕ್ಷೆ ಶಾಂಭವಿ ಅಶ್ವತಪೂರ ,ಬಸವರಾಜ ಕಲ್ಯಾಣಿ, ವಿಠ್ಠಲ ಗಡ್ಡಿ, ಬಸವರಾಜ ಅಲ್ಲನವರ, ಮಹಾದೇವ ನಿಲಜನ್ನಗಿ, ಶಕುಂತಲಾ ಡೊಣವಾಡೆ ಸೇರಿ ಶ್ರೀರಾಮಸೇನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

Share this article