ಬಿಸಿಲಪ್ಪ, ಬಸವೇಶ್ವರ ದೇವರ ಪಲ್ಲಕ್ಕಿ ಮೆರವಣಿಗೆ

KannadaprabhaNewsNetwork |  
Published : Feb 27, 2025, 12:35 AM IST
ಕೆ ಕೆ ಪಿ ಸುದ್ದಿ 02 ಕುರುಬಳ್ಳಿ ಗ್ರಾಮದಲ್ಲಿರುವ ಶ್ರೀ ಬಿಸಿಲಪ್ಪ ಮತ್ತು ಬಸವೇಶ್ವರ ಸ್ವಾಮಿ ದೇವರುಗಳನ್ನು ಮುತ್ತಿನ ಪಲ್ಲಕ್ಕಿಯಲ್ಲಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೇರವಣಿಗೆ ಉತ್ಸವ ನಡೆಯಿತು. | Kannada Prabha

ಸಾರಾಂಶ

ಕನಕಪುರ: ಕುರುಬಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ಸ್ವಾಮಿಯ ಅಗ್ನಿಕೊಂಡೋತ್ಸವ ಮತ್ತು ಗ್ರಾಮ ದೇವತೆಗಳ ಮೆರವಣಿಗೆ ಉತ್ಸವ ಬಹಳ ವಿಜೃಂಭಣೆ ಯಿಂದ ನಡೆಯಿತು.

ಕನಕಪುರ: ಕುರುಬಳ್ಳಿ ಗ್ರಾಮದಲ್ಲಿರುವ ಬಸವೇಶ್ವರ ಸ್ವಾಮಿಯ ಅಗ್ನಿಕೊಂಡೋತ್ಸವ ಮತ್ತು ಗ್ರಾಮ ದೇವತೆಗಳ ಮೆರವಣಿಗೆ ಉತ್ಸವ ಬಹಳ ವಿಜೃಂಭಣೆ ಯಿಂದ ನಡೆಯಿತು. ಸತತ ಮೂರು ದಿನಗಳ ಕಾಲ ನಡೆದ ಬಸವೇಶ್ವರ ಸ್ವಾಮಿ ಅಗ್ನಿಕೊಂಡೋತ್ಸವ ಹಾಗೂ ಗ್ರಾಮ ದೇವತೆಗಳ ಮೆರವಣಿಗೆ ಅಂಗವಾಗಿ ಫೆ. 24 ಸೋಮವಾರ ಎಳವಾರ ಕಾರ್ಯಕ್ರಮ ನಡೆದು, ಮಂಗಳವಾರ ಬೆಳಗ್ಗೆ 6.30 ಗಂಟೆಗೆ ದೇವಾಲಯದ ಪ್ರಧಾನ ಅರ್ಚಕರು ಕೊಂಡವನ್ನು ಹಾಯುವ ಮೂಲಕ ಬಸವೇಶ್ವರಸ್ವಾಮಿಯ ಅಗ್ನಿಕೊಂಡೋತ್ಸವವನ್ನು ನೆರವೇರಿಸಿದರು. ರಾತ್ರಿ 7 ಗಂಟೆಗೆ ಬಿಸಿಲಪ್ಪ ಹಾಗೂ ಬಸವೇಶ್ವರ ಸ್ವಾಮಿ ದೇವರನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಿದ ಮುತ್ತಿನ ಪಲ್ಲಕ್ಕಿಯಲ್ಲಿ ಪ್ರತಿಷ್ಠಾಪನೆ ಮಾಡಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ನಂತರ ಗ್ರಾಮಸ್ಥರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

500 ನಾಯಿಗಳಿಗೆ ಚಿಕನ್‌ ರೈಸ್ ನೀಡಲು ವರ್ಷಕ್ಕೆ 1.83 ಕೋಟಿ
ಯಲಹಂಕದಲ್ಲಿ ‘ಚೀನಾದ ಹ್ಯಾಂಗ್‌ಝೌ’ ಮಾದರಿ ರೈಲು ನಿಲ್ದಾಣ