ಕನ್ನಡಪ್ರಭ ವಾರ್ತೆ ನಾಗಮಂಗಲ
ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಬೆಳಗ್ಗೆ ಕ್ಷೇತ್ರದ ಶ್ರೀ ಕಾಲಭೈರವೇಶ್ವರಸ್ವಾಮಿಗೆ ಸುವರ್ಣ ಕವಚ ಅಲಂಕಾರ ಹಾಗೂ ಶ್ರೀ ಗಂಗಾಧರೇಶ್ವರಸ್ವಾಮಿಗೆ ರಜತ ನಾಗಾಭರಣ ಅಲಂಕಾರ ಪೂಜೆ ಕೈಂಕರ್ಯಗಳು ನಡೆದವು.
ಕಾಲಭೈರವೇಶ್ವರಸ್ವಾಮಿಯ ಹೂವಿನ ಪಲ್ಲಕ್ಕಿ ಮತ್ತು ಡಾ.ನಿರ್ಮಲಾನಂದನಾಥ ಶ್ರೀಗಳ ಮುತ್ತಿನ ಪಲ್ಲಕ್ಕಿ ಉತ್ಸವದಲ್ಲಿ ಪಾಲ್ಗೊಂಡ ಭಕ್ತರಿಗೆ ಶ್ರೀಗಳು ದರ್ಶನಾಶೀರ್ವಾದ ನೀಡಿ ಆಶೀರ್ವದಿಸಿದರು.ಈ ವೇಳೆ ಹಾಸನ ಶಾಖಾ ಮಠದ ಶಂಭೂನಾಥ ಸ್ವಾಮೀಜಿ, ನಾಗಮಂಗಲ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ, ಬ್ರಹ್ಮಚಾರಿ ಸಾಯಿಕೀರ್ತಿನಾಥ ಸ್ವಾಮೀಜಿ ಇದ್ದರು. ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥಸ್ವಾಮೀಜಿ, ಶ್ರೀ ಮಠದ ಚೈತನ್ಯನಾಥ ಸ್ವಾಮೀಜಿ ಸೇರಿದಂತೆ ವಿವಿಧ ಶಾಖಾ ಮಠಗಳ ಶ್ರೀಗಳು ಹಾಗೂ ಸಹಸ್ರಾರು ಮಂದಿ ಭಕ್ತರು ಇದ್ದರು.
ಆದಿಚುಂಚನಗಿರಿ ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀಕ್ಷೇತ್ರದಲ್ಲಿ ಮಾ.1ರಿಂದ 3ರವರೆಗೆ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನಡೆಯಲಿದೆ. ಕೃಷಿ ಪರಿಕರ, ಉಪಕರಣಗಳ ಕಂಪನಿ, ರಸಗೊಬ್ಬರ, ಜೈವಿಕ ರಸಗೊಬ್ಬರ, ಬೀಜೋತ್ಪಾದಕ ಕಂಪನಿ, ಸ್ವ ಸಹಾಯ ಸಂಘಗಳು, ಅಭಿವೃದ್ಧಿ ಇಲಾಖೆಗಳು, ಸರ್ಕಾರೇತರ ಸಂಸ್ಥೆಗಳು ಮೂರು ದಿನಗಳ ಕಾಲ ನಡೆಯುವ ವಸ್ತು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.ಮಾ.5 ರಂದು ಶ್ರೀ ವೆಂಕಟರಮಣಸ್ವಾಮಿ ರಥೋತ್ಸವ
ತಾಲೂಕಿನ ಕರಿಘಟ್ಟದ ಶ್ರೀವೆಂಕಟರಮಣಸ್ವಾಮಿ ದೇವಸ್ಥಾನದ ಬ್ರಹೋತ್ಸವ ರಥೋತ್ಸವ ಮಾ.3ರಂದು ನಡೆಯಲಿದೆ ಎಂದು ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಎಂ.ಉಮಾ ತಿಳಿಸಿದರು.
ಮಾ.3 ಮಂಗಳವಾರ ಕಲ್ಯಾಣೋತ್ಸವ, ಮಾ.4ರ ಬೆಳಗ್ಗೆ ಗರುಡೋತ್ಸವ, ಸಂಜೆ ಗಜೇಂದ್ರ ಮೋಕ್ಷ, ಮಾ.5 ರಂದು ಬ್ರಹೋತ್ಸವ ರಥೋತ್ಸವ ವೈಭವದಿಂದ ಸಾಗಲಿದೆ. ಮಾ.6 ರಂದು ಬೆಳಗ್ಗೆ ಗರುಡೋತ್ಸವ, ಸಂಜೆ ದವಳೋತ್ಸವ, ರಾತ್ರಿ ಶಯನೋತ್ಸವ, ಮಾ.7ರ ಬೆಳಗ್ಗೆ 30.30ಕ್ಕೆ ತೀರ್ಥಸ್ನಾನ ಹಾಗೂ ಮಾ.8 ರಂದು ಬೆಳಗ್ಗೆ 1.30ಕ್ಕೆ ಮಹಾಭಿಷೇಕ ಸೇರಿದಂತೆ ಧಾರ್ಮಿಕ ಕೈಂಕರ್ಯಗಳು ಜರುಗಲಿದೆ. ಪ್ರತಿ ನಿತ್ಯ ಉತ್ಸವಗಳು ಸಂಜೆ 6 ರಿಂದ ರಾತ್ರಿ 8.30ರ ವರೆಗೆ ಹಾಗೂ ಪ್ರಸಾದ ವಿನಿಯೋಗ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
ಶ್ರೀರಂಗಪಟ್ಟಣ: