ಪಾಲೂರು: ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ

KannadaprabhaNewsNetwork |  
Published : May 25, 2026, 02:45 AM IST
ಜಯಘೋಷ, ವಾದ್ಯಮೇಳ: ಪಾಲೂರಿನಲ್ಲಿ ಶ್ರೀ ಕಾಳಿಕಾಂಬ ಅಮನೂರು ದೇವರ ಅಲಂಕೃತ ಮೂರ್ತಿಯ ಭವ್ಯ ಮೆರವಣಿಗೆ. | Kannada Prabha

ಸಾರಾಂಶ

ಸಮೀಪದ ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು.

ಕನ್ನಡಪ್ರಭವಾರ್ತೆ ನಾಪೋಕ್ಲು

ಸಮೀಪದ ಪಾಲೂರು ಗ್ರಾಮದ ಗ್ರಾಮದೇವತೆಯಾದ ಶ್ರೀ ಕಾಳಿಕಾಂಬ ಅಮನೂರು ತಾಯಿಯ ವಾರ್ಷಿಕೋತ್ಸವ ಭಾನುವಾರ ಶ್ರದ್ಧಾ ಭಕ್ತಿಯಿಂದ ವಿಜೃಂಭಣೆಯಿಂದ ಸಂಪನ್ನಗೊಂಡಿತು. ವಾರ್ಷಿಕೋತ್ಸವದ ಅಂಗವಾಗಿ ಬೆಳಿಗ್ಗೆ ದೇವರ ಜಳಕ ಕೈಗೊಂಡರು. ಬಳಿಕ ವಾದ್ಯ ಮೇಲ ಹಾಗೂ ದೇವರ ಅಲಂಕೃತ ಮೂರ್ತಿಯೊಂದಿಗೆ ತಿರುವಳಕಾರರು ಭಕ್ತರು ಮೆರವಣಿಗೆ ತೆರಳಿ ದೇವಾಲಯದಲ್ಲಿ ದೇವರಿಗೆ ಮಹಾಪೂಜೆ ಇನ್ನಿತರ ದೇವರ ಸೇವೆಗಳು ಜರುಗಿ ಪ್ರಸಾದ ವಿತರಣೆಯ ಮಾಡಲಾಯಿತು.

ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ದೇವಾಲಯದ ಪ್ರಮುಖರಾದ ಎಡಿಕೇರಿ ಪ್ರವೀಣ್,(ಪವಿ) ದೇವರ ಮುಖ್ಯ ಪೂಜಾರಿ ಬೈತಡ್ಕ ಡೆಲ್ವಿ ದೇವಯ್ಯ, ಅಣ್ಣಿ ಗಣಪತಿ , ಸೋನಾಜಿತ್, ಸೂದನ ಮಧು, ಬೈತಡ್ಕ ಜೀವನ್, ಜಿಲ್ಲು, ಹಿರಿಯರಾದ ಬೈತಡ್ಕ ದೇವಯ್ಯ , ಚಿನ್ನಪ್ಪ, ಕುಟ್ಟಪ್ಪ, ಪುದಿಯನೆರವವನ ಮೋಹನ್ ಪೊನ್ನಪ್ಪ, ದಿಲೀಪ್, ಅಶೋಕ, ಅಜಿತ್, ದಿನೇಶ್, ಸೂದನ, ಮದನ್, ಈರಪ್ಪ, ಅಚ್ಚುಡ ಗಣೇಶ, ಚಿಕ್ಕನ ದಿನೇಶ್ ಸೇರಿದಂತೆ ಊರ ಮತ್ತು ಪರವೂರಿನ ಭಕ್ತಾದಿಗಳು ಪಾಲ್ಗೊಂಡರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುಂದಾಪುರ: ಬಡಗಬೆಟ್ಟು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ 12ನೇ ಶಾಖೆ ಉದ್ಘಾಟನೆ
ಕಾನೂನು ಅರಿವು ಅಗತ್ಯ: ಮುಕ್ತಾಬಾಯಿ