ಕನ್ನಡಪ್ರಭ ವಾರ್ತೆ, ಕೊಳ್ಳೇಗಾಲ
ಮರುಪಾವತಿಗೆ ಮುಂದಾಗಿ ಬ್ಯಾಂಕ್ ಅಭ್ಯುದಯಕ್ಕೆ ಸಹಕರಿಸಬೇಕು ಎಂದು ಮೈಸೂರು ಕೆನರಾ ಬ್ಯಾಂಕ್ ಕ್ಷೇತ್ರಿಯ
ಕಚೇರಿಯ ಎಜಿಎಂ ಟಿ .ಎಸ್. ಉಮೇಶ್ ಹೇಳಿದರು.ತಾಲೂಕಿನ ಪಾಳ್ಯ ಗ್ರಾಮದಲ್ಲಿದ್ದ ಕೆನರಾ ಬ್ಯಾಂಕ್ ಶಾಖೆಯ ಕಟ್ಟಡವನ್ನು ಸ್ಥಳಾಂತರ ಹಿನ್ನೆಲೆ ನಡೆದ ಕಾರ್ಯಕ್ರಮ
ನೂತನ ಕಟ್ಟಡ ದೊರೆತ ಹಿನ್ನೆಲೆ ಸ್ಥಳಾಂತರಿಸಲಾಗಿದೆ. ಗ್ರಾಹಕರು ಈಗಿದ್ದ ಶಾಖೆಯಿಂದ ನೂರು ಮೀಟರ್ ದೂರದಲ್ಲೆ ಶಾಖಾ ಕಚೇರಿ ಸ್ಛಳಾಂತರ ಹಿನ್ನೆಲೆ ಗೊಂದಲಕ್ಕೊಳಗಾಗದೆ ನೂತನ ಬ್ಯಾಂಕ್ ಕಟ್ಟಡಕ್ಕೆ ಆಗಮಿಸಿ ಬ್ಯಾಂಕ್ ಸೌಲಭ್ಯ ಸದ್ಬಳಕೆಗೆ ಮುಂದಾಗಬೇಕು ಎಂದರು.
ವ್ಯವಸ್ಥಾಪಕರಾದ ರಮಣಿಕ್ ಜೀರೋಟ ಮಾತನಾಡಿ, ನಮ್ಮ ಬ್ಯಾಂಕಿನ ಹಳೆಯ ಕಟ್ಟಡವನ್ನು ಸ್ಥಳಾಂತರಿಸುವ ಹಿನ್ನೆಲೆ ಈಗಿದ್ದ ಕಟ್ಟಡದಿಂದ ನೂರು ಮೀಟರ್ ದೂರಕ್ಕೆ ಆಗಮಿಸುವ ಮೂಲಕ ಸಹಕರಿಸಬೇಕು, ಬ್ಯಾಂಕ್ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.ಈವೇಳೆ ಡೆಪ್ಯೂಟಿ ಮ್ಯಾನೇಜರ್ ಉತ್ತಮ್, ಶರಣ ಬಸಪ್ಪ ಮೇತ್ರಿ ಇನ್ನಿತರಿದ್ದರು