ಕನ್ನಡಪ್ರಭ ವಾರ್ತೆ ಯಾದಗಿರಿ
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಗೃಹ ಲಕ್ಷ್ಮೀ ಯೋಜನೆಯಡಿ 2023-24 ರಲ್ಲಿ 7,52,901 ಫಲಾನುಭವಿಗಳಿಗೆ ₹1390.84 ಕೋಟಿ ಸಹಾಯಧನ ಜಮೆ ಮಾಡಲಾಗಿದೆ. ಅದರಂತೆ 2026-27 ನೇ ಸಾಲಿನಲ್ಲಿ ನಾಲ್ಕು ಕಂತುಗಳಲ್ಲಿ 9,92,777 ಫಲಾನುಭವಿಗಳಿಗೆ ₹198.56 ಕೋಟಿ ಜಮೆ ಮಾಡಲಾಗಿದೆ. ಜಿಲ್ಲೆಯಲ್ಲಿ 429 ಅರ್ಹ ಫಲಾನುಭವಿಗಳು ಮರಣ ಹೊಂದಿದ್ದು, ₹ 50 ಲಕ್ಷ ಹಣವನ್ನು ಬ್ಯಾಂಕ್‌ಗಳಲ್ಲಿ ತಡೆ ಹಿಡಿಯಲಾಗಿದ್ದು, ಅದನ್ನು ವಾಪಸ್ ಪಡೆಯಲು ಸೂಕ್ತ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಅವರು ಸೂಚಿಸಿದರು.ಶಕ್ತಿ ಯೋಜನೆಯಡಿ 8.80 ಲಕ್ಷ ಮಹಿಳೆಯರು ಹಾಗೂ 41.61 ಲಕ್ಷ ಮಕ್ಕಳು ಸಹಿತ ಒಟ್ಟು 9.22 ಕೋಟಿ ಪ್ರಯಾಣಿಕರು ಕಳೆದ ಒಂದು ವರ್ಷದಲ್ಲಿ ಉಚಿತವಾಗಿ ಪ್ರಯಾಣಿಸಿದ್ದು, ಇದಕ್ಕಾಗಿ ರಾಜ್ಯ ಸರ್ಕಾರದಿಂದ 335 ಕೋಟಿ ರು. ಪ್ರಯಾಣದ ಮೊತ್ತ ಭರಿಸಿದೆ ಎಂದು ಹೇಳಿದರು. ಜಿಲ್ಲೆಯ ವಿವಿಧ ಬಸ್ ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆ ಗೆ ಸಿಸಿ ಕ್ಯಾಮೆರಾ ಅಳವಡಿಸಬೇಕು. ಶೌಚಾಲಯ ಸ್ವಚ್ಛತೆಗೆ ಗಮನ ನೀಡಬೇಕು. ಕುಡಿಯುವ ನೀರಿನ ಸೌಲಭ್ಯ ಇರಬೇಕು, ಮಕ್ಕಳಿಗೆ ಹಾಲುಣಿಸುವ ತಾಯಂದಿರಿಗೆ ಪ್ರತ್ಯೇಕ ಕೋಣೆ, ಸೌಲಭ್ಯಗಳನ್ನು ಕಲ್ಪಿಸಬೇಕು. ಜಿಲ್ಲಾ ತಾಲೂಕು ಅನುಷ್ಠಾನ ಸಮಿತಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರ ಸಮನ್ವಯದೊಂದಿಗೆ ಸಂಬಂಧಿಸಿದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಗುರಮಠಕಲ್ಲಿಂದ ಕಲ್ಬುರ್ಗಿ ಗೆ ಬಸ್ ವ್ಯವಸ್ಥೆ ಕಲ್ಪಿಸಲು ಸೂಚನೆ ನೀಡಿದರು.
ಅನ್ನಭಾಗ್ಯ ಯೋಜನೆಯಡಿ ಅರ್ಹರಿಗೆ ಲಾಭ ದೊರೆಯಬೇಕು. ಇರುವ ಸಮಸ್ಯೆಗಳನ್ನು ಪರಿಹರಿಸಿಕೊಂಡು, ಜನರಿಗೆ ಸ್ಪಂದಿಸಬೇಕು. ಜಿಲ್ಲೆಯಲ್ಲಿ ಅಂತ್ಯೋದಯ ಹಾಗೂ ಬಿ.ಪಿಎಲ್ ಗಳ 9.46 ಲ ಪಡಿತರ ಕಾರ್ಡ್ ಫಲಾನುಭವಿಗಳಿಗೆ 257.33 ಕೋ.ರು ಸರ್ಕಾರ ಭರಿಸಿದೆ. ಬಾಕಿ ಮೊತ್ತ ಪಾವತಿಗೆ ಕಾರಣಗಳ ಬಗ್ಗೆ ಪರಿಶೀಲಿಸಬೇಕು ಎಂದು ಅವರು ಸೂಚನೆ ನೀಡಿದರು.
ಯುವ ನಿಧಿ ಯೋಜನೆಯಡಿ ಫಲಾನುಭವಿಗಳಿಗೆ ಕೌಶಲ್ಯ ತರಬೇತಿ ಪಡೆಯುವ ಬಗ್ಗೆ ಒತ್ತಾಯ ಮಾಡಬಾರದು. ಆಯಾ ಫಲಾನುಭವಿಗಳು ಅವರ ಇಚ್ಛೆಗೆ ಅನುಸಾರವಾಗಿ ಸಹಾಯಧನದ ಸೌಲಭ್ಯ ಉಪಯೋಗ ಮಾಡಿಕೊಳ್ಳಲಿ ಎಂದ ಅವರು, ಜಿಲ್ಲೆಯ ಪ್ರತಿ ಪದವಿ ಕಾಲೇಜು, ಡಿಪ್ಲೊಮಾ ಕಾಲೇಜು ಗಳಲ್ಲಿ ಈ ಯೋಜನೆಯ ಕರಪತ್ರ ಗಳ ಮೂಲಕ ಜಾಗೃತಿ ಮೂಡಿಸಬೇಕು.ಸಂಬಧಿಸಿದ ಅಧಿಕಾರಿಗಳು ಹಾಗೂ ಜಿಲ್ಲಾ ಹಾಗೂ ತಾಲೂಕು ಅನುಷ್ಠಾನ ಸಮಿತಿಯವರು ಜಂಟಿಯಾಗಿ ಈ ಕಾರ್ಯ ಮಾಡುವಂತೆ ಅವರು ಸಲಹೆ ನೀಡಿದರು.