ಏ.20ಕ್ಕೆ ಕೂಡಲಸಂಗಮದಲ್ಲಿ ಪಂಚಮಸಾಲಿ ಮುಖಂಡರ ಸಭೆ

KannadaprabhaNewsNetwork |  
Published : Apr 15, 2025, 12:57 AM IST
14ಐಎನ್‌ಡಿ5,ಇಂಡಿಯಲ್ಲಿ ಪಂಚಮಸಾಲಿ ಮುಖಂಡರು ಕರೆದ ಪತ್ರಿಕಾಗೋಷ್ಠಿಯಲ್ಲಿ ವಿ.ಎಚ್‌.ಬಿರಾದಾರ ಮಾತನಾಡಿದರು.  | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ಇಂಡಿ: ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ ನಡೆ ಖಂಡನೀಯ. ಮುಂದೆ ಈ ರೀತಿ ಆಗದಂತೆ ಶ್ರೀಗಳ ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡಬಾರದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್‌.ಬಿರಾದಾರ ಹೇಳಿದರು.

ಕನ್ನಡಪ್ರಭ ವಾರ್ತೆ ಇಂಡಿ: ಪಂಚಮಸಾಲಿ ಪೀಠದ ಪ್ರಥಮ ಜಗದ್ಗುರು ಬಸವಜಯ ಮೃತ್ಯುಂಜಯ ಸ್ವಾಮೀಜಿ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಿರುವ ವಿಜಯಾನಂದ ಕಾಶಪ್ಪನವರ ನಡೆ ಖಂಡನೀಯ. ಮುಂದೆ ಈ ರೀತಿ ಆಗದಂತೆ ಶ್ರೀಗಳ ಮನಸ್ಸಿಗೆ ನೋವುಂಟು ಮಾಡುವ ಹೇಳಿಕೆಗಳನ್ನು ನೀಡಬಾರದು ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯಕ್ಷ ವಿ.ಎಚ್‌.ಬಿರಾದಾರ ಹೇಳಿದರು.

ಪಟ್ಟಣದ ಖಾಸಗಿ ಹೊಟೇಲ್‌ನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಶ್ರೀಗಳಿಗೆ ಬ್ಲಾಕ್‌ಮೇಲ್‌ ಮಾಡುವ ರೀತಿಯಲ್ಲಿ ಮಾತನಾಡುತ್ತಿರುವುದು ಪಂಚಮಸಾಲಿ ಸಮಾಜಕ್ಕೆ ನೋವುಂಟು ಮಾಡಿದೆ. ಕೂಡಲಸಂಗಮ ಪೀಠದ ಟ್ರಸ್ಟಿಗೂ, ಶ್ರೀಗಳಿಗೂ ಯಾವುದೇ ಸಂಬಂಧ ಇಲ್ಲ. ಮುರುಗೇಶ ನಿರಾಣಿಯವರು ಶ್ರೀಗಳಿಗೆ ಕಟ್ಟಡ ಕಟ್ಟಲು ಸಹಾಯ ಮಾಡಿದ್ದಾರೆ. ವಿಜಯಾನಂದ ಕಾಶಪ್ಪನವರ ಪತ್ನಿಗೆ ಟಿಕೆಟ್‌ ಕೊಡಿಸಲು ಶ್ರೀಗಳು ದೆಹಲಿಯವರೆಗೆ ಹೋಗಿ ಬಂದಿದ್ದಾರೆ. ಅದನ್ನು ಅವರು ಮರೆತಿದ್ದಾರೆ. ಪಂಚಮಸಾಲಿ ಜಗದ್ಗುರುಗಳ ಮೇಲೆ ಹರಿಹಾಯುವ ರೀತಿಯಲ್ಲಿ ನಡೆದುಕೊಂಡು ಶ್ರೀಗಳ ಮನಸ್ಸಿಗೆ ನೋವುಂಟು ಮಾಡಿದ್ದಾರೆ ಎಂದರು.

ಕೂಡಲಸಂಗಮದಲ್ಲಿ ಏ.20 ರಂದು ರಾಜ್ಯಮಟ್ಟದ ಪಂಚಮಸಾಲಿ ಸಮುದಾಯದ ಮುಖಂಡರ ಸಭೆ ಕರೆಯಲಾಗಿದೆ. ತಾಲೂಕಿನ ಎಲ್ಲ ಪಂಚಮಸಾಲಿ ಸಮಾಜದ ಯುವಕರು, ಮುಖಂಡರು ಸಭೆಗೆ ತಪ್ಪದೆ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು.

ಸೋಮಶೇಖರ ದೇವರ, ಪ್ರಶಾಂತಗೌಡ ಬಿರಾದಾರ, ಶರಣಗೌಡ ಬಂಡಿ, ಚಿದಾನಂದಗೌಡ ಬಿರಾದಾರ, ಬಾಳು ಮುಳಜಿ, ರಮೇಶ ಬಿರಾದಾರ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ