ಕನ್ನಡಪ್ರಭ ವಾರ್ತೆ ಪಾಂಡವಪುರ
ಪಟ್ಟಣದ ತಾಪಂ ಸಭಾಂಗಣದ ಆವರಣದಲ್ಲಿ ತಾಲೂಕು ಆಡಳಿತ ಹಾಗೂ ಪುರಸಭೆ ಮತ್ತು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ 134ನೇ ಜಯಂತಿ ಉದ್ಘಾಟಿಸಿ ಮಾತನಾಡಿದರು.
ಜಾತಿ ಆಧಾರದ ಮೇಲೆ ಎಲ್ಲರೂ ತೀರ್ಮಾನವಾಗುತ್ತಿದ್ದ ದೇಶದ ಒಳಗೆ ಆ ವ್ಯವಸ್ಥೆ ಹೋಗಿ ಎಲ್ಲರಿಗೂ ಸಮಾನವಾಗಿರುವ ನ್ಯಾಯ, ಅವಕಾಶ ಸಿಗಬೇಕು ಎನ್ನುವುದು ಅಂಬೇಡ್ಕರ್ ಕನಸು. ಪ್ರಸ್ತುತ ಸಮಾಜದಲ್ಲಿ ಅಂಬೇಡ್ಕರ್ ಕನಸು ಇದುವರೆಗೂ ನನಸಾಗಿಲ್ಲ. ಇಂದಿಗೂ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ದೌರ್ಜನ್ಯಗಳು ನಡೆಯುತ್ತಿವೆ ಎಂದು ಬೇಸರ ವ್ಯಕ್ತಡಿಸಿದರು.ತಹಸೀಲ್ದಾರ್ ಸಂತೋಷ್ ಕುಮಾರ್ ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಕೊಟ್ಟಿರುವ ಸಂವಿಧಾನದಿಂದ ನಾವೆಲ್ಲರು ನೆಮ್ಮದಿಯಿಂದ ಬದುಕುವಂತಾಗಿದೆ. ಅಂಬೇಡ್ಕರ್ ಮಹಾನ್ ನಾಯಕರ ಜಯಂತಿಯನ್ನು ಪ್ರತಿಯೊಬ್ಬರು ಹಬ್ಬದಂತೆ ವರ್ಷವಿಡಿ ಆಚರಣೆ ಮಾಡಬೇಕು ಎಂದರು.
ಶಾಸಕರು ಗೈರು:
ತಾಲೂಕು ಆಡಳಿತದಿಂದ ನಡೆದ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಜಯಂತಿ ಕಾರ್ಯಕ್ರಮಕ್ಕೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಗೈರಾಗಿದ್ದರು. ಶಾಸಕರು ಅಮೆರಿಕಾಗೆ ತೆರಳಿದ್ದರಿಂದ ಜಯಂತಿಯಲ್ಲಿ ಭಾಗವಹಿಸಿರಲಿಲ್ಲ. ನಾಡಹಬ್ಬಗಳು, ಜಯಂತಿಗಳಿಗೆ ಶಾಸಕರು ಕೈಗಾರಿಗ್ದರಿಂದ ಸಾರ್ವಜನಿಕರ ಆಕ್ರೋಶ ಕಾರಣವಾಗಿತ್ತು.