ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಪಂಚಮಸಾಲಿ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ

KannadaprabhaNewsNetwork |  
Published : Nov 24, 2025, 02:45 AM IST
ಪೋಟೋ ಇದೆ. | Kannada Prabha

ಸಾರಾಂಶ

ಶೇ.95ರಷ್ಟು ಅಂಕ ಪಡೆದರೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಪಂಚಮಸಾಲಿ ಸಮಾಜದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಅವಶ್ಯವಿದ್ದು ಯಾವುದೇ ಕಾರಣಕ್ಕೂ ಹೋರಾಟವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಮಾಜದ ಜನರಲ್ಲಿ ಮನವಿ ಮಾಡಿದರು.

ಬ್ಯಾಡಗಿ: ಶೇ.95ರಷ್ಟು ಅಂಕ ಪಡೆದರೂ ಸರ್ಕಾರಿ ಉದ್ಯೋಗ ಪಡೆಯುವಲ್ಲಿ ಪಂಚಮಸಾಲಿ ಸಮಾಜದ ಮಕ್ಕಳಿಗೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ಸಮಾಜದ ಮಕ್ಕಳಿಗೆ 2ಎ ಮೀಸಲಾತಿ ಅವಶ್ಯವಿದ್ದು ಯಾವುದೇ ಕಾರಣಕ್ಕೂ ಹೋರಾಟವನ್ನು ರಾಜಕೀಯ ದೃಷ್ಟಿಕೋನದಿಂದ ನೋಡದಂತೆ ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಸಮಾಜದ ಜನರಲ್ಲಿ ಮನವಿ ಮಾಡಿದರು.ಕಿತ್ತೂರ ರಾಣಿ ಚನ್ನಮ್ಮ ಜಯಂತಿ ಅಂಗವಾಗಿ ಮೋಟೆಬೆನ್ನೂರಿನಲ್ಲಿ ನಡೆದ ಪ್ರತಿಭಾ ಪುರಸ್ಕಾರ ಕಾಯಕ್ರಮವನ್ನು ಉದ್ದೇಶಿಸಿ ಅವರು ಮತನಾಡಿದರು. ಸ್ವಾಮೀಜಿ ನೋಡಿ ನಾವೆಲ್ಲರೂ ಹೋರಾಟಕ್ಕೆ ಇಳಿಯಬೇಕೆ ಹೊರತು ರಾಜಕಾರಣಿಗಳನ್ನಲ್ಲ ರಾಜಕೀಯ ದೃಷ್ಟಿಕೋನದಿಂದ ಹೋರಾಟವನ್ನು ನೋಡದಂತೆ ಮತ್ತು ವ್ಯಕ್ತಿಗತವಾಗಿ ಪರಿವರ್ತನೆಗೊಳಿಸಿದಂತೆ ಮನವಿ ಮಾಡಿದರು. ಪಂಚಮಸಾಲಿಗಳು ಸ್ವಾಭಿಮಾನಗಳು ಇನ್ನಿತರ ಸಮಾಜದೊಂದಿಗೆ ಸಹಕಾರ ಸಹಬಾಳ್ವೆ ನಡೆಸುತ್ತಾ ಬಂದಿದ್ದೇವೆ. ಆದರೆ ನಮ್ಮವರಲ್ಲಿ ಬಡತನ ಅನುಭವಿಸುತ್ತಿರುವ ಕುಟುಂಬಗಳು ಶೈಕ್ಷಣಿಕ ಸೌಲಭ್ಯದಿಂದ ವಂಚಿತರಾಗಿದ್ದು 2ಎ ಮೀಸಲಾತಿ ಪೆಡದುಕೊಳ್ಳುವುದು ಅನಿವಾರ್ಯ ಎಂದರು.ಕಿತ್ತೂರ ಚೆನ್ನಮ್ಮ ಸಮುದಾಯದ ಅಸ್ಮಿತೆ: ವೀರರಾಣಿ ಕಿತ್ತೂರ ಚೆನ್ನಮ್ಮ ಪಂಚಮಸಾಲಿ ಸಮುದಾಯದ ಅಸ್ಮಿತೆ, ಅಷ್ಟೇ ಏಕೆ? ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರಿಗೆ ಎದೆಕೊಟ್ಟು ನಿಲ್ಲುವ ಮೂಲಕ ಅಂದಿನ ಕಾಲಘಟ್ಟದಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಜನರನ್ನು ಪ್ರೇರೇಪಿಸಿದ್ದಾರೆ. ಅಂತಹ ವೀರರಾಣಿ ಚನ್ನಮ್ಮನ ರಕ್ತವನ್ನು ಹಂಚಿಕೊಂಡು ಹುಟ್ಟಿದ್ದೇವೆ ಎಂದರು. ಇದೇ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ಸಮಾಜದ ಮಕ್ಕಳಿಗೆ ಪ್ರಶಸ್ತಿಪತ್ರಗಳನ್ನು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಪಂಚಮಸಾಲಿ ಸಮಾಜದ ತಾಲೂಕಾಧ್ಯಕ್ಷ ತಿರಕಮ್ಮ ಮರಬಸಣ್ಣನವರ ಸೇರಿದಂತೆ ಸಮಾಜದ ಮುಖಂಡರಾದ ಶಿವಬಸಪ್ಪ ಕುಳೇನೂರ, ಮಲ್ಲಿಕಾರ್ಜುನ ಬಳ್ಳಾರಿ, ಬಸವರಾಜ ವೀರಾಪುರ, ಶೇಖರಗೌಡ ಗೌಡ್ರ, ವಿಜಯ ಬಳ್ಳಾರಿ, ಬಸವರಾಜ ದಿಡಗೂರ, ಪ್ರೇಮಾನಂದ ಲಕ್ಕಣ್ಣನವರ, ಎಂ.ಎಸ್. ಪಾಟೀಲ, ಶಂಕರಗೌಡ್ರ ಪಾಟೀಲ, ಜ್ಯೋತಿ ಕುದರಿಹಾಳ, ದಾನಪ್ಪ ಬಳ್ಳಾರಿ, ಶಿವಕುಮಾರ ಪಾಟೀಲ, ಸತೀಶ ಪಾಟೀಲ, ನಾಗನಗೌಡ ಕಲ್ಲಾಪೂರ, ಸಂಜೀವ ಹಿತ್ತಲಮನಿ, ಚಂದ್ರಶೇಖರ ಉಪ್ಪಿನ, ನಿಂಗನಗೌಡ ಕಲ್ಲಾಪೂರ, ನಿಂಗಪ್ಪ ಅಂಗಡಿ ಇನ್ನಿತರರಿದ್ದರು.

PREV

Recommended Stories

ಕನ್ನಡಿಗರೇ ಕನ್ನಡ ನಿರ್ಲಕ್ಷಿಸುತ್ತಿರುವುದು ಶೋಚನೀಯ-ಶಾಸಕ ಬಣಕಾರ
ಸಾಸರವಾಡದಲ್ಲಿ ನೆಫಿಲಾ ಜಾತಿಗೆ ಸೇರಿದ ದೈತ್ಯ ಜೇಡ ಪತ್ತೆ!