ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣ ಆಚರಿಸಬೇಕು. ಹಿಂದಿಗಿಂತಲೂ ಪ್ರಸ್ತುತ ಪೌರಕಾರ್ಮಿಕರನ್ನು ನೋಡುವ ದೃಷ್ಟಿ ಬದಲಾಗಿದೆ. ಪೌರಕಾರ್ಮಿಕರು ನಾವು ಯಾರಿಗೂ ಕಡೆಮೆ ಇಲ್ಲ ಎಂಬ ಆತ್ಮಸ್ಥೈರ್ಯದಿಂದ ಬದುಕಬೇಕು. ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರು ಆರೋಗ್ಯ ದೃಷ್ಟಿಯಿಂದ ಸುರಕ್ಷಾ ಕವಚ ಧರಿಸಿ ಕೆಲಸ ಮಾಡಬೇಕು.
ಕನ್ನಡಪ್ರಭ ವಾರ್ತೆ ಪಾಂಡವಪುರ
ಪೌರ ಕಾರ್ಮಿಕರ ದಿನಾಚರಣೆ ಹಿನ್ನೆಲೆಯಲ್ಲಿ ನಡೆದ ಕ್ರೀಡಾಕೂಟದಲ್ಲಿ ವಿಜೇತ ಪೌರ ಕಾರ್ಮಿಕರಿಗೆ ಬಹುಮಾನ ವಿತರಿಸಲಾಯಿತು.
ಪಟ್ಟಣದ ಪುರಸಭೆ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ ಪೌರಾಡಳಿತ, ನಗರಾಭಿವೃದ್ಧಿ ಇಲಾಖೆ ಹಾಗೂ ಪುರಸಭೆ ಕಾರ್ಯಾಲಯ ವತಿಯಿಂದ ನಡೆದಿದ್ದ ಕ್ರೀಡಾಕೂಟದ ವಿಜೇತರಿಗೆ ತಹಸೀಲ್ದಾರ್ ಆದರ್ಶ ಬಹುಮಾನ ವಿತರಿಸಿದರು.
ನಂತರ ಮಾತನಾಡಿ ಅವರು, ಪೌರಕಾರ್ಮಿಕರ ದಿನಾಚರಣೆಯನ್ನು ಅರ್ಥಪೂರ್ಣ ಆಚರಿಸಬೇಕು. ಹಿಂದಿಗಿಂತಲೂ ಪ್ರಸ್ತುತ ಪೌರಕಾರ್ಮಿಕರನ್ನು ನೋಡುವ ದೃಷ್ಟಿ ಬದಲಾಗಿದೆ. ಪೌರಕಾರ್ಮಿಕರು ನಾವು ಯಾರಿಗೂ ಕಡೆಮೆ ಇಲ್ಲ ಎಂಬ ಆತ್ಮಸ್ಥೈರ್ಯದಿಂದ ಬದುಕಬೇಕು ಎಂದರು.
ಸ್ವಚ್ಛತೆಯಲ್ಲಿ ತೊಡಗಿಕೊಳ್ಳುವ ಪೌರಕಾರ್ಮಿಕರು ಆರೋಗ್ಯ ದೃಷ್ಟಿಯಿಂದ ಸುರಕ್ಷಾ ಕವಚ ಧರಿಸಿ ಕೆಲಸ ಮಾಡಬೇಕು. ಕಸ ವಿಂಗಡಣೆ ವೇಳೆ ಬಳಸಿದ ಸಿರೇಂಜ್ ಅಥವಾ ಇನ್ನಿತರ ವಸ್ತುಗಳ ತಗುಲಿ ಗಂಭೀರ ಸಮಸ್ಯೆ ಎದುರಾಗಬಹುದು. ಹೀಗಾಗಿ ಸ್ವಚ್ಚತೆ ವೇಳೆ ಸುರಕ್ಷತೆ ಬಹುಮುಖ್ಯ. ಜತೆಗೆ ನಾಗರೀಕರು ಹಸಿ ಮತ್ತು ಒಣ ಕಸ ವಿಂಗಡಿಸಿದರೆ ಪೌರಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದರು.
ಪುರಸಭೆ ಮುಖ್ಯಾಧಿಕಾರಿ ಸತೀಶ್ ಕುಮಾರ್ ಮಾತನಾಡಿ, ಪೌರಕಾರ್ಮಿಕರ ದಿನಾಚರಣೆ ಆಚರಿಸುವ ಸಂಬಂಧ ಸರ್ಕಾರ 2012ರಲ್ಲಿ ಸೆ.23 ರಂದು ಪೌರಕಾರ್ಮಿಕರಿಗೆ ಕೆಲಸ ಕಾರ್ಯಗಳಿಗೆ ರಜೆ ಘೋಷಿಸಿ ಆದೇಶ ನೀಡಿತ್ತು. ಈ ಆದೇಶಕ್ಕೆ ಪ್ರಮುಖ ಕಾರಣ ಅಂದಿನ ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಟಿ.ಆರ್.ಸತ್ಯನಾರಾಯಣ್ ಎಂದರು.
ಪೌರಕಾರ್ಮಿಕರಿಗೆ ಆರೋಗ್ಯ, ಮಕ್ಕಳ ಉನ್ನತ ಶಿಕ್ಷಣ ಹಾಗೂ ನಿವೇಶನ ರಹಿತರಾಗಿ ಬದುಕಬಾರದು ಎಂಬ ಕಾರಣಕ್ಕೆ ಹಲವು ಮಹತ್ತರ ಯೋಜನೆಗಳನ್ನು ರೂಪಿಸಿದೆ. ಪೌರಕಾರ್ಮಿಕರು ಈ ಎಲ್ಲಾ ಸೌಲಭ್ಯಗಳನ್ನು ಬಳಸಿಕೊಂಡು ಉತ್ತಮ ಜೀವನ ರೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ತಾಲೂಕು ಆರೋಗ್ಯಾಧಿಕಾರಿ ಡಾ.ಸಿ.ಎ.ಅರವಿಂದ್, ಸಿಡಿಪಿಒ ಪೂರ್ಣಿಮ, ಎಂಜಿನಿಯರ್‌ಗಳಾದ ಚಾಡಪ್ಪ, ಯಶಸ್ವಿನಿ, ಪರಿಸರ ಎಂಜಿನಿಯರ್ ಸಹನಾ, ಆರೋಗ್ಯಾಧಿಕಾರಿಗಳದ ಮಂಜುನಾಥ್, ಧನಲಕ್ಷ್ಮಿ, ಮಣಿಪ್ರಸಾದ್, ಸಿಬ್ಬಂದಿ ನಾಗೇಶ್, ಲಕ್ಷ್ಮೀನಾರಾಯಣ, ಕೃಷ್ಣ, ನರಸಿಂಹ, ಮಂಜುಳಾ ಪೌರಕಾರ್ಮಿಕರಾದ ಈಶ್ವರ, ಡಿ.ರಂಗ, ಗಣೇಶ್, ಮಧು, ಶಿವಕುಮಾರ್, ಚಂದ್ರು, ಕುಪ್ಪಸ್ವಾಮಿ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.