ಪಾಂಡವಪುರ:
ಗಾಣಿಗ ಜನಾಂಗದ ರಾಮಸ್ವಾಮಿ ಗುರೂಜಿ ನೇತೃತ್ವದಲ್ಲಿ ಅಂಕೇಗೌಡ ಮತ್ತು ಪತ್ನಿ ವಿಜಯಲಕ್ಷ್ಮಿ ಅವರಿಗೆ ಪೇಟ ತೊಡಿಸಿ, ಹಣ್ಣು-ಹಂಪಲು ನೆನಪಿನ ಕಾಣಿಕೆ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಬಳಿಕ ಮಾತನಾಡಿ ರಾಮಸ್ವಾಮಿ ಗುರೂಜಿ, ಈ ಹಿಂದೆ ಪುಸ್ತಕಗಳು ಸಿಗುತ್ತಿರಲಿಲ್ಲ. ಪುಸ್ತಕ ಓದುವವರಿದ್ದರು. ಆದರೆ, ಈಗ ಸಾಕಷ್ಟು ಪುಸ್ತಕಗಳು ಸಿಗುತ್ತಿವೆ. ಓದುವವರೇ ಇಲ್ಲದಿರುವುದು ನೋವಿನ ಸಂಗತಿ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾದ ಅಂಕೇಗೌಡರು ಪುಸ್ತಕ ಭಂಡಾರವನ್ನೇ ಸೃಷ್ಟಿ ಮಾಡಿದ್ದಾರೆ. ಇವರಿಗೆ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ಶ್ಲಾಘನೀಯ ಎಂದರು.ಈ ವೇಳೆ ಗಾಣಿಗ ಜನಾಂಗದ ಮುಖಂಡರಾದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಚಂದ್ರಶೇಖರ್, ಪುರಸಭೆ ಮಾಜಿ ಉಪಾಧ್ಯಕ್ಷ ಎಲ್.ಅಶೋಕ್, ಮಾಜಿ ಸದಸ್ಯ ಎನ್.ಚಂದ್ರಶೇಖರ್, ಮೆಡಿಕಲ್ ಜಗದೀಶ್, ಸೋಮಶೇಖರ್, ಅರಣ್ಯ ಇಲಾಖೆ ರಮೇಶ್, ವಕೀಲ ಶ್ರೀಧರ್, ಕಾರು ಚಾಲಕ ನಾರಾಯಣ, ವಿನಾಯಕ ಸೇರಿದಂತೆ ಇತರರಿದ್ದರು.ಮೂವರಿಗೆ ರಾಜ್ಯ ಸಚಿವ ಸ್ಥಾನಮಾನ ನೀಡಿ ರಾಜ್ಯ ಸರ್ಕಾರ ಆದೇಶ
ಮೈಷುಗರ್ ಕಾರ್ಖಾನೆ ಅಧ್ಯಕ್ಷ ಸಿ.ಡಿ.ಗಂಗಾಧರ್, ಒಕ್ಕಲಿಗರ ಸಮುದಾಯದ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಂ.ಎಸ್.ಆತ್ಮಾನಂದ ಹಾಗೂ ರಾಜ್ಯ ಕೈಮಗ್ಗ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ನಾಗೇಂದ್ರ ಕುಮಾರ್ ಅವರನ್ನು ಮುಂದಿನ ಆದೇಶದವರೆಗೆ ರಾಜ್ಯ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವಂತಹ ಸೌಲಭ್ಯ ನೀಡಲಾಗಿದೆ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಎನ್.ಆರ್.ಬಾಣದರಂಗಯ್ಯ ಫೆ.7ರಂದು ಆದೇಶ ಹೊರಡಿಸಿದ್ದಾರೆ. ಈ ಮೂವರಿಗೆ ಸಚಿವರ ಸ್ಥಾನಮಾನಕ್ಕೆ ಅನ್ವಯಿಸುವ ಸೌಲಭ್ಯಗಳನ್ನು ಒದಗಿಸತಕ್ಕದ್ದು ಎಂದು ಆಡಳಿತ ಇಲಾಖೆಗಳಿಗೆ ಸೂಚಿಸಿದ್ದಾರೆ.