ಪಾಂಡವಪುರ:
ಪಟ್ಟಣದ ಪ್ರಸಿದ್ಧ ಶ್ರೀಚಂದ್ರಮೌಳೇಶ್ವರ ದೇವಸ್ಥಾನದಲ್ಲಿ ಅಶ್ಚಥ್ ನಾರಾಯಣ್ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ದೇವರಿಗೆ ಅಭಿಷೇಕ ನೆರವೇರಿಸಿ, ನೆರೆದಿದ್ದ ಭಕ್ತಾದಿಗಳಿಗೆ ಪ್ರಸಾದ ವಿತರಿಸಿ, ಪಕ್ಷದ ನಾಯಕರಿಗೆ ಒಳ್ಳೆಯದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿಕೊಂಡರು.
ನಂತರಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.ಅರವಿಂದ್ ಸಹಕಾರದೊಂದಿಗೆ ಆಸ್ಪತ್ರೆ ಒಳರೋಗಿಗಳಿಗೆ ಹಾಗೂ ಆಸ್ಪತ್ರೆಯಲ್ಲಿದ್ದ ಬಡ ಕುಟುಂಬಸ್ಥರಿಗೆ ಹಣ್ಣು ಹಂಪಲು ವಿತರಿಸಿದರು.ಟೌನ್ ಬಿಜೆಪಿ ಅಧ್ಯಕ್ಷ ಬೀರಶೆಟ್ಟಹಳ್ಳಿ ಸೋಮಶೇಖರ್ ಮಾತನಾಡಿ, ಡಾ.ಅಶ್ಚತ್ ನಾರಾಯಣ್ ಹುಟ್ಟುಹಬ್ಬದ ಅಂಗವಾಗಿ ದೇವರಲ್ಲಿ ವಿಶೇಷ ಪೂಜೆ ಸಲ್ಲಿಸಿ, ನಾಯಕರಿಗೆ ಮತ್ತಷ್ಟು ಉನ್ನತ ಹುದ್ದೆ ಸಿಗಲಿ ಎಂದು ತುಂಬಾ ಸಂತೋಷದಿಂದ ಪ್ರಾರ್ಥಿಸಿದ್ದೇವೆ. ಈಗಾಗಲೇ ರಾಜಕೀಯವಾಗಿ ಡಿಸಿಎಂ ಸ್ಥಾನ ದೊರಕಿದೆ. ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಮುಖ್ಯಮಂತ್ರಿ ಸ್ಥಾನ ಲಭಿಸಲಿ ಎಂದು ಶುಭ ಕೋರಿದರು.
ಹಲಗೂರು: ಬೆನಮನಹಳ್ಳಿ ಹೊರವಲಯದಲ್ಲಿ ಹಲವು ದಿನಗಳಿಂದ ಪದೇ ಪದೇ ಸುಳಿದಾಡುತ್ತಿದ್ದ ಚಿರತೆಯನ್ನು ಕಂಡು ಎಚ್ಚೆತ್ತ ಅರಣ್ಯ ಇಲಾಖೆ ಅಧಿಕಾರಿಗಳು ಸೆರೆಗೆ ಬೋನ್ ಇರಿಸಿದ್ದಾರೆ.
ಬೆನಮನಹಳ್ಳಿಯ ಸುತ್ತಾಮುತ್ತ ಹಲವು ದಿನಗಳಿಂದ ಚಿರತೆ ದಾಳಿ ಮಾಡಿ ಸಾಕು ನಾಯಿಗಳನ್ನು ತಿಂದು ಹಾಕಿತ್ತು. ಈ ಭಾಗದ ರೈತರು ರಾತ್ರಿ ಸಮಯದಲ್ಲಿ ಜಮೀನುಗಳಲ್ಲಿ ನೀರು ಹಾಯಿಸಲು ಭಯ ಪಡುತ್ತಿದ್ದರು. ಹಲವು ದಿನಗಳಿಂದ ಚಿರತೆ ಸೆರೆ ಹಿಡಿಯುವಂತೆ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮನವಿ ಮಾಡಿದ್ದರು.ಸೋಮವಾರ ಮಧ್ಯಾಹ್ನ ಬಿ.ಕೆ.ನಾಗಣ್ಣರ ಜಮೀನಿನಲ್ಲಿ ಬೋನ್ ಇರಿಸಿದ್ದು, ಚಿರತೆ ಸೆರೆಗೆ ಅಗತ್ಯವಿರುವ ಸಿದ್ಧತೆ ಮಾಡಲಾಗಿದೆ ಎಂದು ಮಳವಳ್ಳಿ ಪ್ರಾದೇಶಿಕ ಅರಣ್ಯ ವಲಯದ ಗಸ್ತು ಅರಣ್ಯ ಪಾಲಕ ಪಿ.ಎಂ.ಕೃಷ್ಣ ತಿಳಿಸಿದರು.
ಈ ವೇಳೆ ಗ್ರಾಮದ ರೈತರಾದ ಮನು, ಚೇತನ್, ನಿತಿನ್, ಪಾಪಣ್ಣ, ಅರಣ್ಯ ಇಲಾಖೆ ಸಿಬ್ಬಂದಿ ಪ್ರದೀಪ್ ಇದ್ದರು.