ಕೊಡವ ಜಾನಪದ, ಸಂಸ್ಕೃತಿ ಕಲಿಸಿ ಬೆಳೆಸಿ: ಕೇಲೇಟಿರ ಪವಿತ್ ಪೂವಯ್ಯ

KannadaprabhaNewsNetwork |  
Published : Oct 09, 2026, 02:45 AM IST
ಚಿತ್ರ : 4ಎಂಡಿಕೆ1 : ಕೊಡವ ಸಾoಪ್ರದಾಯಿಕ ಪಾಣಿ ಮಂಡೆ ತುಣಿ, ವಸ್ತ್ರ, ಚೇಲೆ ಕಟ್ಟುವ ತರಬೇತಿ ನಡೆಯಿತು.  | Kannada Prabha

ಸಾರಾಂಶ

ಕೊಡವ ಜಾನಪದ ಮತ್ತು ಸಂಸ್ಕೃತಿ ಬಗ್ಗೆ ಗೊತ್ತಿರುವುದನ್ನು ಬೇರೆಯವರಿಗೆ ಕಲಿಸುವ ಮೂಲಕ ಬೆಳೆಸಬೇಕಾಗಿದೆ. ಇಲ್ಲದಿದ್ದರೆ ತಮ್ಮಲ್ಲಿಯೇ ಅದು ಉಳಿದುಹೋಗುತ್ತದೆ, ಮಕ್ಕಳು ಕಲಿತಾಗ ಅದು ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತದೆ ಎಂದು ತರಬೇತುದಾರ ನಾಪೋಕ್ಲುವಿನ ಕೇಲೇಟಿರ ಪವಿತ್ ಪೂವಯ್ಯ ಹೇಳಿದರು.

ಶ್ರೀಮಂಗಲ: ಕೊಡವ ಜಾನಪದ ಮತ್ತು ಸಂಸ್ಕೃತಿ ಬಗ್ಗೆ ಗೊತ್ತಿರುವುದನ್ನು ಬೇರೆಯವರಿಗೆ ಕಲಿಸುವ ಮೂಲಕ ಬೆಳೆಸಬೇಕಾಗಿದೆ. ಇಲ್ಲದಿದ್ದರೆ ತಮ್ಮಲ್ಲಿಯೇ ಅದು ಉಳಿದುಹೋಗುತ್ತದೆ, ಮಕ್ಕಳು ಕಲಿತಾಗ ಅದು ಮುಂದಿನ ತಲೆಮಾರಿಗೆ ಹಸ್ತಾಂತರವಾಗುತ್ತದೆ ಎಂದು ತರಬೇತುದಾರ ನಾಪೋಕ್ಲುವಿನ ಕೇಲೇಟಿರ ಪವಿತ್ ಪೂವಯ್ಯ ಹೇಳಿದರು. ಪೊನ್ನಂಪೇಟೆ ತಾಲೂಕಿನ ಬಿರುನಾಣಿಯ ಮರೆನಾಡ್ ಕೊಡವ ಸಮಾಜದಲ್ಲಿ ತಜ್ಞರಿಂದ ಮಕ್ಕಳಿಗೆ ನೀಡಲಾದ ಕೊಡವ ಸಾಂಪ್ರದಾಯಿಕ ಪಾಣಿ ಮಂಡೆ ತುಣಿ, ವಸ್ತ್ರ ಕಟ್ಟುವ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ತಲೆಗೆ ವಸ್ತ್ರದಲ್ಲಿ ಮೂಲವಾಗಿ ಬಿಳಿ ಮತ್ತು ಕೆಂಪು ಚೆಕ್ ವಸ್ತ್ರ ಬಳಕೆಯಲ್ಲಿತ್ತು, ಬಿಳಿ ಬಣ್ಣದ ವಸ್ತ್ರವನ್ನು ದಿನನಿತ್ಯ ಹಾಗೂ ಕೆಂಪು ಬಣ್ಣದ್ದನ್ನು ಮದುವೆ, ಹಬ್ಬಗಳಿಗೆ ಕಟ್ಟುತ್ತಿದ್ದರು, ಮಹಿಳೆಯರಿಗೆ ತಲೆಗೆ ಕಟ್ಟುವ ವಸ್ತ್ರವಿದ್ದು ಕಟ್ಟುವ ರೀತಿ ವಿಭಿನ್ನವಾಗಿರುತ್ತದೆ ಎಂದು ಅಭಿಪ್ರಾಯಪಟ್ಟರು.ಮರೆನಾಡ್ ಕೊಡವ ಸಮಾಜದ ಅಧ್ಯಕ್ಷ ಅಣ್ಣಳಮಾಡ ಲಾಲ ಅಪ್ಪಣ್ಣ ಉದ್ಘಾಟಿಸಿ ಮಾತನಾಡಿ, ಮರೆನಾಡಿನ 5 ಗ್ರಾಮಗಳಲ್ಲಿ ಕೊಡವ ಜಾನಪದ ಕಲೆಗಳಾದ ಬೊಳಕಾಟ್, ಪರೆಯಕಳಿ, ಪುತ್ತರಿ ಕೋಲಾಟ್, ಕಪ್ಪೆಯಾಟ್, ಬಾಳೋ ಪಾಟ್ ಸೇರಿದಂತೆ ಕೊಡವ ಸಂಸ್ಕೃತಿಯ ಭಾಗವಾದ ಮಂಡೆತುಣಿ, ವಸ್ತ್ರ ಕಟ್ಟುವುದನ್ನು ಮಕ್ಕಳಿಗೆ ಕಲಿಸುವ ಮೂಲಕ ಕೊಡವ ಸಂಸ್ಕೃತಿಗೆ ಕೊಡವ ಜಾನಪದ ತರಬೇತುದಾರ ಚಂಗಣಮಾಡ ಬೋಪಣ್ಣ ಅವರು ತಮ್ಮದೇ ಆದ ಕೊಡುಗೆಯನ್ನು ಜನಾಂಗಕ್ಕೆ ನೀಡುತ್ತಾ ಬಂದಿದ್ದಾರೆ ಎಂದರು.

ತರಬೇತುದಾರರಾದ ಬಿರುನಾಣಿಯ ಚಂಗಣಮಾಡ ಬೋಪಣ್ಣ, ಪೊನ್ನಂಪೇಟೆಯ ಮಾಚಂಗಡ ಸಚಿನ್ ತಮ್ಮಯ್ಯ ಅವರು ತರಬೇತಿ ನೀಡಿದರು. ಪಾಣಿ ಮಂಡೆ ತುಣಿ, ಕೋರೆ ಕಟ್ಟ್ ಮಂಡೆ ತುಣಿ, ಚೇಲೆ ಕಟ್ಟುವ ತರಬೇತಿ ನೀಡಲಾಯಿತು.ಮರೆನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಕಾಯಪಂಡ ಸುನಿಲ್, ಕಾರ್ಯಧ್ಯಕ್ಷ ಬೊಳ್ಳೇರ ಅಪ್ಪುಟ ಪೊನ್ನಪ್ಪ, ಕಾರ್ಯದರ್ಶಿ ಕಳಕಂಡ ಜೀತು ಕುಶಾಲಪ್ಪ, ಜಂಟಿ ಕಾರ್ಯದರ್ಶಿ ಬುಟ್ಟಿಯಂಡ ಸುನಿತ ಗಪ್ಪಣ್ಣ, ಖಜಾಂಚಿ ಬೊಟ್ಟಂಗಡ ರವೀಂದ್ರ ವಿಶು ನಿರ್ದೇಶಕರಾದ ಚೋನಿರ ಮಧು, ಕಾಯಕಂಡ ಸತು, ಕಾಳಿಮಾಡ ರಶಿಕ್ ಕಾವೇರಪ್ಪ, ಅಣ್ಣಳಮಾಡ ಗಿರೀಶ್, ಬಲ್ಯಮೀದೇರಿರ ಪ್ರಕಾಶ್ ಸೇರಿದಂತೆ ಪ್ರಮುಖರು ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶ್ರೀಶಾ ಸೌಹಾರ್ದ ಸೊಸೈಟಿ ನಿವ್ವಳ ಲಾಭದಲ್ಲಿ ಶೇ.35ರಷ್ಟು ಏರಿಕೆ
10ರಂದು ಮಾ ‘ರನ್ ಆ್ಯಂಡ್ ರೈಡ್ ಫಾರ್ ಡಿಗ್ನಿಟಿ’