ನಾಡು ನುಡಿಯ ಕಾರ್ಯಕ್ಕೆ ಪಪಂ ಸದಾ ಸನ್ನದ್ಧ: ಕೊರಧಾನ್ಯಮಠ

KannadaprabhaNewsNetwork |  
Published : Jan 17, 2025, 12:47 AM IST
16ಜಿಡಿಜಿ11 | Kannada Prabha

ಸಾರಾಂಶ

ಜ್ಯೋತಿ ಹಾಗೂ ರಥದ ಸ್ವಾಗತದ ಸ್ಥಳದಲ್ಲಿ ದ್ವಾರಬಾಗಿಲು ನಿರ್ಮಿಸಿ ಅಲ್ಲಿಂದ ಸ್ವಾಗತಿಸಿ ನರೇಗಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅದನ್ನು ಗಜೇಂದ್ರಗಡ ರಸ್ತೆಯಿಂದ ಬೀಳ್ಕೊಡುವ ಕಾರ್ಯ ಮಾಡಬೇಕು

ನರೇಗಲ್ಲ: ಗಜೇಂದ್ರಗಡದಲ್ಲಿ ಜರುಗುವ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಜ.19ರ ಮಧ್ಯಾಹ್ನ 1ಕ್ಕೆ ಜಕ್ಕಲಿ ಗ್ರಾಮದಿಂದ ನರೇಗಲ್ಲಿಗೆ ಆಗಮಿಸಲಿರುವ ರಥ ಹಾಗೂ ಜ್ಯೋತಿಯ ಸ್ವಾಗತಕ್ಕೆ ಸಕಲ ಕನ್ನಡದ ಮನಸ್ಸುಗಳು ಸನ್ನದ್ಧರಾಗಿದ್ದು, ವೈಶಿಷ್ಟ್ಯಪೂರ್ಣ ಸ್ವಾಗತಕ್ಕೆ ನರೇಗಲ್ಲ ಸಜ್ಜಾಗಿದೆ ಎಂದು ಪಪಂ ಉಪಾಧ್ಯಕ್ಷ ಕುಮಾರಸ್ವಾಮಿ ಕೊರಧಾನ್ಯಮಠ ಹೇಳಿದರು.

ಸ್ಥಳೀಯ ಪಪಂ ಆವರಣದಲ್ಲಿ ರಥ ಹಾಗೂ ಜ್ಯೋತಿಯ ಸ್ವಾಗತದ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ತಾಲೂಕಿನಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ. ಇದಕ್ಕೆ ಸಕಲ ಕನ್ನಡದ ಮನಸ್ಸುಗಳು ಮುಂದಾಗಿ ಅದ್ಧೂರಿಯಾಗಿ ಸ್ವಾಗತಿಸಲು ಹಾಗೂ ನಾಡು ನುಡಿಯ ಕಾರ್ಯಕ್ಕಾಗಿ ಪಪಂ ಸದಾ ಸಿದ್ಧವಿದ್ದು, ಅದಕ್ಕೆ ಪೂರಕವಾಗಿ ಬೇಕಾಗುವ ಸಿದ್ಧತೆ ನಾವು ನೀವೆಲ್ಲರು ಸೇರಿ ಹಬ್ಬದಂತೆ ಆಚರಿಸೋಣ ಎಂದರು.

ಸಾಹಿತಿ ಎಂ.ಎಸ್. ಧಡೇಸೂರಮಠ ಮಾತನಾಡಿ, ಜ್ಯೋತಿ ಹಾಗೂ ರಥದ ಸ್ವಾಗತದ ಸ್ಥಳದಲ್ಲಿ ದ್ವಾರಬಾಗಿಲು ನಿರ್ಮಿಸಿ ಅಲ್ಲಿಂದ ಸ್ವಾಗತಿಸಿ ನರೇಗಲ್ಲಿನ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅದನ್ನು ಗಜೇಂದ್ರಗಡ ರಸ್ತೆಯಿಂದ ಬೀಳ್ಕೊಡುವ ಕಾರ್ಯ ಮಾಡಬೇಕು. ಇದಕ್ಕೆ ಪಟ್ಟಣದ ಪ್ರತಿಯೊಂದು ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳು, ವಿವಿಧ ಸಂಘಟನೆ ಮುಖಂಡರು ಹಾಗೂ ಕಾರ್ಯಕರ್ತರು ಭಾಗಿಯಾಗಬೇಕು ಎಂದರು.

ಈ ವೇಳೆ ಕರವೇ ರಾಜ್ಯಪ್ರಧಾನ ಕಾರ್ಯದರ್ಶಿ ಹನುಮಂತ ಅಬ್ಬಿಗೇರಿ, ಶಿಕ್ಷಕ ಎಂ.ಕೆ. ಬೇವಿನಕಟ್ಟಿ, ಸಾಹಿತಿ ಡಿ.ಎ. ಅರವಟಗಿಮಠ, ಪಪಂ ಮುಖ್ಯಾಧಿಕಾರಿ ಮಹೇಶ ನಿಡಸೇಸಿ,ನಿವೃತ್ತ ಶಿಕ್ಷಕ ಕೆ.ಎಸ್. ಕಳಕೊಣ್ಣವರ ಮಾತನಾಡಿದರು.

ಸಭೆಯಲ್ಲಿ ಉಪತಹಸೀಲ್ದಾರ ದೊಡ್ಡಮನಿ, ಪಪಂ ಅಧ್ಯಕ್ಷ ಫಕೀರಪ್ಪ ಮಳ್ಳಿ, ಪಪಂ ಸದಸ್ಯ ದಾವೂದಾಲಿ ಕುದರಿ, ಕಳಕನಗೌಡ ಪೊಲೀಸ್‌ಪಾಟಿಲ, ಪಪಂ ಮಾಜಿ ಉಪಾಧ್ಯಕ್ಷ ಶ್ರೀಶೈಲಪ್ಪ ಬಂಡಿಹಾಳ,ಮುಖಂಡ ನಿಂಗಪ್ಪ ಚಲವಾದಿ ಪಪಂ ಮಾಜಿ ಸದಸ್ಯ ಯಲ್ಲಪ್ಪ ಮಣ್ಣೊಡ್ಡರ, ಶರಣಪ್ಪ ಹಂಜಿ, ಸಕ್ರಪ್ಪ ಹಡಪದ, ಪಪಂ ಸದಸ್ಯ ವಿರೇಶ ಜೋಗಿ, ಶೇಖಪ್ಪ ಕೆಂಗಾರ, ಮಲ್ಲಿಕಾರ್ಜುನಗೌಡ ಭೂಮನಗೌಡ್ರ ಸೇರಿದಂತೆ ವಿವಿಧ ಸಂಘಟನೆಗಳ ಮುಖಂಡರು, ಪ್ರಮುಖರು ಇದ್ದರು.

PREV

Recommended Stories

ಶ್ರೀ ಶ್ರೀ ರವಿಶಂಕರ್‌ಗೆ ವರ್ಲ್ಡ್ ಲೀಡರ್ ಫಾರ್ ಪೀಸ್ ಆ್ಯಂಡ್‌ ಸೆಕ್ಯೂರಿಟಿ ಪ್ರಶಸ್ತಿ
ಹಾಡಹಗಲೇ ಮನೆಗೆ ನುಗ್ಗಿ ಚಹಾ ವ್ಯಾಪಾರಿಯ ಕತ್ತು ಕೊಯ್ದು ಹತ್ಯೆ