ಕನ್ನಡಪ್ರಭ ವಾರ್ತೆ ಹೊಸದುರ್ಗ
ಪಟ್ಟಣದ ನಿಜಲಿಂಗಪ್ಪ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿಪರಿಸರದ ಪಾಠವನ್ನು ಕೇವಲ ಪುಸ್ತಕದಲ್ಲಿ ಮಾತ್ರ ಕಲಿಸುವುದಲ್ಲ ಮಕ್ಕಳಿಗೆ ಗಿಡಕೊಟ್ಟು ಅದನ್ನು ಮನೆಯಲ್ಲಿ ನೆಡೆಸಿ ಅದರ ಪೋಷಣೆ ಮಾಡುವ ಮೂಲಕ ಪ್ರಾಯೋಗಿಕ ಶಿಕ್ಷಣ ಬಹುಮುಖ್ಯ ಎಂದರು.
ಶಾಲಾ ಕಾಲೇಜುಗಳ ಸುತ್ತಾ ಗಿಡ ಮರ ಬೆಳೆಸುವುದು , ಅವುಗಳನ್ನು ಸಂರಕ್ಷಣೆ ಮಾಡುವುದು ಪರಿಸರ ಸಂರಕ್ಷಣೆಯ ದೊಡ್ಡ ಅಭಿಯಾನ. ಜನಸಂಖ್ಯೆ ಬೆಳೆದಂತೆ ಭೂಮಿ ಬೆಳೆಯಲ್ಲ ಹಾಗಾಗಿ ಇರುವ ಭೂಮಿಯಲ್ಲಿಯೇ ಉತ್ತಮ ಪರಿಸರವನ್ನು ಹೊಂದಬೇಕಿದೆ . ಇದೆ ರೀತಿ ಮರಗಳ ನಾಶವಾದರೆ ಮಕ್ಕಳು ಆಕ್ಸಿಜನ್ ಬ್ಯಾಗುಗಳನ್ನು ಹಾಕಿಕೊಂಡು ಶಾಲೆಗೆ ಬರುವ ದಿನಗಳು ದೂರವಿಲ್ಲ ಎಂದರು.ಕರಡಿ, ಚಿರತೆ ಸೇರಿದಂತೆ ಕೆಲವು ಕಾಡು ಪ್ರಾಣಿಗಳು ಪಟ್ಟಣದಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿರುವುದು ಮನುಷ್ಯನ ದುರಾಸೆಯಿಂದ. ಕಾಡು ಪ್ರಾಣಿಗಳು ವಾಸಿಸುವ ಜಾಗವನ್ನು ನಾವು ಆಕ್ರಮಿಸಿರುವುದರಿಂದ ಅವು ನಮ್ಮ ಪ್ರದೇಶಕ್ಕೆ ಬರುತ್ತಿವೆ ಆದ್ದರಿಂದ ಇನ್ನು ಮುಂದೆ ಯಾರೇ ಪೋನ್ ಮಾಡಿ ಪಟ್ಟಣದಲ್ಲಿ ಕರಡಿ ಬಂದಿದೆ ಎಂದರೆ ಅದನ್ನು ಹಿಡಿಯಬೇಡಿ ಎಂದು ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದ್ದೇನೆ ಎಂದರು.
ಹೈಕೋರ್ಟ ನ ನಿವೃತ್ತ ನ್ಯಾಯಾಧೀಶ ಎಚ್ ಬಿಲ್ಲಪ್ಪ ಉದ್ಗಾಟಿಸಿದರು. ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿವಲಿಂಗಪ್ಪ ಅಧ್ಯಕ್ಷತೆ ವಹಿಸಿದ್ದರು. ಸಂಸ್ಥೆಯ ಕಾರ್ಯದರ್ಶಿ ಕೆ ಎಸ್ ಕಲ್ಮಠ್ ಪ್ರಾಸ್ತಾವಿಕವಾಗಿ ಮಾತನಾಡಿದರು.