ಕನ್ನಡ ನಾಡು ನುಡಿ ಸೇವೆ ಮಾಡಿದವರ ಬದುಕು ಸಾರ್ಥಕ

KannadaprabhaNewsNetwork |  
Published : Sep 17, 2024, 12:51 AM IST
ಗಡಿನಾಡು ಸಾಹಿತ್ಯ ಪರಿಷತ್ ಗಡಿನಾಡ ಕನ್ನಡ ನುಡಿ ಸೇವಕ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉದ್ಘಾಟಿಸಿ ಪ್ರಶಸ್ತಿ ಪ್ರಧಾನ ಮಾಡುವುತ್ತಿರುವುದು. | Kannada Prabha

ಸಾರಾಂಶ

ಕನ್ನಡ ನಾಡು ನುಡಿ ಸೇವೆ ಮಾಡಿದವರ ಬದುಕು ಸಾರ್ಥಕವಾಗಿ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.ಪರಶುರಾಂಪುರ ಸಮೀಪದ ಪಿಲ್ಲಹಳ್ಳಿಯ ಜ್ಞಾನವಿಕಾಸ ಶಾಲಾ ಆವರಣದಲ್ಲಿ ಗಡಿನಾಡು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ, ಗಡಿನಾಡು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಅವರಿಗೆ ಗಡಿನಾಡ ಕನ್ನಡ ನುಡಿ ಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಪರಶುರಾಂಪುರ

ಕನ್ನಡ ನಾಡು ನುಡಿ ಸೇವೆ ಮಾಡಿದವರ ಬದುಕು ಸಾರ್ಥಕವಾಗಿ ಇತಿಹಾಸದಲ್ಲಿ ದಾಖಲೆಯಾಗಿ ಉಳಿಯುತ್ತದೆ ಎಂದು ಶಾಸಕ ಟಿ. ರಘುಮೂರ್ತಿ ಅಭಿಪ್ರಾಯಪಟ್ಟರು.

ಪರಶುರಾಂಪುರ ಸಮೀಪದ ಪಿಲ್ಲಹಳ್ಳಿಯ ಜ್ಞಾನವಿಕಾಸ ಶಾಲಾ ಆವರಣದಲ್ಲಿ ಗಡಿನಾಡು ಸಾಹಿತ್ಯ ಪರಿಷತ್ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಿವೃತ್ತ ಶಿಕ್ಷಕ, ಗಡಿನಾಡು ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಎಚ್. ರಾಮಚಂದ್ರಪ್ಪ ಅವರಿಗೆ ಗಡಿನಾಡ ಕನ್ನಡ ನುಡಿ ಸೇವಕ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಗಡಿ ಭಾಗದಲ್ಲಿ ಕನ್ನಡ ಭಾಷೆಯನ್ನು ತೆಲುಗಿನ ಸಂಬಂಧಕ್ಕೆ ಬೆಸಿಗೆಯಾಗಿ ಕನ್ನಡ ಸೇವೆ ಮಾಡಿರುವ ರಾಮಚಂದ್ರಪ್ಪ ಅವರ ಸೇವೆ ಅನನ್ಯವಾಗಿದೆ. ಸೇವಾ ಕಾರ್ಯಕ್ಕೆ ಇರುವ ಗಡಿನಾಡು ಸಾಹಿತ್ಯ ಪರಿಷತ್ ಸೇವೆಯನ್ನು ರಾಮಚಂದ್ರಪ್ಪ ಅರ್ಥಪೂರ್ಣವಾಗಿ ಮಾಡಿದ್ದಾರೆ ಎಂದು ಬಣ್ಣಿಸಿದರು.ಸಚಿವ ಡಿ. ಸುಧಾಕರ್ ಮಾತನಾಡಿ ಸೇವಾವಧಿಗೆ ಸೀಮಿತವಾಗಿರುವ ನೌಕರರನ್ನು ನೋಡಿದ್ದೇವೆ. ಸೇವಾ ಅವಧಿಯನ್ನು ಸಮಾಜ ಸೇವೆಗೆ ತೊಡಗಿಸಿಕೊಂಡಿವ ಅಪರೂಪ ವ್ಯಕ್ತಿಗಳಲ್ಲಿ ರಾಮಚಂದ್ರಪ್ಪ ಒಬ್ಬರಾಗಿದ್ದಾರೆ. ಕನ್ನಡ ಮೇಷ್ಟ್ರಾಗಿ ತುಮಕೂರು ಮತ್ತು ಚಿತ್ರದುರ್ಗ ಪರಿಸರದಲ್ಲಿ ಶಿಷ್ಯವೃಂದವನ್ನು ಗಳಿಸಿರುವುದು ಸಮಾಜಕ್ಕೆ ಮಾದರಿ ಎಂದು ಹೇಳಿದರು.

ಸಾಹಿತಿ ಕುಂ. ವೀರಭದ್ರಪ್ಪ ಮಾತನಾಡಿ, ಗಡಿಭಾಗದಲ್ಲಿ ಕನ್ನಡ ಭಾಷೆ ಅಪಾಯದ ಸ್ಥಿತಿಯಲ್ಲಿದೆ. ಅಡುಗೆ ಮನೆಯಲ್ಲಿ ಕನ್ನಡ ಅಂಗಳದಲ್ಲಿ ತೆಲುಗು ಭಾಷೆ ಇದೆ. ವೈವಾಹಿಕ ಸಂಬಂಧಗಳು ಬೆಳೆದಂತೆ ಬದುಕಿನ ಭಾಷೆಯ ಮೇಲೆ ತೆಲುಗಿನ ಪ್ರಭಾವ ಬೀರುತ್ತಿದೆ. ಗಡಿಭಾಗದಲ್ಲಿ ಕನ್ನಡ ಪರ ಸಂಘಟನೆ ಮತ್ತು ಸಾಹಿತ್ಯ ಸೇವಾ ಕಾರ್ಯಗಳು ಬಲಗೊಳ್ಳಬೇಕು ಎಂದು ತಿಳಿಸಿದರು.

ಕನ್ನಡ ಭಾಷಾ ಮಾಧ್ಯಮದಲ್ಲಿ ಕಲಿತ ಮಕ್ಕಳು ಹೆತ್ತವರಿಗೆ ನೆರವಾದರೆ, ಆಂಗ್ಲ ಭಾಷೆಯಲ್ಲಿ ಕಲಿತವರು ವೃದ್ಧಾಶ್ರಮಕ್ಕೆ ಕಳುಹಿಸುತ್ತಿದ್ದಾರೆ ಎಂದರು. ರಾಜ್ಯದಲ್ಲಿ 700 ಇದ್ದ ವೃದ್ಧಾಶ್ರಮಗಳು 32,000 ದಾಟಿವೆ ಎಂದು ತಿಳಿಸಿದರು.

ಗಡಿನಾಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಜನ್ ಕುಮಾರ್, ಕಥೆಗಾರ ತಿಪ್ಪಣ್ಣ ಮರಿಕುಂಟೆ, ಡಾಕ್ಟರ್ ಸಿ. ಶಿವಣ್ಣ, ಡಾಕ್ಟರ್ ನಾಗಭೂಷಣ ಬಗ್ಗನಡು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾಬುರೆಡ್ಡಿ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಇ.ಎನ್ ವೆಂಕಟೇಶ್, ಆರ್. ನೇತಾಜಿ ಪ್ರಸನ್ನ, ಕವಿ ಕೊರ್ಲಕುಂಟೆ ತಿಪ್ಪೇಸ್ವಾಮಿ, ಶಿವಗಂಗಮ್ಮ, ಚಿತ್ತಯ್ಯ, ಪಗಡಲಬಂಡೆ ನಾಗೇಂದ್ರಪ್ಪ, ಟಿ. ಆರ್. ತಿಪ್ಪೇಸ್ವಾಮಿ, ಪತ್ರಕರ್ತ ಎಂ.ಎನ್ ಅಹೋಬಳಪತಿ, ಪಿವಿ ರುದ್ರೇಶ್, ಹರೀಶ್ ಬಾಬು, ರಾಜಶೇಖರ, ಎನ್. ನಿಂಗಣ್ಣ, ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

PREV

Recommended Stories

ರೇಣುಕಾಂಬೆ ದರ್ಶನಕ್ಕೆ ಬಂದಿದ್ದಾಗ ಮಗುವಿಗೆ ಜನ್ಮ ನೀಡಿದ ಅವಿವಾಹಿತೆ
ರಾಜ್ಯದಲ್ಲಿ ಆ.15ರ ಬಳಿಕ ಭಾರೀ ಮಳೆ