ಮಹಿಳೆಯರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಇಲಾಖೆಯವರು ಅಗತ್ಯ ನೆರವಿನೊಂದಿಗೆ ಶ್ರಮಿಸುವುದು ಅಗತ್ಯವಿದೆ ಎಂದು ಪಿಡಿಒ ಮಂಜುನಾಥ ಕಂಬಳಿ ಹೇಳಿದರು.
ರಾಣಿಬೆನ್ನೂರು: ಮಹಿಳೆಯರು ಮತ್ತು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ವಿವಿಧ ಇಲಾಖೆಯವರು ಅಗತ್ಯ ನೆರವಿನೊಂದಿಗೆ ಶ್ರಮಿಸುವುದು ಅಗತ್ಯವಿದೆ ಎಂದು ಪಿಡಿಒ ಮಂಜುನಾಥ ಕಂಬಳಿ ಹೇಳಿದರು.
ತಾಲೂಕಿನ ಮೆಡ್ಲೇರಿ ಗ್ರಾಮದ ಮಾರುತಿ ಸಭಾಭವನದಲ್ಲಿ ಗ್ರಾಪಂ ವತಿಯಿಂದ ಏರ್ಪಡಿಸಿದ್ದ ಮಹಿಳೆಯರ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಮಾತನಾಡಿದರು.ವಿವಿಧ ಇಲಾಖೆಗಳ ಸೌಲಭ್ಯಗಳನ್ನು ಕೊಡುವ ಮೂಲಕ ಮಹಿಳೆಯರ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಂತೆ ಮಾಡುವ ಕೆಲಸ ಪ್ರತಿಯೊಬ್ಬರ ಮೇಲಿದೆ ಎಂದರು.ಜಿಲ್ಲಾ ಮಕ್ಕಳ ಹಕ್ಕುಗಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಗೀತಾ ಪಾಟೀಲ ಮಾತನಾಡಿ, ಮಕ್ಕಳ ಮನಸ್ಸು ಮಲ್ಲಿಗೆ ಇದ್ದಂತೆ. ಅದು ಬಾಡದಂತೆ ಬಾಲ್ಯಾವಸ್ಥೆಯಲ್ಲಿ ಕಡ್ಡಾಯವಾಗಿ ಶಿಕ್ಷಣ ನೀಡುವ ಜವಾಬ್ದಾರಿ ಸಮುದಾಯದ್ದಾಗಿದೆ. ಸ್ಥಳೀಯ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಕ್ಕಳ ಕಾವಲು ಸಮಿತಿ ಶಾಲಾ ಮಟ್ಟದಲ್ಲಿ ಮಕ್ಕಳ ಕ್ಲಬ್‌ಗಳನ್ನು ರಚಿಸುವ ಮೂಲಕ ಮಕ್ಕಳ ಮನಸ್ಸು ಅರಳುವ ಹಾಗೆ ಮಾಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ ಎಂದರು.
ಸಿಡಿಪಿಒ ಪಾರ್ವತಿ ಹುಂಡೇಕಾರ ಮಾತನಾಡಿ, ಬಾಲ ಗರ್ಭಿಣಿ, ಬಾಣಂತಿಯರ ಪ್ರಕರಣಗಳು ತಾಲೂಕಿನಲ್ಲಿ ಕಂಡುಬರುತ್ತಿರುವುದು ವಿಷಾದನೀಯ. ಹೆಣ್ಣು ಮಕ್ಕಳಿಗೆ ಸರ್ಕಾರ ನಿಗದಿ ಮಾಡಿದ ವಯಸ್ಸಿನಲ್ಲಿ ಮದುವೆ ಮಾಡುವುದು ಅಗತ್ಯವಿದೆ ಎಂದರು.ಬಾಲ್ಯ ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ನ್ಯಾಯವಾದಿ ಕವಿತಾ ಮಾತನಾಡಿದರು. ಪೋಕ್ಸೋ ಕಾಯ್ದೆ ಕುರಿತು ನ್ಯಾಯವಾದಿ ಸುಮಾ ಸಾವಕಾರ ಮಹಿಳೆಯರಿಗೆ ಸಮಗ್ರ ಮಾಹಿತಿ ನೀಡಿದರು. ಕಾರ್ಮಿಕ ಕಾಯಿದೆ, ಮಕ್ಕಳ ಹಕ್ಕುಗಳ ಕುರಿತು ಜಯಶ್ರೀ ಸಮಗ್ರ ಮಾಹಿತಿ ನೀಡಿದರು. ಗ್ರಾಪಂ ಅಧ್ಯಕ್ಷೆ ಬಸವಣ್ಣವ್ವ ಮಾಳಗಿ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಸಭೆಯ ಅಂಗವಾಗಿ ಗ್ರಾಮ ಪಂಚಾಯಿತಿ ವತಿಯಿಂದ ರಂಗೋಲಿ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ಮಾಡಲಾಯಿತು.
ಗ್ರಾಪಂ ಉಪಾಧ್ಯಕ್ಷ ರೂಪ್ಲೆಪ್ಪ ಲಮಾಣಿ, ಸದಸ್ಯರಾದ ಎಂ. ಬಡಪ್ಪನವರ, ಸುರೇಶ ಬಿಲ್ಲಾಳ, ನಾಗಪ್ಪ ಆರ್., ದಿಳ್ಳಪ್ಪ ಅನ್ವರಿ, ಜ್ಯೋತಿ ಕಣವಿ, ಶೋಭಾ ಹುಲ್ಲತ್ತಿ, ಮಂಜುಳಾ ಚಲವಾದಿ, ಗೀತಾ ಚಕ್ರಸಾಲಿ, ನಾಗವ್ವ ಚೌಡಯ್ಯದಾನಪುರ, ಮಂಜವ್ವ ಹೊನ್ನತ್ತಿ ಹಾಗೂ ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು, ಶಾಲಾ ಪ್ರಧಾನ ಗುರುಗಳು, ಮಕ್ಕಳ ಕಲ್ಯಾಣ ಅಭಿವೃದ್ಧಿ ಸಮಿತಿ ಸಂಚಾಲಕರು, ಆಶಾ ಕಾರ್ಯಕರ್ತೆಯರು, ಮಹಿಳಾ ಸಂಘದ ಸರ್ವ ಸದಸ್ಯರು, ಶಾಲಾ ಮಕ್ಕಳು ಉಪಸ್ಥಿತರಿದ್ದರು