ಫೀಸ್‌, ಡೊನೇಷನ್‌ ಹೆಸರಿನಲ್ಲಿ ಪೋಷಕರ ಸುಲಿಗೆ

KannadaprabhaNewsNetwork |  
Published : Apr 29, 2026, 01:15 AM IST
ಚಿತ್ರದುರ್ಗ ಮೂರನೇ ಪುಟದ ಲೀಡ್  | Kannada Prabha

ಸಾರಾಂಶ

ಚಿಕ್ಕಮಗಳೂರುಇಂಗ್ಲಿಷ್‌ ಭಾಷೆ ಮೇಲಿನ ವ್ಯಾಮೋಹ ಹಾಗೂ ಮಕ್ಕಳನ್ನು ವೃತ್ತಿಪರ ಶಿಕ್ಷಣಕ್ಕೆ ಕಳುಹಿಸಬೇಕೆಂಬ ಪಾಲಕರ ಒತ್ತಾಸೆಯನ್ನೇ ಬಂಡಾವಳ ಮಾಡಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಡೋನೇಷನ್‌ ಮತ್ತು ಫೀಸ್‌ ಹೆಸರಿನಲ್ಲಿ ಫೋಷಕರಿಂದ ವಸೂಲಿಗೆ ಇಳಿದಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿವೆ.

ಕ್ಕಮಗಳೂರು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ದುರುಪಯೋಗವಿಶ್ವನಾಥ ಮಲೇಬೆನ್ನೂರು

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಇಂಗ್ಲಿಷ್‌ ಭಾಷೆ ಮೇಲಿನ ವ್ಯಾಮೋಹ ಹಾಗೂ ಮಕ್ಕಳನ್ನು ವೃತ್ತಿಪರ ಶಿಕ್ಷಣಕ್ಕೆ ಕಳುಹಿಸಬೇಕೆಂಬ ಪಾಲಕರ ಒತ್ತಾಸೆಯನ್ನೇ ಬಂಡಾವಳ ಮಾಡಿಕೊಂಡಿರುವ ಚಿಕ್ಕಮಗಳೂರು ಜಿಲ್ಲೆಯ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಣ ವ್ಯವಸ್ಥೆಯನ್ನು ದುರುಪಯೋಗ ಪಡಿಸಿಕೊಂಡು ಡೋನೇಷನ್‌ ಮತ್ತು ಫೀಸ್‌ ಹೆಸರಿನಲ್ಲಿ ಫೋಷಕರಿಂದ ವಸೂಲಿಗೆ ಇಳಿದಿವೆ ಎಂಬ ಆರೋಪ ವ್ಯಾಪಕವಾಗಿ ಕೇಳಿ ಬರುತ್ತಿವೆ.ಚಿಕ್ಕಮಗಳೂರು ಜಿಲ್ಲೆಯಲ್ಲಿ ನೂರಾರು ಖಾಸಗಿ ಶಿಕ್ಷಣ ಸಂಸ್ಥೆಗಳಿದ್ದು, ಬಹುತೇಕ ಶಿಕ್ಷಣ ಸಂಸ್ಥೆಗಳು ಶುಲ್ಕದ ಮತ್ತು ವಂತಿಕೆ ಹೆಸರಿನಲ್ಲಿ ಫೋಷಕರನ್ನು ಸುಲಿಗೆ ಮಾಡುತ್ತಿವೆ. ಈ ಮೂಲಕ ಪೋಷಕರನ್ನು ಸಾಲದ ಸುಳಿಗೆ ಸಿಲುಕಿಸುತ್ತಿವೆ.

ಫೋಷಕರಿಂದ ಸಂಗ್ರಹಿಸುವ ಫೀಸ್‌ ಮತ್ತು ಡೋನೇಷನ್‌ಗೆ ಕಳ್ಳ ಲೆಕ್ಕ ತೋರಿಸುವ ಮೂಲಕ ಸರ್ಕಾರದ ನಿಯಮಾ ವಳಿಗಳನ್ನು ಸಂಪೂರ್ಣವಾಗಿ ದಾರಿ ತಪ್ಪಿಸುವ ಕೆಲಸ ಮಾಡಲಾಗುತ್ತಿದೆ. ಖಾಸಗಿ ಶಾಲೆಗಳು ಶಿಕ್ಷಣ ಒದಗಿಸುವ ಸಮಾಜಸೇವೆಯ ಪವಿತ್ರ ಕೇಂದ್ರಗಳಾಗುವ ಬದಲು, ಶೋಷಣೆ ಮೂಲಕ ಲಾಭಗಳಿಸುವ ವ್ಯಾಪಾರಿ ಕೇಂದ್ರ ಗಳಾಗುತ್ತಿರುವುದು ಸ್ಪಷ್ಟವಾಗಿ ಗೋಚರಿಸುತ್ತಿರುವ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಜಿಲ್ಲಾಡಳಿತದ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿವೆ.

ಶುಲ್ಕದ ಮಾಹಿತಿ ನೀಡದೇ ದಾಖಲಾತಿ ಪೂರ್ಣಖಾಸಗಿ ಶಿಕ್ಷಣ ಸಂಸ್ಥೆಗಳು ಪ್ರತಿ ವರ್ಷ ದಾಖಲಾತಿ ಆರಂಭಿಸುವ ಮೊದಲು ಶಿಕ್ಷಣ ಇಲಾಖೆಗೆ ಶುಲ್ಕದ ವಿವರ ಸಲ್ಲಿಕೆ ಮಾಡಿ ಆ ನಂತರ ದಾಖಲಾತಿ ಆರಂಭಿಸಬೇಕು. ಆದರೆ, ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಯಾವುದೇ ಮಾಹಿತಿ ನೀಡದೇ ದಾಖಲಾತಿ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿರುವುದು ಶಿಕ್ಷಣ ಇಲಾಖೆಯ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ.

ದಾಖಲಾತಿ ನಿಯಮ ಉಲ್ಲಂಘನೆ:

ಕರ್ನಾಟಕ ಪ್ರೌಢ ಶಿಕ್ಷಣ ಅಧಿನಿಯಮ 1983ರ ಸೆಕ್ಷನ್‌ 47 ಹಾಗೂ ಕರ್ನಾಟಕ ಶಿಕ್ಷಣ ಸಂಸ್ಥೆಗಳು (ವರ್ಗೀಕರಣ, ನಿಯಂತ್ರಣ ಮತ್ತು ಪಠ್ಯಕ್ರಮದ ನಿಗದಿಕರಣ) ನಿಯಮಗಳು, 1995ರ 14, ಉಪ ನಿಯಮ (7) ರಂತೆ ಮಕ್ಕಳ ದಾಖಲಾತಿ ಪ್ರಕ್ರಿಯೆ ಕಡ್ಡಾಯವಾಗಿ ಏಪ್ರಿಲ್‌ ನಲ್ಲಿಯೇ ಮಾಡಬೇಕು. ಅದಕ್ಕಿಂತ ಮೊದಲೇ ದಾಖಲಾತಿ ನಡೆಸಿದರೆ ಸರ್ಕಾರದ ಕಾನೂನು ಸ್ಪಷ್ಟ ಉಲ್ಲಂಘನೆಯಾಗಲಿದೆ.ಆದರೆ, ಚಿಕ್ಕಮಗಳೂರು ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಹುತೇಕ ಶಿಕ್ಷಣ ಸಂಸ್ಥೆಗಳು ಅದರಲ್ಲೂ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಮಾರ್ಚ್‌ನಲ್ಲೆ ದಾಖಲಾತಿ ಪ್ರಕ್ರಿಯೆ ಪೂರ್ಣಗೊಳಿಸಿಕೊಂಡಿವೆ.

ಇದೀಗ ಡಿಮ್ಯಾಂಡ್‌ ಸೃಷ್ಟಿ:ಶಿಕ್ಷಣ ಸಂಸ್ಥೆಗಳು ಬಹುತೇಕ ಸೀಟ್‌ ಭರ್ತಿ ಮಾಡಿಕೊಂಡಿದ್ದು, ಏಪ್ರಿಲ್‌ ಕೊನೆ ವಾರದಲ್ಲಿ ದಾಖಲಾತಿಗೆ ಬರುವ ವಿದ್ಯಾರ್ಥಿಗಳ ಫೋಷಕರಿಗೆ ಸೀಟ್‌ ಭರ್ತಿಯಾಗಿವೆ ಎಂದು ಹೇಳಿ, ಜತೆಗೆ ಒಂದರೆಡು ದಿನ ಬಿಟ್ಟು ಬರುವಂತೆ ಡಿಮ್ಯಾಂಡ್‌ ಸೃಷ್ಟಿ ಮಾಡಲಾ ಗುತ್ತಿದೆ.

ಇಂತಹ ಸಂದರ್ಭದಲ್ಲಿ ಸಹಜವಾಗೇ ಡೋನೆಷನ್‌ ಹೆಚ್ಚಳ ಮಾಡಲಾಗುತ್ತದೆ. ಮಗ ಅಥವಾ ಮಗಳಿಗೆ ಸೀಟು ಸಿಕ್ಕಿತೆಂಬ ಖುಷಿಯಲ್ಲಿ ಫೋಷಕರು ಖಾಸಗಿ ಶಾಲೆಯ ಬಲೆಗೆ ಸಿಲುಕಿಕೊಳ್ಳುತ್ತಿದ್ದಾರೆ.

-----ಬಾಕ್ಸ್‌--- ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಪಾರದರ್ಶಕತೆಗೆ ಜಾಗವೇ ಇಲ್ಲ

ದೊಡ್ಡ ಕಾಂಪೌಂಡ್‌, ಬಾಡಿಬಿಲ್ಡರ್‌ಗಳ ಭದ್ರತೆಯಲ್ಲಿರುವ ಪ್ರಮುಖ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳ ಆವರಣ ಪ್ರವೇಶವೇ ಫೋಷಕರಿಗೆ, ಸಾರ್ವಜನಿಕರಿಗೆ ದೊಡ್ಡ ಸಾಹಸದ ಕೆಲಸವಾಗಿದ್ದು, ಇದರ ಮಧ್ಯೆ ಇರುವ ಶಾಲೆಯಲ್ಲಿ ಪಾರದರ್ಶಕತೆಗೆ ಜಾಗವೇ ಇಲ್ಲ ಎಂಬಂತಾಗಿದೆ. ಇಲ್ಲಿ ಗಟ್ಟಿಯಾಗಿ ಮಾತಾಡುವುದು ಸಹ ಒಂದು ರೀತಿ ಅಪರಾಧ ಎಂಬಂತಹ ವಾತಾವರಣ ಸೃಷ್ಟಿಸಿಕೊಂಡಿವೆ.

ಕರ್ನಾಟಕ ಶಿಕ್ಷಣ ಸಂಸ್ಥೆಗಳ ಅಧಿನಿಯಮ 1995ರ ನಿಯಮ 14ರ ಪ್ರಕಾರ ದಾಖಲಾತಿ ಕಾರ್ಯ ವಿಧಾನವನ್ನು ಮುಕ್ತ ಮತ್ತು ಪಾರದರ್ಶಕವಾಗಿ ನಡೆಬೇಕು. ಆದರೆ, ಎಲ್ಲವನ್ನೂ ಗುಪ್ತವಾಗಿ ನಡೆಸಲಾಗುತ್ತಿದೆ. ಖಾಸಗಿ ಶಾಲೆಗಳ ಫಲಕದಲ್ಲಿ ದಾಖಲಾತಿ ಪ್ರಕ್ರಿಯೆ, ವಿದ್ಯಾರ್ಥಿಗಳ ಪ್ರವೇಶಾತಿಗೆ ವಿಧಿಸಲಾದ ಮಾನದಂಡಗಳು ಎಲ್ಲಿಯೂ ಪ್ರದರ್ಶನ ಮಾಡಿಲ್ಲ. ದಾಖಲಾತಿ ವೇಳ ಪಟ್ಟಿ ಅನುಸರಿಸುತ್ತಿಲ್ಲ. ----ಬಾಕ್ಸ್‌----ಸರ್ಕಾರಿ ನೌಕರರಾದ ಫೋಷಕರಿಗೆ ಹೆಚ್ಚು ತೊಂದರೆ

ಖಾಸಗಿ ಶಿಕ್ಷಣ ಸಂಸ್ಥೆಗಳು ದಾಖಲಾತಿ ವೇಳಪಟ್ಟಿ ಅನುಸರಿಸದಿರುವುದು, ಮುಖ್ಯವಾಗಿ ಸರ್ಕಾರಿ ನೌಕರರಾಗಿರುವ ಫೋಷಕ ರಿಗೆ ತೊಂದರೆ ಆಗುತ್ತಿದೆ. ಸಾಮಾನ್ಯವಾಗಿ ಏಪ್ರಿಲ್‌ ಮತ್ತು ಮೇ ತಿಂಗಳಿನಲ್ಲಿ ಸರ್ಕಾರಿ ಸಾಮಾನ್ಯ ವರ್ಗಾವಣೆಗೆ ಅವಕಾಶ ನೀಡುತ್ತದೆ. ಈ ರೀತಿ ವರ್ಗಾವಣೆ ಆದವರಿಗೆ ಮಕ್ಕಳಿಗೆ ಸೀಟ್‌ ಪಡೆಯುವುದು ಕಷ್ಟವಾಗುತ್ತಿದೆ.

ಈ ಕಾರಣಕ್ಕೆ ಸರ್ಕಾರ ಏಕರೂಪ ನಿಯಮ ರೂಪಿಸಿ ದಾಖಲಾತಿ ಪ್ರಕ್ರಿಯೆ ನಡೆಸುವಂತೆ ಸೂಚಿಸಿದರೂ, ಖಾಸಗಿ ಶಿಕ್ಷಣ ಸಂಸ್ಥೆಗಳು ಸರ್ಕಾರದ ಆದೇಶಕ್ಕೆ ಕ್ಯಾರೆ ಎನ್ನದೇ ನಡೆದುಕೊಳ್ಳುತ್ತಿವೆ.

---ಕೋಟ್‌---ಖಾಸಗಿ ಶಿಕ್ಷಣ ಸಂಸ್ಥೆಗಳು ಕಡ್ಡಾಯವಾಗಿ ಪ್ರತಿ ವರ್ಷ ದಾಖಲಾತಿ ಆರಂಭಿಸುವ ಮುನ್ನಾ ಶುಲ್ಕದ ಶಿಕ್ಷಣ ಇಲಾಖೆ ಮಾಹಿತಿ ನೀಡಬೇಕು, ಜತೆಗೆ, ಶಾಲಾ ಫಲಕದಲ್ಲಿ ಫೋಷಕರಿಗೆ ಕಾಣುವಂತೆ ಪ್ರದರ್ಶನ ಮಾಡಬೇಕು. ಚಿಕ್ಕಮಗಳೂರು ಜಿಲ್ಲೆಯ ಯಾವುದೇ ಶಾಲೆಗಳು ಈ ವರೆಗೆ ಶುಲ್ಕ ಮಾಹಿತಿ ನೀಡಿಲ್ಲ, ನೀಡುವಂತೆ ಸೂಚಿಸಲಾಗುತ್ತದೆ.

ತಿಮ್ಮರಾಜು, ಡಿಡಿಪಿಐ, ಚಿಕ್ಕಮಗಳೂರು

--

ಫೋಟೊ: ಸಾಂಧರ್ಭಿಕ ಚಿತ್ರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟ್ರಾಫಿಕ್‌ ಸಮಸ್ಯೆ ನಿಯಂತ್ರಣ ಕ್ರಮ ವಹಿಸಿ
ಇತ್ತೀಚಿನ ಖಾಯಿಲೆಗಳಿಗೆ ಕ್ರೀಡೆಗಳು ರಾಮಬಾಣ: ಅಶೋಕ ಮೆಹ್ತಾ