ತಂತ್ರಜ್ಞಾನದ ಜೊತೆಗೆ ಸಂಸ್ಕೃತಿ ತಿಳಿಸುವ ಜವಾಬ್ದಾರಿ ಪೋಷಕರದ್ದು

KannadaprabhaNewsNetwork |  
Published : Mar 23, 2026, 01:45 AM IST
22ಎಚ್ಎಸ್ಎನ್7 : ಕಾರ್ಯಕ್ರಮದಲ್ಲಿ ಕಳೆದ ೪೦ ವರ್ಷಗಳಿಂದ ಭರತನಾಟ್ಯ ಶಿಕ್ಷಕಿಯಾಗಿ ತರಬೇತಿ ಕೊಡುತ್ತಿರುವ ಅಂಬಳೆ ರಾಜೇಶ್ವರಿ, ಕುಸುಮ ಭೂಪಾಲ್ ಮತ್ತು ಸುಮಿತ್ರ ಜಯರಾಂ ಇವರನ್ನು ಬಿಜೆಪಿ ಮಹಿಳಾ ಮೋರ್ಚಾದಿಂದ ಸನ್ಮಾನಿಸಿ ಗೌರವಿಸಲಾಯಿತು.  | Kannada Prabha

ಸಾರಾಂಶ

ಬಿಜೆಪಿ ಮಹಿಳಾ ಮೋರ್ಚಾ ಘಟಕ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೊಡ್ಡವರು ಹೇಳುವ ಮಾತನ್ನು ಮಕ್ಕಳು ಕೇಳುವ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಟೆಕ್ನಾಲಜಿ ಬಗ್ಗೆ ಹೆಚ್ಚಿನ ಅರಿವು ಇದ್ದರೂ, ನಮ್ಮ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳಲ್ಲಿ ಹಿರಿಯರ ಅನುಭವವೇ ಮುಖ್ಯ ಎಂದು ತಿಳಿಸಿದರು. ನಮ್ಮ ತಂದೆ-ತಾಯಿ ಕಲಿತ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕನಿಷ್ಠ ಮಟ್ಟಿಗಾದರೂ ಮಕ್ಕಳಿಗೆ ತಿಳಿಸುವ ಕೆಲಸ ಪೋಷಕರು ಮಾಡಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ, ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲೇ ಸಂಸ್ಕಾರ ಬೀಜ ಬಿತ್ತುವುದು ಅತ್ಯಂತ ಅಗತ್ಯ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಪ್ರಸ್ತುತ ತಂತ್ರಜ್ಞಾನ ಮುಂದುವರೆದರೂ ಮಕ್ಕಳಿಗೆ ಸಂಸ್ಕೃತಿ ತಿಳಿಸಿಕೊಡುವ ಮುಖ್ಯ ಜವಬ್ಧಾರಿ ಪೋಷಕರ ಮೇಲಿದ್ದು, ಚಿಕ್ಕ ವಯಸ್ಸಿನಿಂದಲೇ ಸಂಸ್ಕಾರ ಬೆಳೆಸಿಕೊಟ್ಟರೆ ಮುಂದೆ ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡಬಹುದು ಎಂದು ಆಲೂರು-ಅರಸೀಕೆರೆ ಕ್ಷೇತ್ರದ ಶಾಸಕ ಸಿಮೆಂಟ್ ಮಂಜು ಅವರ ಪತ್ನಿ ಪ್ರತಿಭಾ ಮಂಜುನಾಥ್ ಅವರು ಮಕ್ಕಳ ಬೆಳವಣಿಗೆಯಲ್ಲಿ ಸಂಸ್ಕಾರ ಮತ್ತು ಮೌಲ್ಯಗಳ ಮಹತ್ವವನ್ನು ಒತ್ತಿ ಹೇಳಿದರು.

ನಗರದ ಜಿಲ್ಲಾ ಬಿಜೆಪಿ ಕಛೇರಿಯಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕ ಪಕ್ಷದಿಂದ ಹಮ್ಮಿಕೊಳ್ಳಲಾಗಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದೊಡ್ಡವರು ಹೇಳುವ ಮಾತನ್ನು ಮಕ್ಕಳು ಕೇಳುವ ಗುಣ ಬೆಳೆಸಿಕೊಳ್ಳಬೇಕು. ಇಂದಿನ ಮಕ್ಕಳಿಗೆ ಟೆಕ್ನಾಲಜಿ ಬಗ್ಗೆ ಹೆಚ್ಚಿನ ಅರಿವು ಇದ್ದರೂ, ನಮ್ಮ ಸಂಸ್ಕೃತಿ ಮತ್ತು ಜೀವನ ಮೌಲ್ಯಗಳಲ್ಲಿ ಹಿರಿಯರ ಅನುಭವವೇ ಮುಖ್ಯ ಎಂದು ತಿಳಿಸಿದರು. ನಮ್ಮ ತಂದೆ-ತಾಯಿ ಕಲಿತ ಸಂಸ್ಕೃತಿ, ಆಚಾರ-ವಿಚಾರಗಳನ್ನು ಕನಿಷ್ಠ ಮಟ್ಟಿಗಾದರೂ ಮಕ್ಕಳಿಗೆ ತಿಳಿಸುವ ಕೆಲಸ ಪೋಷಕರು ಮಾಡಬೇಕು. ಮುಂದಿನ ಭವಿಷ್ಯ ಉತ್ತಮವಾಗಬೇಕಾದರೆ, ಸಮಾಜದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣವಾಗಬೇಕಾದರೆ ಮಕ್ಕಳಲ್ಲೇ ಸಂಸ್ಕಾರ ಬೀಜ ಬಿತ್ತುವುದು ಅತ್ಯಂತ ಅಗತ್ಯ ಎಂದರು.

ಇಂದಿನ ಕಾಲದಲ್ಲಿ ಹೆಚ್ಚುತ್ತಿರುವ ಸೌಲಭ್ಯಗಳು ಮಕ್ಕಳಲ್ಲಿ ಸೋಮಾರಿತನವನ್ನು ಹೆಚ್ಚಿಸುತ್ತಿವೆ ಎಂಬುದನ್ನು ಅವರು ಆತಂಕ ವ್ಯಕ್ತಪಡಿಸಿದರು. “ಮಕ್ಕಳಿಗೆ ಅಗತ್ಯಕ್ಕಿಂತ ಹೆಚ್ಚು ಸೌಕರ್ಯ ನೀಡಿದಾಗ ಅವರಲ್ಲಿ ಜವಾಬ್ದಾರಿ ಕಡಿಮೆಯಾಗುತ್ತದೆ. ಆದ್ದರಿಂದ, ಸಣ್ಣ ಕೆಲಸಗಳನ್ನಾದರೂ ಕಲಿಸುವುದು ಮುಖ್ಯ,” ಎಂದು ಕಿವಿಮಾತು ಹೇಳಿದರು. ಗ್ರಾಮೀಣ ಪ್ರದೇಶದ ಮಕ್ಕಳ ಉದಾಹರಣೆ ನೀಡಿದ ಅವರು, “ಗ್ರಾಮಗಳಲ್ಲಿ ಮಕ್ಕಳು ಕೆಲಸದ ಜೊತೆಗೆ ಶಿಕ್ಷಣವನ್ನು ಸಮತೋಲನವಾಗಿ ನಡೆಸಿಕೊಂಡು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುತ್ತಿದ್ದಾರೆ. ಆದರೆ ನಗರಗಳಲ್ಲಿ ಅನೇಕ ಮಕ್ಕಳು ಓದಿನ ಒತ್ತಡಕ್ಕೆ ಒಳಗಾಗಿ ಜೀವನ ಕೌಶಲ್ಯಗಳಿಂದ ದೂರವಾಗುತ್ತಿದ್ದಾರೆ,” ಎಂದು ಅಭಿಪ್ರಾಯಪಟ್ಟರು.

ವೈದ್ಯರು, ಎಂಜಿನಿಯರ್‌, ಐಎಎಸ್ ಆಗಬೇಕು ಎಂಬ ಆಶಯದಲ್ಲಿ ಮಕ್ಕಳಿಗೆ ಕೇವಲ ಓದಿನ ಮೇಲೆಯೇ ಒತ್ತಡ ಹಾಕುವುದು ಸರಿಯಲ್ಲ. ಮನೆ ಕೆಲಸಗಳೂ ಸೇರಿದಂತೆ ಜೀವನದ ಮೂಲ ಕೌಶಲ್ಯಗಳನ್ನು ಕಲಿಸುವುದು ಅಗತ್ಯ ಎಂದರು. “ಆಡುವ ಸಮಯದಲ್ಲಿ ಮಕ್ಕಳು ಆಡಬೇಕು, ಓದುವ ಸಮಯದಲ್ಲಿ ಓದಲು ಅವಕಾಶ ಕೊಡಬೇಕು. ಈ ಸಮತೋಲನ ಇದ್ದಾಗ ಮಾತ್ರ ಮಕ್ಕಳ ಸಮಗ್ರ ವ್ಯಕ್ತಿತ್ವ ಅಭಿವೃದ್ಧಿಯಾಗುತ್ತದೆ” ಎಂದು ಸಲಹೆ ನೀಡಿದರು. ಒಟ್ಟಾರೆ, ಮಕ್ಕಳಲ್ಲಿ ಸಂಸ್ಕಾರ, ಜವಾಬ್ದಾರಿ ಹಾಗೂ ಜೀವನ ಕೌಶಲ್ಯಗಳನ್ನು ಬೆಳೆಸುವಲ್ಲಿ ಪೋಷಕರ ಪಾತ್ರ ಅತ್ಯಂತ ಮುಖ್ಯವಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಳೆದ ೪೦ ವರ್ಷಗಳಿಂದ ಭರತನಾಟ್ಯ ಶಿಕ್ಷಕಿಯಾಗಿ ತರಬೇತಿ ಕೊಡುತ್ತಿರುವ ಅಂಬಳೆ ರಾಜೇಶ್ವರಿ, ಕುಸುಮ ಭೂಪಾಲ್ ಮತ್ತು ಸುಮಿತ್ರ ಜಯರಾಂ ಇವರನ್ನು ಬಿಜೆಪಿ ಮಹಿಳಾ ಮೋರ್ಚಾದಿಂದ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ಘಟಕದ ಅಧ್ಯಕ್ಷೆ ನೇತ್ರಾವತಿ ಮಂಜುನಾಥ್, ಮುಖಂಡರಾದ ಪ್ರಧಾನ ಕಾರ್ಯದರ್ಶಿ ಇಂದಿರಾ ನಾಗರಾಜು, ಅಂಬಿಕಾ, ಚಿಕ್ಕಮಗಳೂರು ಕನ್ನಡ ಸೇನೆ ಜಿಲ್ಲಾಧ್ಯಕ್ಷೆ ಚೈತ್ರಗೌಡ, ವಿಜಯಲಕ್ಷ್ಮಿ ಅಂಜನಪ್ಪ, ಶೇಶಮ್ಮ, ನಾಗರತ್ನ, ರಮೇಶ್, ರಶ್ಮಿ, ಅನೀತಾ ಇತರರು ಉಪಸ್ಥಿತರಿದ್ದರು. ಮಾಧ್ಯಮ ವಕ್ತಾರರಾದ ವೇಧವತಿ ಕಾರ್ಯಕ್ರಮ ನಿರೂಪಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಜೆಪಿಯಲ್ಲಿ ಸಕ್ರಿಯ ಪಾಲ್ಗೊಳ್ಳುವೆ ಎಂದ ಅರ್ಪಿತಾ ಪಟೇಲ್‌
ಪಡಗೂರು ಅಡವಿ ಮಠದಲ್ಲಿ ವಚನ ಕಲ್ಯಾಣ