ಮೊರಾರ್ಜಿ ಶಾಲೆಗೆ ಕುಡಿವ ನೀರಿನ ವ್ಯವಸ್ಥೆ ಕಲ್ಪಿಸಿದ ಪೋಷಕರು

KannadaprabhaNewsNetwork |  
Published : Aug 02, 2024, 12:46 AM IST
ಚಿತ್ರ 1 | Kannada Prabha

ಸಾರಾಂಶ

Parents arranged drinking water for Morarji School

ಕನ್ನಡಪ್ರಭ ವಾರ್ತೆ ಹಿರಿಯೂರು:

ಶಾಲಾ ಅಭಿವೃದ್ಧಿಗೆ ಸಮುದಾಯ ಮತ್ತು ಪೋಷಕರ ಸಹಕಾರ ಅಗತ್ಯ ಎಂದು ಪ್ರಾoಶುಪಾಲ ಗುರುಸ್ವಾಮಿ ಹೇಳಿದರು.

ತಾಲೂಕಿನ ದೇವರಕೊಟ್ಟದ ಹಿಂದುಳಿದ ವರ್ಗಗಳ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಶುದ್ಧ ಒಂದೂವರೆ ಲಕ್ಷದ ಕುಡಿವ ನೀರಿನ ಘಟಕವನ್ನು ಉದ್ಘಾಟಿಸಿ ಮಾತನಾಡಿದರು.

ಈ ಹಿಂದಿನ ಪೋಷಕರ ಸಭೆಯಲ್ಲಿ ಶಾಲೆಗೆ ಕುಡಿವ ನೀರನ್ನು ಹೊರಗಡೆಯಿಂದ ದುಡ್ಡು ಕೊಟ್ಟು ತರುತ್ತಿರುವ ಸಂಗತಿಯನ್ನು ಚರ್ಚೆ ಮಾಡಲಾಗಿತ್ತು. ಪೋಷಕರೆಲ್ಲ ತಮ್ಮ ಮಕ್ಕಳ ಸದೃಢ ಆರೋಗ್ಯ ಮತ್ತು ಗುಣಮಟ್ಟದ ಶಿಕ್ಷಣದ ದೃಷ್ಟಿಯಿಂದ ಶುದ್ಧ ಕುಡಿವ ನೀರಿನ ಘಟಕವನ್ನು ಎಲ್ಲರೂ ಸೇರಿ ನಿರ್ಮಿಸೋಣ ಎಂದು ತೀರ್ಮಾನಿಸಿ ಅದರಂತೆ ಈ ದಿನ ಕೆಲವು ಪೋಷಕರು ಆ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ. ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ಮಕ್ಕಳ ಪೋಷಕರು ಈ ರೀತಿಯ ಒಳ್ಳೆಯ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.

ಪೋಷಕರಾದ ಕೋಡಿಹಳ್ಳಿ ಮಸಿಯಪ್ಪ, ಕುಮಾರಣ್ಣ, ಶಿವಮೂರ್ತಿ, ಬೀರೇಶ್, ರಮೇಶ್ ರಂಗೇನಹಳ್ಳಿ, ಶಿಕ್ಷಕರಾದ ಹೇಮಣ್ಣ, ಸಿದ್ದೇಶ್, ಪರಶುರಾಮ ತಳವಾರ, ನಿಜಾಮುದ್ದೀನ್, ತಿಪ್ಪೇಸ್ವಾಮಿ, ಸಚಿನ್, ಪ್ರಭು, ಉಷಾ, ದೀಪ ಮುಂತಾದವರು ಹಾಜರಿದ್ದರು.

-----

ಫೋಟೊ... ತಾಲೂಕಿನ ದೇವರಕೊಟ್ಟದ ಮೊರಾರ್ಜಿ ಶಾಲೆಗೆ ಪೋಷಕರೇ ಸ್ವತಃ ಶುದ್ಧ ಕುಡಿವ ನೀರಿನ ಘಟಕದ ಫಿಲ್ಟರ್ ಒದಗಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಆಪ್ತ ಶಾಸಕರ ಜತೆ ಸದನದ ಕೊನೆ ಸಾಲಲ್ಲಿ ಡಿಕೆಶಿ ಚರ್ಚೆ
ಅಹಂಕಾರ, ದರ್ಪ ತೋರದೇ ಎಲ್ಲ ಜನರನ್ನೂ ಗೌರವಿಸಿದ ಶಾಮನೂರು: ಅಣಬೇರು ರಾಜಣ್ಣ