ಶಿಕ್ಷಣ ಸಂಸ್ಥೆಯ ಬೆಳವಣಿಗೆಗೆ ಪೋಷಕರು ಸಹಕಾರ ಅಗತ್ಯ: ಎಂ.ಎನ್. ಪಾಟೀಲ

KannadaprabhaNewsNetwork | Published : Mar 18, 2025 12:33 AM

ಸಾರಾಂಶ

ದೊಡ್ಡ ಕನಸು ಸೃಷ್ಟಿಸಲು ಮಕ್ಕಳಿಗೆ ದೊಡ್ಡ ವೇದಿಕೆ ಸೃಷ್ಟಿಸಿದ್ದಾರೆ. 3 ವರ್ಷಗಳ ಹಿಂದೆ ಆರಂಭಗೊಂಡ ಮಂದಾರ ಶಾಲೆ ಇಂದು ಉತ್ತಮ ಸಂಸ್ಥೆಯಾಗಿ ಬೆಳೆಯಲು ಪೋಷಕರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ ಮುಖ್ಯ ಕಾರಣ ಎಂದು ಬೀಳಗಿಯ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ದೊಡ್ಡ ಕನಸು ಸೃಷ್ಟಿಸಲು ಮಕ್ಕಳಿಗೆ ದೊಡ್ಡ ವೇದಿಕೆ ಸೃಷ್ಟಿಸಿದ್ದಾರೆ. 3 ವರ್ಷಗಳ ಹಿಂದೆ ಆರಂಭಗೊಂಡ ಮಂದಾರ ಶಾಲೆ ಇಂದು ಉತ್ತಮ ಸಂಸ್ಥೆಯಾಗಿ ಬೆಳೆಯಲು ಪೋಷಕರು ಸಂಸ್ಥೆಯ ಮೇಲಿಟ್ಟಿರುವ ನಂಬಿಕೆ ಮುಖ್ಯ ಕಾರಣ. ಯಾವುದೇ ಒಂದು ಸಂಸ್ಥೆ ಉತ್ತಮವಾಗಿ ನಡೆಯಬೇಕಾದರೆ ಪೋಷಕರ ಸಹಕಾರ ಬಹಳ ಮುಖ್ಯ ಎಂದು ಬೀಳಗಿಯ ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಎಂ.ಎನ್. ಪಾಟೀಲ ಹೇಳಿದರು.

ಕುಂದರಗಿ ಜೆಮ್ ಶುಗರ್ಸ ನಿರ್ದೇಶಕ ರಾಮನಗೌಡ ಜಕ್ಕನಗೌಡ್ರ ಮಾತನಾಡಿ, ಮೂಲ ಶಿಕ್ಷಣ ಉತ್ತಮವಾಗಿ ಕೊಡಬೇಕೆಂಬ ಉದ್ದೇಶದಿಂದ ಮಂದಾರ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಕೆ.ಎಸ್ ಸೋಮನಕಟ್ಟಿ ಅವರ ನೇತೃತ್ವದಲ್ಲಿ ಸಂಸ್ಥೆ ಅತ್ಯದ್ಭುತವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಮುಂದಾರ ಪಬ್ಲಿಕ್ ಶಾಲೆಯ ಅಧ್ಯಕ್ಷ ಕೆಎಸ್ ಸೋಮನಕಟ್ಟಿ ಸ್ವಾಗತಿಸಿ, ಪ್ರಸ್ತಾವಿಕ ನುಡಿ ಹೇಳಿದರು. ಬೀಳಗಿ ಕಲ್ಮಠದ ಗುರುಪಾದ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಸ್ಥಳೀಯ ಕಾಳಿಕಾಕಮಠೇಶ್ವರ ದೇವಸ್ಥಾನ ಆವರಣದಲ್ಲಿ ಸೋಮವಾರ ನಡೆದ ನೇಕಾರ ಕಾಲೋನಿಯಲ್ಲಿರುವ ಮಂದಾರ ಶಾಲೆಯ 3ನೇ ವಾರ್ಷಿಕೋತ್ಸವ ಮಂದಾರ ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿದರು.

ಪಟ್ಟಣ ಪಂಚಾಯತಿ ಅಧ್ಯಕ್ಷ ಮುತ್ತು ಬೊರ್ಜಿ, ಸದಸ್ಯ ರಾಜು ಬೊರ್ಜಿ, ಬೀಳಗಿ ಪಟ್ಟಣ ಸಹಕಾರಿ ಬ್ಯಾಂಕ್ ನಿರ್ದೇಶಕ ಗಂಗಣ್ಣ ಕೆರೂರ, ವ್ಯವಸ್ಥಾಪಕ ಶಾಹಿರ್ ಬೀಳಗಿ, ಮುಖ್ಯಶಿಕ್ಷಕಿ ಸುಮಾ ಸೋಮನಕಟ್ಟಿ ಸಂಸ್ಥೆಯ ಉಪಾಧ್ಯಕ್ಷ ಶ್ರೀಶೈಲ ಸೋಮನಕಟ್ಟಿ, ನಿರ್ದೇಶಕರಾದ ಅಕ್ಷಯ ನಾಯ್ಕರ, ಮಾಹಾಂತೇಶ ಸೋಮನಕಟ್ಟಿ, ಮಲ್ಲು ಸೋಮನಕಟ್ಟಿ, ಮಂದಾರ ಸಹಕಾರಿ ಸಂಘದ ನಿರ್ದೇಶಕ ಮಂಡಳಿ ಸದಸ್ಯರು ಉಪಸ್ಥಿತರಿದ್ದರು.

ಮನರಂಜಿಸಿದ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ:

ಭಾನುವಾರ ಸಂಜೆ ಆರಂಭಗೊಂಡ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ರಾತ್ರಿ 9.30ರವರೆಗೆ ನಡೆದವು. ದೇಶಭಕ್ತಿ, ಸಾಮಾಜಿಕ ಸಂದೇಶ, ಹಳೆಯ ಹಾಗೂ ಹೊಸ ಕನ್ನಡ ಹಾಡುಗಳಿಗೆ ಶಾಲೆಯ ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು.ವಿದ್ಯಾರ್ಥಿಗಳು ಭಿನ್ನವಾದ ನೃತ್ಯ ಪ್ರಸ್ತುತಪಡಿಸಿ ನೆರೆದಿದ್ದ ನೂರಾರು ಪೋಷಕರನ್ನು ರಂಜಿಸಿದರು. ಸಿದ್ಧಗಂಗಾ ಶ್ರೀಗಳ ಕುರಿತ ಸನ್ನಿವೇಶದ ಮರುಸೃಷ್ಟಿಯಲ್ಲಿ ಮಕ್ಕಳು ಪ್ರಾಂತ್ಯ, ಗಾಯನ, ಅಭಿನಯ ಮಾಡಿ ಚಪ್ಪಾಳೆ ಗಿಟ್ಟಿಸಿ ಮೆಚ್ಚುಗೆಗೆ ಪಾತ್ರರಾದರು. ಮಾನವೀಯ ಸಂಬಂಧಗಳ ಮಹತ್ವ ಸಾರುವ ವೃದ್ಧಾಶ್ರಮ ಕಿರುನಾಟಕ ನೆರೆದಿದ್ದವರನ್ನು ಆಕರ್ಷಿಸಿತು.

Share this article