ತಂದೆ-ತಾಯಿಯನ್ನು ಗೌರವದಿಂದ ಕಾಣಬೇಕು: ಮುಪ್ಪಿನ ಬಸವಲಿಂಗ ಶ್ರೀ

KannadaprabhaNewsNetwork | Published : Feb 5, 2024 1:47 AM

ಸಾರಾಂಶ

ನನಗೆ ಎಲ್ಲ ತಿಳಿದಿದೆ ಎನ್ನುವ ಬದಲು ನಾನಿನ್ನೂ ತಿಳಿದುಕೊಳ್ಳುವುದು ಬಹಳ ಇದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಶೈಕ್ಷಣಿಕದ ಕಡೆ ಗಮನ ಕೊಡಬೇಕು ಎನ್ನುವುದು ತಿಳಿದಿರಲಿ.

ಕುಷ್ಟಗಿ: ವಿದ್ಯಾರ್ಥಿಗಳು ಕೇವಲ ಅಂಕಗಳಿಗಾಗಿ ವಿದ್ಯಾಭ್ಯಾಸ ಮಾಡದೇ ಮುಂದಿನ ಜೀವನದ ಉನ್ನತಿಗಾಗಿ ವಿದ್ಯಾಭ್ಯಾಸ ಮಾಡಬೇಕು. ತಂದೆ-ತಾಯಿ, ಗುರು-ಹಿರಿಯರನ್ನು ಗೌರವದಿಂದ ಕಾಣಬೇಕು ಎಂದು ಅನ್ನದಾನೇಶ್ವರ ಸಂಸ್ಥಾನಮಠದ ಮುಪ್ಪಿನ ಬಸವಲಿಂಗ ಮಹಾಸ್ವಾಮಿ ಹೇಳಿದರು.ಪಟ್ಟಣದ ಅನ್ನದಾನೇಶ್ವರ ಪಿಯು ಮಹಾವಿದ್ಯಾಲಯದಲ್ಲಿ ನಡೆದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯವಹಿಸಿ ಅವರು ಮಾತನಾಡಿದರು.ನನಗೆ ಎಲ್ಲ ತಿಳಿದಿದೆ ಎನ್ನುವ ಬದಲು ನಾನಿನ್ನೂ ತಿಳಿದುಕೊಳ್ಳುವುದು ಬಹಳ ಇದೆ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮವಹಿಸಿ ಶೈಕ್ಷಣಿಕದ ಕಡೆ ಗಮನ ಕೊಡಬೇಕು ಎನ್ನುವುದು ತಿಳಿದಿರಲಿ ಎಂದರು.ಮಕ್ಕಳು ಉತ್ತಮ ಸಂಸ್ಕಾರ ಹೊಂದಬೇಕು. ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡಬೇಕು. ತಂದೆ-ತಾಯಿಗಳನ್ನು ಗೌರವದಿಂದ ಕಾಣಬೇಕು. ಮಕ್ಕಳು ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಹೇಳಿದರು.ಹಿರಿಯ ಶ್ರೀಗಳ ಇಚ್ಛಾಶಕ್ತಿಯಿಂದ ಕುಷ್ಟಗಿ, ಸುತ್ತಮುತ್ತಲಿನ ಗ್ರಾಮದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಶಾಲಾ-ಕಾಲೇಜುಗಳನ್ನು ನಿರ್ಮಿಸಲಾಗಿದೆ. ಮಕ್ಕಳು ಹೆಚ್ಚಿನ ಶಿಕ್ಷಣ ಪಡೆದು ಉನ್ನತ ಮಟ್ಟ ತಲುಪಬೇಕು. ಮುಂದಿನ ದಿನಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಹೆಚ್ಚಿನ ಪ್ರಯತ್ನ ಮಾಡುತ್ತೇವೆ ಎಂದು ಹೇಳಿದರು.ಕಾರ್ಯಕ್ರಮವನ್ನು ಕಾಂಗ್ರೆಸ್ ಯುವ ಮುಖಂಡ ದೊಡ್ಡಬಸವನಗೌಡ ಪಾಟೀಲ್ ಬಯ್ಯಾಪುರ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಹಾವಿದ್ಯಾಲಯದ ಆಡಳಿತ ಮಂಡಳಿ ಚೇರ್‌ಮನ್ ದೇವೇಂದ್ರಪ್ಪ ಬಳೂಟಗಿ, ಜಗದೀಶ ಜಿ.ಎಚ್, ರವೀಂದ್ರನಾಥ ದೊಡ್ಡಮೇಟಿ, ಎನ್.ಆರ್. ಗೌಡರ, ಎಂ.ಎಸ್. ಧಡೇಸೂರಮಠ, ಪ್ರಾಚಾರ್ಯ ಎಸ್.ಎಂ. ಪಾಟೀಲ್, ವೈ.ಸಿ. ಪಾಟೀಲ, ಎ.ಪಿ. ಗಾಣಿಗೇರ, ಸಿ.ಎಂ. ಹಿರೇಮಠ, ಮಹಾಂತಯ್ಯ ಹಿರೇಮಠ, ವಿಶ್ವನಾಥ ಕನ್ನೂರ, ಮಹಾಂತೇಶ ಅಗಸಿಮುಂದಿನ, ವಿರೇಶ ಬಂಗಾರಶೆಟ್ಟರ, ಮಹಾಂತೇಶ ಅರಳಲೆಮಠ, ಭೀಮನಗೌಡ ಜಾಲಿಹಾಳ, ಶರಣಪ್ಪ ಕುಡತಿನಿ, ಅಂದಪ್ಪ ಬೀಳಗಿ, ಅಭಿಷೇಕಗೌಡ ಮಾಲಿಪಾಟೀಲ ಇದ್ದರು.

Share this article