ವಿದ್ಯಾರ್ಥಿಗಳ ಸಾಧನೆಗೆ ಪಾಲಕರ, ಶಿಕ್ಷಕರ ಶ್ರಮ ಮುಖ್ಯ

KannadaprabhaNewsNetwork |  
Published : Jun 03, 2026, 02:30 AM IST
ಫೋಟೊ 02 ಎಚ್,ಎನ್,ಎಮ್ 03  : ಹನುಮಸಾಗರ ಸಮೀಪದ ನಿಲೋಗಲ್ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕುರಿತು ಶಾಸಕ ದೊಡ್ಡಗೌಡ ಪಾಟೀಲ್ ಮಾತನಾಡಿದರು.    ಫೋಟೊ 02 ಎಚ್,ಎನ್,ಎಮ್ 03ಬಿ  :  ಹನುಮಸಾಗರ ಸಮೀಪದ ನಿಲೋಗಲ್ ಗ್ರಾಮದಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಇದು ವಿದ್ಯಾರ್ಥಿಗಳ ಜೀವನ ರೂಪಿಸುವ ಮೊದಲ ಮೆಟ್ಟಿಲು. ಶಿಕ್ಷಣದ ಮಹತ್ವ ವಿದ್ಯಾರ್ಥಿಗಳು ಗುರಿ ಮುಟ್ಟುವ ಮೂಲಕ ಸಾಗಬೇಕು

ಹನುಮಸಾಗರ: ವಿದ್ಯಾರ್ಥಿಗಳು ಮುಂದಿನ ಭವಿಷ್ಯದಲ್ಲಿ ಆತ್ಮವಿಶ್ವಾಸ ಹೆಚ್ಚಿಸುವ ಉದ್ದೇಶದಿಂದ ಸನ್ಮಾನ ನೆರವೇರಿಸಲಾಗುತ್ತದೆ ಎಂದು ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿದರು.

ಸಮೀಪದ ನಿಲೋಗಲ್ ಗ್ರಾಮದಲ್ಲಿ ಹನುಮನಾಳ ಹೋಬಳಿ ವ್ಯಾಪ್ತಿಯಲ್ಲಿ ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು ಕರವೇ ಘಟಕದಿಂದ ಸನ್ಮಾನ ಹಾಗೂ ಮುಂದಿನ ಭವಿಷ್ಯ ಗುರಿಗೆ ಪ್ರೋತ್ಸಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇದು ವಿದ್ಯಾರ್ಥಿಗಳ ಜೀವನ ರೂಪಿಸುವ ಮೊದಲ ಮೆಟ್ಟಿಲು. ಶಿಕ್ಷಣದ ಮಹತ್ವ ವಿದ್ಯಾರ್ಥಿಗಳು ಗುರಿ ಮುಟ್ಟುವ ಮೂಲಕ ಸಾಗಬೇಕು.ಇದರಲ್ಲಿ ಪೋಷಕರ ಹಾಗೂ ಶಿಕ್ಷಕರ ಶ್ರಮವು ಮುಖ್ಯವಾಗಿದೆ ಎಂದರು.

ಉಪನ್ಯಾಸಕ ಸಂಜಯ ಬಡಿಗೇರ, ರವೀಂದ್ರ ವಡ್ಡರ, ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ಗಾಜಿ, ಭೀಮನಗೌಡ ಪಾಟೀಲ್, ಭರಮಪ್ಪ ವಡ್ಡರ, ರಾಮಣ್ಣ ಗುಜ್ಜಲ, ಮುದಿಯಪ್ಪ ವಡ್ಡರ, ಚಂದಪ್ಪ ಹೊಟ್ಟಿ,ರಂಗಪ್ಪ ಮಿಟ್ಲಕೋಡ್, ಧರ್ಮಣ್ಣ ಗುಜ್ಜಲ, ಹೊರಗೊಪ್ಪ ವಡ್ಡರ, ಶೇಖಪ್ಪ ವಡ್ಡರ, ನಾಗೇಶ ವಡ್ಡರ, ಮಲ್ಲು ಗಾಜಿ, ಪ್ರಾಥಮಿಕ, ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಿಷ್ಠೆ ಇದ್ದರೆ ಯಶಸ್ವಿ ಉದ್ಯಮ ಸಾಧ್ಯ: ಅಬೀದ್ ಗದ್ಯಾಳ
ಆನಂದಶರದಿ ಪಾರಮಾರ್ಥಿಕ ಸಾಧನೆಗೆ ಪ್ರೇರಣೆಯಾಗಲಿ: ಕೃಷ್ಣಾಪುರ ಶ್ರೀ