ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ ಯದ್ವಾತದ್ವಾ ದಂಡ

KannadaprabhaNewsNetwork |  
Published : Dec 28, 2024, 12:46 AM IST
ಪೋಟೋ೨೭ಸಿಎಲ್‌ಕೆ೨ ಚಳ್ಳಕೆರೆ ನಗರ ನೆಹರೂ ವೃತ್ತದಲ್ಲಿ ವಾಹನಸವಾರರಿಗೆ ಠಾಣಾ ಇನ್ಸ್ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಎಚ್ಚರಿಕೆ ನೀಡಿದರು. | Kannada Prabha

ಸಾರಾಂಶ

ಚಳ್ಳಕೆರೆ ನಗರದ ನೆಹರೂ ವೃತ್ತದಲ್ಲಿ ವಾಹನಸವಾರರಿಗೆ ಠಾಣಾ ಇನ್ಸಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಎಚ್ಚರಿಕೆ ನೀಡಿದರು.

ಕನ್ನಡಪ್ರಭವಾರ್ತೆ ಚಳ್ಳಕೆರೆ

ನೆಹರೂ ವೃತ್ತದ ಸುತ್ತಮುತ್ತ ಅಡ್ಡಾದಿಡ್ಡಿ ವಾಹನ ನಿಲ್ಲಿಸಿದರೆ ಯದ್ವಾತದ್ವಾ ದಂಡ ಕಟ್ಟಬೇಕಾಗುತ್ತದೆ ಎಂದು ಇನ್ಸಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ವಾಹನ ಸವಾವವರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದ ಮಧ್ಯಭಾಗದಲ್ಲಿ ಹಾದುಹೋಗಿರುವ ಎರಡೂ ರಾಷ್ಟ್ರೀಯ ಹೆದ್ದಾರಿಗಳು ನಿತ್ಯ ಅಧಿಕ ಸಂಖ್ಯೆಯ ವಾಹನ ಸಂಚಾರ ಹಾಗೂ ಜನಸಂದಣಿಯಿಂದ ತುಂಬಿರುತ್ತದೆ. ವಿಶೇಷವಾಗಿ ಬಳ್ಳಾರಿ, ಪಾವಗಡ ರಸ್ತೆಯಲ್ಲಿ ಸಂಚಾರ ಮಾಡುವುದೇ ಕಷ್ಟವಾಗಿರುವಾಗ ನೆಹರೂ ವೃತ್ತದ ಸುತ್ತಲೂ ಎಲ್ಲಂದರಲ್ಲಿ ದ್ವಿಚಕ್ರ ಹಾಗೂ ಕಾರುಗಳನ್ನು ನಿಲ್ಲಿಸುವದರಿಂದ ಸಾರ್ವಜನಿಕರು, ವಾಹನ ಸವಾರರು ತೊಂದರೆಗೀಡಾಗಿದ್ದಾರೆ. ಈ ಹಿನ್ನೆಲೆ ಅನೇಕ ಬಾರಿ ಪೊಲೀಸ್ ಇಲಾಖೆ ಸಮಸ್ಯೆಗಳ ಬಗ್ಗೆ ಪತ್ರಿಕೆ ಮೂಲಕ ಮಾಹಿತಿ ನೀಡಲಾಗಿತ್ತು.

ನಗರದ ನಾಗರೀಕರು ಹಾಗೂ ವಾಹನ ಸವಾರರು ಪ್ರತಿನಿತ್ಯ ಎದುರಿಸುತ್ತಿರುವ ತೊಂದರೆಗಳ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ರಕ್ಷಣಾಧಿಕಾರಿ ರಂಜಿತ್‌ಕುಮಾರ್ ಬಂಡಾರು, ಹೆಚ್ಚುವರಿ ರಕ್ಷಣಾಧಿಕಾರಿ ಕುಮಾರಸ್ವಾಮಿ, ಡಿವೈಎಸ್‌ಪಿ ಟಿ.ಬಿ.ರಾಜಣ್ಣ ಮಾರ್ಗದರ್ಶನದಲ್ಲಿ ಠಾಣಾ ಇನ್ಸ್‌ಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಹಾಗೂ ಸಿಬ್ಬಂದಿ ವರ್ಗ ರಸ್ತೆಗೆ ಅಡ್ಡಲಾಗಿ ನಿಲ್ಲಿಸಿದ ವಾಹನಗಳಿಗೆ ಲಾಕ್ ಮಾಡಿ ಅಧಿಕ ದಂಡ ವಿಧಿಸುವ ಕಾರ್ಯವನ್ನು ಕಳೆದ ಎರಡು ದಿನಗಳಿಂದ ಕೈಗೊಂಡಿದ್ದಾರೆ.

ಈ ಕುರಿತು ಠಾಣಾ ಇನ್ಸಪೆಕ್ಟರ್ ರಾಜಫಕೃದ್ದೀನ್ ದೇಸಾಯಿ ಮಾತನಾಡಿ, ಸಾರ್ವಜನಿಕರ ಅನುಕೂಲಕ್ಕಾಗಿ ಪೊಲೀಸ್ ಇಲಾಖೆ ನೆಹರೂ ವೃತ್ತದಲ್ಲಿ ಎಲ್ಲಂದರಲ್ಲಿ ನಿಲುಗಡೆ ಮಾಡುವ ವಾಹನ ಸವಾರರಿಗೆ ಶಾಕ್ ಮುಟ್ಟಿಸುವ ಕೆಲಸ ಮಾಡಲಾಗುತ್ತಿದೆ. ಮೊದಲ ಹಂತದಲ್ಲಿ ಕೇವಲ ವಾಹನ ಒಂದಕ್ಕೆ500 ರು. ದಂಡ ವಿಧಿಸಿ ಎಚ್ಚರಿಕೆ ನೀಡಲಾಗುವುದು. ತದನಂತರ ಅದೇ ವಾಹನ ಸಿಕ್ಕರೆ ಅಧಿಕ ದಂಡ ವಿಧಿಸಲಾಗುವುದು. ದಯಮಾಡಿ ವಾಹನ ಸವಾರರು ತಮ್ಮ ವಾಹನಗಳನ್ನು ಸಾರ್ವಜನಿಕರ ರಸ್ತೆಯಿಂದ ದೂರದಲ್ಲಿ ನಿಲುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ವೇಳೆ ಸಬ್‌ ಇನ್ಸಪೆಕ್ಟರ್ ಧರೆಪ್ಪ ಬಾಳಪ್ಪ ದೊಡ್ಡಮನಿ, ಎಎಸ್‌ಐ ಮಂಜುನಾಥ, ಶಿವಣ್ಣ, ನಾಗೇಂದ್ರಪ್ಪ, ಪೇದೆಗಳಾದ ತಿಲಕ್, ಶಂಕರ, ಪರಶುರಾಮ, ರಂಗಸ್ವಾಮಿ ಮುಂತಾದವರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ