ರಾಮನಗರ: ಹಿಂದಿನ ಕನಕಪುರ ಸಂಸತ್ ಕ್ಷೇತ್ರದಲ್ಲಾಗಲಿ ಅಥವಾ ಈಗಿನ ಬೆಂಗಳೂರು ಗ್ರಾಮಾಂತರ ಸಂಸತ್ ಕ್ಷೇತ್ರದಲ್ಲಾಗಲಿ ಈವರೆಗೆ ನಡೆದಿರುವ ಚುನಾವಣೆಗಳಲ್ಲಿ ಯಾವ ಅಭ್ಯರ್ಥಿಯಿಂದಲೂ ಕಾಂಗ್ರೆಸ್ ನ ಸಿ.ಕೆ. ಜಾಫರ್ ಷರೀಫ್ ಅವರ ದಾಖಲೆ ಮುರಿಯಲು ಸಾಧ್ಯವೇ ಆಗಿಲ್ಲ.
ಕ್ಷೇತ್ರದ ಚೊಚ್ಚಲ ಸಂಸದರಾಗಿದ್ದ ಎಂ.ವಿ. ರಾಜಶೇಖರನ್ ಕಾಂಗ್ರೆಸ್ ತೊರೆದು ನ್ಯಾಷನಲ್ ಕಾಂಗ್ರೆಸ್ ಓರಿಜಿನಲ್ (ಎನ್ ಸಿಒ) ಪಕ್ಷದಿಂದ ಕಣಕ್ಕಿಳಿದರೆ, ಸಿ.ಕೆ. ಜಾಫರ್ ಷರೀಫ್ ಕಾಂಗ್ರೆಸ್ ನ ಹುರಿಯಾಳು ಆಗಿದ್ದರು. ಪಕ್ಷೇತರರಾಗಿ ಅಬ್ದುಲ್ ರಶೀದ್ ಸ್ಪರ್ಧೆ ಮಾಡಿದ್ದರು.
ಕ್ಷೇತ್ರದಲ್ಲಿ ಒಟ್ಟು 4,84,298 ಮತದಾರರಲ್ಲಿ 3,13,659 ಮಂದಿ (ಶೇ.64.77) ಮತ ಚಲಾಯಿಸಿದ್ದರು. ಇದರಲ್ಲಿ 3,05,086 ಮತಗಳು ಮಾತ್ರ ಮಾನ್ಯಗೊಂಡಿದ್ದವು. ಇದರಲ್ಲಿ ಸಿ.ಕೆ. ಜಾಫರ್ ಷರೀಫ್ - 2,43,987 (ಶೇ.79.97), ಎಂ.ವಿ. ರಾಜಶೇಖರನ್ - 57,468 (ಶೇ.18.84) ಹಾಗೆಯೇ ಅಬ್ದುಲ್ ರಷೀದ್ - 3631 (ಶೇ.1.19) ಮತಗಳು ಲಭಿಸಿದ್ದವು.ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ಚುನಾವಣೆಯಲ್ಲಿ ಸಿ.ಕೆ. ಜಾಫರ್ ಷರೀಫ್ ಅವರು ಪ್ರತಿಸ್ಪರ್ಧಿ ಎಂ.ವಿ. ರಾಜಶೇಖರನ್ ವಿರುದ್ಧ 1,86,519 (ಶೇ.61.14) ಭಾರೀ ಮತಗಳ ಅಂತರದಿಂದ ಜಯ ಸಾಸಿದರು. ಈ ಗೆಲುವು ದಾಖಲೆಯಾಗಿಯೇ ಇತಿಹಾಸದ ಪುಟದಲ್ಲಿ ಉಳಿದಿದೆ.
ಕನಕಪುರ ಲೋಕಸಭಾ ಕ್ಷೇತ್ರ ರಚನೆಯಾಗಿದ್ದು 1967ರಲ್ಲಿ. ಇಲ್ಲಿ ಮೊದಲ ಬಾರಿಗೆ ಸಂಸದರಾಗಿ ಕಾಂಗ್ರೆಸ್‌ನ ಎಂ.ವಿ. ರಾಜಶೇಖರನ್ ಆಯ್ಕೆಯಾಗಿದ್ದರು. ಈ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ಸ್ಟೇಟ್ ಪಾರ್ಟಿಯಿಂದ ಬಿ.ಕೆ. ಪುಟ್ಟರಾಮಯ್ಯ ಸೇರಿ 6 ಮಂದಿ ಕಣದಲ್ಲಿದ್ದರು.
1989 ರ ಚುನಾವಣೆಯಲ್ಲಿ ಕಾಂಗ್ರೆಸ್ ನ ಎಂ.ವಿ. ಚಂದ್ರಶೇಖರ ಮೂರ್ತಿ 4,72,265 ಮತಗಳನ್ನು ಪಡೆದು ಪ್ರತಿಸ್ಪರ್ಧಿ ಜನತಾ ದಳದ ಸಿ.ನಾರಾಯಣ ಸ್ವಾಮಿ (2,17,044) ವಿರುದ್ಧ 2,55,221 (ಶೇ.28.64) ಮತಗಳ ಹೆಚ್ಚಿನ ಅಂತರದಿಂದ ಗೆಲವು ಸಾಸಿದ ಎರಡನೇ ಅಭ್ಯರ್ಥಿಯಾಗಿದ್ದಾರೆ. ಈ ಚುನಾವಣೆಯಲ್ಲಿ ಒಟ್ಟು 13,55,284ಮತದಾರರ ಪೈಕಿ 9,23,505 ಮತಗಳು ಚಲಾವಣೆಯಾಗಿ 8,91,182 ಮತಗಳು ಮಾನ್ಯಗೊಂಡಿದ್ದವು.
ಬಾಕ್ಸ್............
ಈಗಿನ ಬೆಂಗಳೂರು ಗ್ರಾಮಾಂತರ ಕ್ಷೇತ್ರ 2008ರ ಕ್ಷೇತ್ರ ಪುನರ್ ವಿಂಗಡಣೆ ಸಂದರ್ಭ ರಚನೆಯಾಯಿತು. ಅದಕ್ಕೂ ಮುನ್ನ ರಾಮನಗರ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳು (ಹಿಂದಿನ ಸಾತನೂರು ಕ್ಷೇತ್ರವನ್ನೂ ಒಳಗೊಂಡು), ಬೆಂಗಳೂರಿನ ಉತ್ತರಹಳ್ಳಿ, ಆನೇಕಲ್ ಹಾಗೂ ಮಂಡ್ಯ ಜಿಲ್ಲೆಯ ಮಳವಳ್ಳಿ ವಿಧಾನಸಭಾ ಕ್ಷೇತ್ರವನ್ನು ಒಳಗೊಂಡ ಕನಕಪುರ ಲೋಕಸಭಾ ಕ್ಷೇತ್ರವು ಅಸ್ತಿತ್ವದಲ್ಲಿ ಇತ್ತು. ದೇಶದಲ್ಲಿಯೇ ಅತಿದೊಡ್ಡ ಲೋಕಸಭಾ ಕ್ಷೇತ್ರ ಎಂಬ ಖ್ಯಾತಿ ಇದರದ್ದಾಗಿತ್ತು.
ಗೆದ್ದ ಅಭ್ಯರ್ಥ.
ಲಭಿಸಿದ ಮ.
ಗೆಲುವಿನ ಅಂತರ ಶೇಕಡವಾರು196.
ಎಂ.ವಿ. ರಾಜಶೇಖರನ್ (ಕಾಂಗ್ರೆಸ್.2,66,38.
1,21,39.18.09%
197.ಸಿ.ಕೆ. ಜಾಫರ್ ಷರೀಫ್ (ಕಾಂಗ್ರೆಸ್.
3,05,08.2,43,98.
61.14%197.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.4,07,45.
1,92,1.1.14%
198.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
4,72,34.2,52,38.
27.21%198.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.6,38,72.
3,05,21.1.10%
198.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
8,91,18.4,72,26.
28.64%199.
ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.7,92,83.
3,01,45.4.22%
199.ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್.
10,45,91.4,40,44.
10.27%199.
ಎಂ.ಶ್ರೀನಿವಾಸ್(ಬಿಜೆಪಿ.12,06,04.
4,70,38.1.36%
19.ಎಂ.ವಿ.ಚಂದ್ರಶೇಖರ ಮೂರ್ತಿ(ಕಾಂಗ್ರೆಸ್.
2,33,82.5,32,91.
2.76%200.
ತೇಜಸ್ವಿನಿ ರಮೇಶ್(ಕಾಂಗ್ರೆಸ್.15,52,41.
5,83,92.7.51%
200.ಎಚ್.ಡಿ. ಕುಮಾರಸ್ವಾಮಿ(ಜೆಡಿಎಸ್.
19,04,13.4,93,30.
27.25%201.
ಡಿ.ಕೆ. ಸುರೇಶ್(ಕಾಂಗ್ರೆಸ್.21,90,39.
6,52,72.16.02 %
201.ಡಿ.ಕೆ. ಸುರೇಶ್(ಕಾಂಗ್ರೆಸ್.
16,21,90.8,78,25.
12.7524ಕೆಆರ್ ಎಂಎನ್ 1,2,3ಜೆಪಿಜಿ
1.ಸಿ.ಕೆ.ಜಾಫರ್ ಷರೀಫ್2.ಎಂ.ವಿ.ಚಂದ್ರಶೇಖರ ಮೂರ್ತಿ
3.ಎಚ್ .ಡಿ.ಕುಮಾರಸ್ವಾಮಿ