ವಿಭೂತಿಕೆರೆ ಸೊಸೈಟಿ ಅಧ್ಯಕ್ಷರಾಗಿ ಪಾರ್ಥ ಆಯ್ಕೆ

KannadaprabhaNewsNetwork | Published : Feb 2, 2024 1:03 AM

ಸಾರಾಂಶ

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ. ಪಾರ್ಥ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಡಿ. ರಮೇಶ್ ಸ್ಪರ್ಧಿಸಿದ್ದರು. ರಮೇಶ್ 4 ಮತ ಪಡೆದರೆ ಕೆ. ಪಾರ್ಥ 8 ಮತ ಪಡೆದು ಗೆಲುವು ಸಾಧಿಸಿದರು.

ಕನ್ನಡಪ್ರಭ ವಾರ್ತೆ ರಾಮನಗರ

ತಾಲೂಕಿನ ವಿಭೂತಿಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಕೆ.ಪಾರ್ಥ ಗುರುವಾರ ನಡೆದ ಚುನಾವಣೆಯಲ್ಲಿ ಆಯ್ಕೆಯಾಗಿದ್ದಾರೆ.

ಈ ಹಿಂದೆ ಅಧ್ಯಕ್ಷರಾಗಿದ್ದ ಶಿವಕುಮಾರಸ್ವಾಮಿಯ ರಾಜೀನಾಮೆಯಿಂದ ತೆರೆವಾದ ಸ್ಥಾನಕ್ಕೆ ಚುನಾವಣೆ ನಡೆಯಿತು. ಆಡಳಿತ ಮಂಡಳಿಯ 13 ಸದಸ್ಯ ಬಲ ಹೊಂದಿರುವ ಸಂಘದಲ್ಲಿ ಚುನಾವಣೆಯಲ್ಲಿ ಒಬ್ಬರು ಗೈರಾಗಿ 12 ಸದಸ್ಯರು ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಕೆ. ಪಾರ್ಥ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿ ಡಿ. ರಮೇಶ್ ಸ್ಪರ್ಧಿಸಿದ್ದರು. ರಮೇಶ್ 4 ಮತ ಪಡೆದರೆ ಕೆ. ಪಾರ್ಥ 8 ಮತ ಪಡೆದು ಗೆಲುವು ಸಾಧಿಸಿದರು.

ನೂತನ ಅಧ್ಯಕ್ಷ ಕೆ. ಪಾರ್ಥ ಅವರನ್ನು ಮಾಜಿ ಶಾಸಕ ಕೆ. ರಾಜು, ಬಿಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಯರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷ ಭದ್ರಯ್ಯ ಮತ್ತಿತರರು ಅಭಿನಂದಿಸಿದರು. ಇದೇ ಸಂದರ್ಭದಲ್ಲಿ ಜೆಡಿಎಸ್ ಸದಸ್ಯ ರಾಜು ಎಂಬುವರು ಮಾಜಿ ಶಾಸಕ ಕೆ. ರಾಜು ಸಮ್ಮುಖದಲ್ಲಿ ಕಾಂಗ್ರೆಸ್ ಸೇರ್ಪಡೆಯಾದರು.

ನೂತನ ಅಧ್ಯಕ್ಷ ಕೆ. ಪಾರ್ಥ ಮಾತನಾಡಿ, ಸಂಘದ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಸ್ಪಂದಿಸಿ ರೈತರಿಗೆ ಸಕಾಲದಲ್ಲಿ ರಸ ಗೊಬ್ಬರ ಸಿಗುವ ವ್ಯವಸ್ಥೆ ಸೇರಿ ಹೆಚ್ಚಿನ ಕೃಷಿ ಸಾಲ, ಸ್ತ್ರೀಶಕ್ತಿ ಮತ್ತು ಮಹಿಳಾ ಸ್ವಸಹಾಯ ಸಂಘದ ಸದಸ್ಯರಿಗೆ ಸಾಲ ಸೌಲಭ್ಯ ನೀಡುವ ಮೂಲಕ ಜನಸ್ನೇಹಿಯಾಗಿ ಸಂಘವನ್ನು ಮತ್ತಷ್ಟು ಅಭಿವೃದ್ಧಿಪಡಿಸಲಾಗುತ್ತದೆ ಎಂದು ತಿಳಿಸಿದರು.

ಗ್ರಾಪಂ ಅಧ್ಯಕ್ಷ ರಂಗಸ್ವಾಮಿ, ಅರಣ್ಯ ಇಲಾಖೆ ಮಾಜಿ ನಿರ್ದೇಶಕ ನರಸಿಂಹಯ್ಯ, ಕುಂಭಾಪುರ ಕಾಲೋನಿ ಕೃಷ್ಣಪ್ಪ, ವಿಭೂತಿಕೆರೆ ಡೇರಿ ಎಂ. ಮಹೇಶ್, ಸಂಘದ ಉಪಾಧ್ಯಕ್ಷ ಕುಮಾರಸ್ವಾಮಿ, ನಿರ್ದೇಶಕರಾದ ಶಿವಕುಮಾರ ಸ್ವಾಮಿ, ಶ್ರೀನಿವಾಸಯ್ಯ ವಾಸು, ಟಿ. ಚಂದ್ರಪ್ಪ, ರಾಜು, ಚಂದ್ರಮ್ಮ, ನಗರಸಭಾ ಉಪಾಧ್ಯಕ್ಷ ಸೋಮಶೇಖರ್, ಸದಸ್ಯ ಮುತ್ತರಾಜು, ಸಿಇಓ ಶಾಂತಕುಮಾರ್, ಮೇಲ್ವೀಚಾರಕ ಚೇತನ್ ಕುಮಾರ್ , ಮುಖಂಡರಾದ ಅಂಕಪ್ಪ, ಗೋವಿಂದರಾಜು, ಸೋಮಶೇಖರ್, ಕಿರಣ್ ಹಾಜರಿದ್ದರು.

Share this article