ಯೋಗಾಸನ ಸ್ಪರ್ಧೆ: ಡಾ.ಎಸ್ಸೆಸ್ ಸ್ಕೂಲ್ ವಿದ್ಯಾರ್ಥಿಗಳಿಗೆ ಬಹುಮಾನ

KannadaprabhaNewsNetwork |  
Published : Feb 02, 2024, 01:03 AM IST
ಕ್ಯಾಪ್ಷನಃ1ಕೆಡಿವಿಜಿ33ಃಪುಣೆಯಲ್ಲಿ ನಡೆದ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಕರ್ನಾಟಕ ತಂಡದಿಂದ ದಾವಣಗೆರೆಯ ಡಾ.ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಸ್ಕೂಲ್‌ನ ಯೋಗ ವಿದ್ಯಾರ್ಥಿಗಳು  ಭಾಗವಹಿಸಿ ಬಹುಮಾನ ಗಳಿಸಿದ್ದಾರೆ. | Kannada Prabha

ಸಾರಾಂಶ

ನಗರದ ಡಾ.ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಸ್ಕೂಲ್‌ನ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ ಬಹುಮಾನ ಗಳಿಸಿ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 8-10 ವರ್ಷದ ಬಾಲಕಿಯರ ವಿಭಾಗದಲ್ಲಿ ಭೂಮಿ ಆರ್.ರಾಥೋಡ್ ಪ್ರಥಮ ಸ್ಥಾನ ಚಿನ್ನದ ಪದಕ, ಮೇಧಾ ಪಾಟೀಲ್ ದ್ವಿತೀಯ ಸ್ಥಾನ ಬೆಳ್ಳಿ ಪದಕ ಪಡೆದಿದ್ದಾರೆ.

ದಾವಣಗೆರೆ: ಪುಣೆಯ ಇಂಡಿಯನ್ ಯೂಥ್ ಸ್ಪೋರ್ಟ್ಸ್ ಅಸೋಸಿಯೇಷನ್‌ನಿಂದ ಇತ್ತೀಚೆಗೆ ವೆಲ್ಫೇರ್ ಸ್ಪೋರ್ಟ್ಸ್ ಅಸೋಸಿಯೇಷನ್ ಸಭಾಂಗಣದಲ್ಲಿ ನಡೆದ ರಾಷ್ಟ್ರಮಟ್ಟದ ಯೂತ್ ಗೇಮ್ಸ್ 2023-24ರ ರಾಷ್ಟ್ರಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ನಗರದ ಡಾ.ಶಾಮನೂರು ಶಿವಶಂಕರಪ್ಪ ನ್ಯಾಷನಲ್ ಸ್ಕೂಲ್‌ನ ಯೋಗ ವಿದ್ಯಾರ್ಥಿಗಳು ಭಾಗವಹಿಸಿದ ಬಹುಮಾನ ಗಳಿಸಿ ರಾಜ್ಯಕ್ಕೆ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ. 8-10 ವರ್ಷದ ಬಾಲಕಿಯರ ವಿಭಾಗದಲ್ಲಿ ಭೂಮಿ ಆರ್.ರಾಥೋಡ್ ಪ್ರಥಮ ಸ್ಥಾನ ಚಿನ್ನದ ಪದಕ, ಮೇಧಾ ಪಾಟೀಲ್ ದ್ವಿತೀಯ ಸ್ಥಾನ ಬೆಳ್ಳಿ ಪದಕ, 10-12 ವರ್ಷದವರ ವಿಭಾಗದಲ್ಲಿ ಎನ್.ತನುಶ್ರೀ ಮತ್ತು ಪೂನಂ ವಿ.ಭಟ್ ಪ್ರಥಮ ಸ್ಥಾನ ಚಿನ್ನದ ಪದಕ, ರಿಷಿಕಾ ಪಾಟೀಲ್ ತೃತೀಯ ಸ್ಥಾನ ಕಂಚಿನ ಪದಕ, 14-16 ವರ್ಷದ ವಿಭಾಗದಲ್ಲಿ ಎಂ.ಎನ್.ವರ್ಷಿತಾ ದ್ವಿತೀಯ ಸ್ಥಾನ, ಬೆಳ್ಳಿ ಪದಕ ಹಾಗೂ ಬಾಲಕರ ವಿಭಾಗದಲ್ಲಿ ಆರ್.ಎಂ.ಸೌರಭ ಪ್ರಥಮ ಸ್ಥಾನ, ಚಿನ್ನದ ಪದಕ ಸಮಗ್ರವಾಗಿ ಪಡೆದು ಕರ್ನಾಟಕ ತಂಡದ ಪ್ರಶಸ್ತಿ ಪಡೆದಿದ್ದಾರೆ. ಈ ವಿದ್ಯಾರ್ಥಿಗಳಿಗೆ ಶಾಲೆ ಚೇರ್ಮನ್ ಎಸ್.ಎಸ್.ಗಣೇಶ, ಶಾಲೆಗಳ ಮುಖ್ಯಸ್ಥ ಮಂಜುನಾಥ ಗಂಗರಾಜು, ಪ್ರಾಚಾರ್ಯರಾದ ಕಮಲ್, ಯೋಗ ಶಿಕ್ಷಕ ಡಾ.ಸ್ವಪ್ನ, ಶಿಕ್ಷಕರು ಅಭಿನಂದಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಮಸ್ಯೆ ಬಗೆಹರಿದ್ರೆ 6 ತಿಂಗಳಲ್ಲಿ 1 ಲಕ್ಷ ನೇಮಕಾತಿ : ಸಾರಿಗೆ ಸಚಿವ
ಸರ್ಕಾರದಿಂದ ಮಹತ್ವದ ನಿರ್ಧಾರ : ವಿಪತ್ತು ವೇಳೆ ಇಡೀ ಊರಿನ ರೈತರಿಗೆ ಪರಿಹಾರ