ಚಾಮರಾಜನಗರದಲ್ಲಿ ಪಾರ್ಥೇನಿಯಂ ಕಳೆ ನಿರ್ವಹಣೆ ಜಾಗೃತಿ ಜಾಥಾ

KannadaprabhaNewsNetwork |  
Published : Aug 23, 2024, 01:00 AM IST
ಪಾರ್ಥೇನಿಯಂ ಕಳೆ ನಿರ್ವಹಣೆ ಜಾಗೃತಿ ಜಾಥಾ | Kannada Prabha

ಸಾರಾಂಶ

ಹೊಲದಲ್ಲಿನ ಪಾರ್ಥೇನಿಯಂ ಗಿಡಗಳನ್ನು ಹೂ ಬಿಡುವ ಮುನ್ನ ಉಳುಮೆ ಮುಖಾಂತರ ಮಣ್ಣಿಗೆ ಸೇರಿಸಿದರೆ ಮಣ್ಣಿನ ಪಲವತ್ತತೆ ವೃದ್ಧಿಸುತ್ತದೆ ಎಂದು ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪಿ.ಪ್ರಕಾಶ್ ಅವರು ಸಲಹೆ ನೀಡಿದರು. ಚಾಮರಅಜನಗರದಲ್ಲಿ ಆಯೋಜಿಸಿದ್ದ ಪಾರ್ಥೇನಿಯಂ ಕಳೆ ನಿರ್ವಹಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಹೊಲದಲ್ಲಿನ ಪಾರ್ಥೇನಿಯಂ ಗಿಡಗಳನ್ನು ಹೂ ಬಿಡುವ ಮುನ್ನ ಉಳುಮೆ ಮುಖಾಂತರ ಮಣ್ಣಿಗೆ ಸೇರಿಸಿದರೆ ಮಣ್ಣಿನ ಪಲವತ್ತತೆ ವೃದ್ಧಿಸುತ್ತದೆ ಎಂದು ಕೃಷಿ ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ.ಪಿ.ಪ್ರಕಾಶ್ ಅವರು ಸಲಹೆ ನೀಡಿದರು.

ಚಾಮರಾಜನಗರ ಕೃಷಿ ಮಹಾವಿದ್ಯಾಲಯದ ಅಂತಿಮ ಬಿಎಸ್ಸಿ (ಹಾನರ್ಸ್) ಕೃಷಿ ವಿದ್ಯಾರ್ಥಿಗಳು ''''''''''''''''ಗ್ರಾಮೀಣ ಕೃಷಿ ಕಾರ್ಯಾನುಭವ ಶಿಬಿರ''''''''''''''''ದ ಅಂಗವಾಗಿ ಕಬ್ಬಹಳ್ಳಿ ಗ್ರಾಮದಲ್ಲಿ ''''''''''''''''ಗ್ರಾಮೀಣ ಸಹಭಾಗಿತ್ವ ಅಧ್ಯಯನ ಮುಖೇನ ಗ್ರಾಮೀಣ ಸಮೀಕ್ಷೆ'''''''''''''''' ಕಾರ್ಯದ ಅಂಗವಾಗಿ ಆಯೋಜಿಸಲಾಗಿದ್ದ ಪಾರ್ಥೇನಿಯಂ ಕಳೆ ನಿರ್ವಹಣೆ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಬೀದಿ ಬದಿ ಇರುವ ಪಾರ್ಥೇನಿಯಂ ಗಿಡಗಳನ್ನು ಹೂ ಬಿಡುವ ಮುನ್ನ ಕಾಂಪೋಸ್ಟ್‌ ಗೊಬ್ಬರ ತಯಾರಿಸುವಿಕೆಯಲ್ಲಿ ಬಳಸಬಹುದು. ಇದರಿಂದ ಉತ್ತಮ ಗೊಬ್ಬರ ವಾಗುವುದರೊಂದಿಗೆ ಪಾರ್ಥೇನಿಯಂ ಗಿಡಗಳ ನಿರ್ವಹಣೆ ಮಾಡಬಹುದು ಎಂದರು.

ಶಾಲಾ ಮಕ್ಕಳ ಜೊತೆಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಸುವ ಮೂಲಕ ಇತರೆ ಗ್ರಾಮಸ್ಥರಿಗೂ ಕೂಡ ಅರಿವು ಮೂಡಿಸಲಾಯಿತು. ಶಿಬಿರದ ಸಂಯೋಜಕ ಡಾ.ಜಿ.ನಾಗೇಶ್ ಮಾತನಾಡಿ, ಕೃಷಿ ಕ್ಷೇತ್ರದಲ್ಲಿ ಅನ್ವೇಷಣೆ ಹಾಗೂ ಅಧ್ಯಯನ ನಿಮಿತ್ತ ನಿಮ್ಮ ಗ್ರಾಮದಲ್ಲಿ ನೆಲೆಸಲಿರುವ ಕೃಷಿ ವಿದ್ಯಾರ್ಥಿಗಳಿಗೆ ಸಹಕಾರ ನೀಡುವಂತೆ ಮನವಿ ಮಾಡಿದರು.

ಶಾಲೆಯ ಮುಖ್ಯ ಶಿಕ್ಷಕ ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ಶಿಬಿರದ ಸಹ ಸಂಯೋಜಕ ಡಾ.ಎನ್, ಉಮಾಶಂಕರ್, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಧರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೋಗ ಬಾರದಂತೆ ತಡೆಯುವುದೇ ಆಯುರ್ವೇದದ ಶಕ್ತಿ
ಮೋದಿಯವರ 25 ವರ್ಷಗಳ ಜನಸೇವಾ ಪಯಣ ಪ್ರೇರಣಾದಾಯಕ