ಸಂವಿಧಾನ ಜಾಗೃತಿ ಜಾಥಾದಲ್ಲಿ ತಪ್ಪದೆ ಪಾಲ್ಗೊಳ್ಳಿ: ಪ್ರಕಾಶ ಕುದರಿ

KannadaprabhaNewsNetwork |  
Published : Feb 06, 2024, 01:35 AM ISTUpdated : Feb 06, 2024, 03:45 PM IST
ಚಿತ್ರ 5ಬಿಡಿಆರ್‌7ಬಸವಕಲ್ಯಾಣ ಹಾಗೂ ಹುಲಸೂರು ಪ್ರವೇಶಿಸಲಿರುವ ಸಂವಿಧಾನ ದಿನಾಚರಣೆ ಪ್ರಯುಕ್ತದ ಸಂವಿಧಾನ ಜಾಗೃತಿ ಜಾಥಾ ಕಾರ್ಯಕ್ರಮ ಸಿದ್ದತೆ ಕುರಿತಂತೆ ಸಹಾಯಕ ಆಯುಕ್ತ ಪ್ರಕಾಶ ಕುದರಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. | Kannada Prabha

ಸಾರಾಂಶ

ಎಲ್ಲಾ ಅಧಿಕಾರಿಗಳು ಸಂವಿಧಾನ ಜಾಗೃತಿ ಜಾಥಾದಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ಸಂವಿಧಾನ ಕುರಿತು ಎಲ್ಲರಿಗೆ ತಿಳಿ ಹೇಳುವ  ಕೆಲಸ  ಎಲ್ಲರೂ ನಿಷ್ಠೆಯಿಂದ ಮಾಡಬೇಕು ಕರ್ತವ್ಯ ಲೋಪವೆಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಆಯುಕ್ತರಾದ ಪ್ರಕಾಶ ಕುದರಿ ಎಚ್ಚರಿಸಿದರು.

ಕನ್ನಡಪ್ರಭ ವಾರ್ತೆ ಬಸವಕಲ್ಯಾಣ

ಎಲ್ಲಾ ಅಧಿಕಾರಿಗಳು ಸಂವಿಧಾನ ಜಾಗೃತಿ ಜಾಥಾದಲ್ಲಿ ತಪ್ಪದೆ ಪಾಲ್ಗೊಳ್ಳಬೇಕು. ಸಂವಿಧಾನ ಕುರಿತು ಎಲ್ಲರಿಗೆ ತಿಳಿ ಹೇಳುವ ಈ ಕೆಲಸ ಪವಿತ್ರ ಕೆಲಸವಾಗಿದ್ದು ಇದನ್ನು ಎಲ್ಲರೂ ನಿಷ್ಠೆಯಿಂದ ಮಾಡಬೇಕು ಕರ್ತವ್ಯ ಲೋಪವೆಸಗಿದವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಸಹಾಯಕ ಆಯುಕ್ತರಾದ ಪ್ರಕಾಶ ಕುದರಿ ಎಚ್ಚರಿಸಿದರು.

ಬಿಕೆಡಿಬಿ ಕಲ್ಯಾಣ ಮಂಟಪದಲ್ಲಿ ಸಂವಿಧಾನ ದಿನಾಚರಣೆ ಪ್ರಯುಕ್ತ ಸಂವಿಧಾನ ಜಾಗೃತಿ ಜಾಥಾ ಬಸವಕಲ್ಯಾಣ ಮತ್ತು ಹುಲಸೂರು ತಾಲೂಕಿನಲ್ಲಿ ಪ್ರವೇಶ ಮಾಡುತ್ತಿರುವ ಹಿನ್ನೆಲೆ ಹಮ್ಮಿಕೊಂಡಿದ್ದ ಸಿದ್ಧತಾ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹುಲಸೂರು ತಹಸೀಲ್ದಾರ್‌ ಶಿವಾನಂದ್ ಮೇತ್ರೆ ಮಾತನಾಡಿ, ಸಂವಿಧಾನದ ಮಹತ್ವ ಈ ಜಾಥಾ ಮುಖಾಂತರ ಸಾರ್ವಜನಿಕರಿಗೆ, ಮಕ್ಕಳಿಗೆ, ಹಾಗೂ ತಾಲೂಕಿನ ಸಮಸ್ಥ ಜನತೆಗೆ ಜಾಗೃತಿ ಮೂಡಿಸಲು ಹಮ್ಮಿಕೊಂಡ ಈ ಕಾರ್ಯಕ್ರಮವನ್ನು ಎಲ್ಲರೂ ಸೇರಿ ಯಶಸ್ವಿಗೊಳಿಸಬೇಕು. ಜಾತೀಯತೆ ನಿರ್ಮೂಲನೆಯಾಗಬೇಕು. ನಮ್ಮಲಿ ಸಮಾನತೆ ಮೂಡಬೇಕು ಎಂಬ ಸದುದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರಲ್ಲಿ ಎಲ್ಲಾ ಜಾತಿ ಧರ್ಮ ಭಾಷೆಯ ಎಲ್ಲಾ ಪಕ್ಷದ ನಾಯಕರು, ಸಮಾಜದ ಮುಖಂಡರು ಜನರು ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಕಾರ್ಯಕ್ರಮದ ಸದಸ್ಯ ಕಾರ್ಯದರ್ಶಿಗಳಾದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರಾದ ದಿಲೀಪಕುಮಾರ ಉತ್ತಮ್‌ ಅವರು ಸ್ವಾಗತಿಸಿ ಪ್ರಸ್ತಾವಿಕವಾಗಿ ಮಾತನಾಡಿ, ಜಾಥಾ ಬಸವಕಲ್ಯಾಣ ಮತ್ತು ಹುಲಸೂರು ತಾಲೂಕಿನಲ್ಲಿ ಫೆ.15ರಿಂದ 21ರವರೆಗೆ ಎಲ್ಲಾ ಗ್ರಾಮ ಪಂಚಾಯಿತಿಯಲ್ಲಿ ಸಂಚರಿಸಲಿದ್ದು, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗವಹಿಸಿ ಜಾಥಾವನ್ನು ಯಶಸ್ವಿಗೊಳಿಸಬೇಕೆಂದು ತಿಳಿಸಿದರು.

ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಬಸವಕಲ್ಯಾಣ ತಹಸೀಲ್ದಾರ್‌ ಶಾಂತಗೌಡ ಬಿರಾದರ್, ತಾಪಂ ಇಒ ಮಹದೇವ್‌ ಬಾಬಳಗಿ ಸೇರಿದಂತೆ ತಾಲೂಕುಮಟ್ಟದ ಅಧಿಕಾರಿಗಳು, ಜಿಪಂ ಮಾಜಿ ಉಪಾಧ್ಯಕ್ಷೆ ಲತಾ ಹಾರಕೂಡೆ, ರವಿ ಗಾಯಕವಾಡ, ಮನೋಹರ ಮೈಸೆ, ಮನೋಜ ಮುಡಬಿಕರ, ಮಹಾದೇವ ಗಾಯಕವಾಡ, ಪ್ರಹ್ಲಾದ್‌ ಮೋರೆ, ನರಸಿಂಗ ಕಾಂಬಳೆ, ವಾಮನ್‌ ಮೈಸಲಗೆ ಮತ್ತಿತರರು ಹಾಜರಿದ್ದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ